Auto Expo 2023 ಭಾರತದಲ್ಲಿ ಐಷಾರಾಮಿ ಲೆಕ್ಸಸ್ RX SUV ಕಾರಿನ ಬುಕಿಂಗ್ ಆರಂಭ!

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲೆಕ್ಸಸ್ ಭಾರಿ ಗಮನಸೆಳೆಯುತ್ತಿದೆ. ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನ ಜೊತೆಗೆ ಇದೀಗ ಲೆಕ್ಸಸ್ RX SUV ಕಾರು ಅನಾವರಣ ಮಾಡಿದೆ. ಭಾರತದಲ್ಲಿ  RX ಕಾರಿನ ಬುಕಿಂಗ್ ಕೂಡ ಆರಂಭಗೊಂಡಿದೆ.

Share this Video
  • FB
  • Linkdin
  • Whatsapp

ನವದೆಹಲಿ(ಜ.13): ಐಷಾರಾಮಿ ಕಾರು ತಯಾರಕ ಕಂಪನಿ ಲೆಕ್ಸಸ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದೆ. ಲೆಕ್ಸಸ್ ಇದೀಗ ಭಾರತದ ಮಾರುಕಟ್ಟೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಇದಕ್ಕಾಗಿ ಲೆಕ್ಸಸ್ RX ಎಸ್‌ಯುವಿ ಕಾರನ್ನು ಭಾರತದಲ್ಲಿ ಅನಾವರಣ ಮಾಡಿದೆ. ದೆದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋದಲ್ಲಿ ಈ ಕಾರು ಅನಾವರಣಗೊಂಡಿದೆ. ಇದರ ಜೊತೆಗೆ ಬುಕಿಂಗ್ ಕೂಡ ಆರಂಭಿಸಲಾಗಿದೆ. ಆಡಿ Q7 ಹಾಗೂ ಮರ್ಸಡಿಸ್ ಬೆಂಜ್ GLS ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಲೆಕ್ಸಸ್ RX ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. RX350h ಲೆಕ್ಸಸ್ ಹೈಬ್ರಿಡ್ ಹಾಗೂ RX500h F ಸ್ಪೋರ್ಟ್ ಕಾರು ಲಭ್ಯವಿದೆ. ಈ ಕಾರಿನ ಕುರಿತ ಹೆಚ್ಚಿನ ವಿವರ ಈ ವಿಡಿಯೋದಲ್ಲಿದೆ.

Related Video