Asianet Suvarna News Asianet Suvarna News

ಜೀರೋ ಟು ಹೀರೋ: ‘ಬಿಂದು’ವಿನಿಂದ ಆರಂಭಿಸಿ ಬಂಧುವಾದ ಸತ್ಯಶಂಕರ್‌!

ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!

ಮಂಗಳೂರು(ಏ.18) ನಾವೇನು ಕುಬೇರನ ಮಕ್ಕಳಲ್ಲ. ನಾವಿರುವ ಈ ಹಳ್ಳಿಯಲ್ಲಿದ್ದು ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ಅಪ್ಪ ಆಸ್ತಿ ಮಾಡಿಟ್ಟಿದ್ರೆ ನಾನೂ ಮೆರೀತಾ ಇದ್ದೆ! ಇಂಥ ಗೊಣಗಾಟ ಅಪರೂಪ ಅಲ್ಲ. ಆದರೆ ಹೀಗೆ ಮಾತಾಡುವ ಬದಲು ತಳಮಟ್ಟದಿಂದ ಎದ್ದು ನಿಲ್ಲುತ್ತೇನೆ ಎನ್ನುವ ಛಲದಂಕ ಮಲ್ಲರಿಗೇನೂ ಕಮ್ಮಿಯಿಲ್ಲ. ಹಾಗೆ ಹೋರಾಡಿ ಗೆದ್ದವರ, ತಲೆಯೆತ್ತಿ ನಿಂತವರ, ತಮ್ಮ ಪರಿಸರವನ್ನೇ ಗೆದ್ದವರ ಕಥಾ ಸರಣಿ ಇದು. ಝೀರೋ ಟು ಹೀರೋ!

ಹಳ್ಳಿಯೊಂದರಲ್ಲಿ ಆಟೋ ಓಡಿಸುತ್ತಿದ್ದ ಯುವಕ, ದಿಲ್ಲಿಯಲ್ಲಿ ಕೂತವರ ಗಮನವನ್ನು ತನ್ನತ್ತ ಸೆಳೆದ ಕತೆ ಈ ಸಲದ ಯಶೋಗಾಥೆ. ಶೂನ್ಯದಿಂದ ಆರಂಭಿಸಿದ ಅವರ ಸಂಸ್ಥೆ ಇದೀಗ ಐನೂರು ಕೋಟಿ ರುಪಾಯಿ ವಹಿವಾಟು ನಡೆಸುವ ಬಿಸಿನೆಸ್‌ ಹೌಸ್‌. ತಡಕಜೆ ಎಂಬ ಪುಟ್ಟಗ್ರಾಮ ಇರುವುದು ಕರುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪ. ಈ ಪುಟ್ಟಗ್ರಾಮದ ಯುವಕ ಸತ್ಯಶಂಕರ್‌ ನಮ್ಮ ಕಥಾನಾಯಕ.

ಈ ಯುವಕ ಅಪ್ಪಟ ಮಹತ್ವಾಕಾಂಕ್ಷಿ. ಓದು ಅಷ್ಟಾಗಿ ತಲೆಗೆ ಹತ್ತದಿದ್ದರೂ ಏನಾದರೂ ದೊಡ್ಡದು ಸಾಧಿಸಬೇಕು ಎಂಬ ಛಲದಿಂದ ತನ್ನ ಕುಲಕ್ಕೆ ಒಗ್ಗದ ಕೆಲಸಕ್ಕೆ ಕೈ ಹಾಕುತ್ತಿದ್ದ ತರುಣ. ಓದಿಗಿಂತ ಕನಸು ದೊಡ್ಡದಾಗಿತ್ತು. ತನ್ನೂರಿನ ನೂರಾರು ಮಂದಿಗೆ ಕೆಲಸ ಕೊಡಬೇಕು ಎಂಬ ಆಶಯ ಮನದಲ್ಲಿತ್ತು. ಅದಕ್ಕಾಗಿ ಸತ್ಯಶಂಕರ ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಹುಡುಕಿದ ದಾರಿ ಒಂದೆರಡರಲ್ಲ. ಕೊನೆಗೂ ಅವರ ಧ್ಯೇಯೋದ್ದೇಶ ಈಡೇರಿದ್ದು ನೀರಿನಿಂದ. ನೀರಿನ ಋುಣ ಅಂದರೆ ಅದೇ ಅಲ್ಲವೇ!

Video Top Stories