ಕೊರೋನಾ ಹೊಡೆತದ ಬೆನ್ನಲ್ಲೇ ಓಲಾ, ಊಬರ್ ಹಾವಳಿ, ತುಮಕೂರು ಟ್ಯಾಕ್ಸಿ ಚಾಲಕರ ಪರದಾಟ!
ಕೊರೋನಾದಿಂದ ಟಾಕ್ಸಿ ಚಾಲಕರ ಬದಕು ಸಂಕಷ್ಟದಲ್ಲಿದೆ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ತುಮಕೂರು ಟ್ಯಾಕ್ಸಿ ಚಾಲಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಓಲಾ, ಉಬರ್ ಕಂಪನಿಗಳು ತುಮಕೂರಿನಲ್ಲಿ ನಿತ್ಯ ಸಂಚಾರ ಆರಂಭಿಸಿದೆ. ಹೀಗಾಗಿ ಬಾಡಿಗೆ ವಾಹನ ಇಟ್ಟುಕೊಂಡಿರುವ ಚಾಲಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ತುಮಕೂರು(ಅ.03): ಕೊರೋನಾದಿಂದ ಟಾಕ್ಸಿ ಚಾಲಕರ ಬದಕು ಸಂಕಷ್ಟದಲ್ಲಿದೆ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ತುಮಕೂರು ಟ್ಯಾಕ್ಸಿ ಚಾಲಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಓಲಾ, ಉಬರ್ ಕಂಪನಿಗಳು ತುಮಕೂರಿನಲ್ಲಿ ನಿತ್ಯ ಸಂಚಾರ ಆರಂಭಿಸಿದೆ. ಹೀಗಾಗಿ ಬಾಡಿಗೆ ವಾಹನ ಇಟ್ಟುಕೊಂಡಿರುವ ಚಾಲಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಓಲಾ-ಊಬರ್ ತುಮಕೂರಿನಲ್ಲಿ ಕಡಿಮೆ ವೆಚ್ಚದಲ್ಲಿ ಸೇವೆ ನೀಡುತ್ತಿದೆ. ಸ್ಥಳೀಯರಿಗೆ ಸಿಗುತಿದ್ದ ಬಾಡಿಗೆ, ದುಡಿಮೆ ಇಲ್ಲದೆ ಟ್ಯಾಕ್ಸಿ ಚಾಲಕರ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಓಲಾ, ಊಬರ್ ಕಾರು ಹಾವಳಿಯನ್ನು ತಡೆಯಲು ಸ್ಥಳೀಯರು ಮುಂದಾಗಿದ್ದಾರೆ.