ದೇಶದ ಶೇ.1 ಶ್ರೀಮಂತರ ಬಳಿ ಶೇ.70 ಮಂದಿಯ ನಾಲ್ಕು ಪಟ್ಟು ಸಂಪತ್ತು!

ಭಾರತದ 1 ಶೇಕಡಾ ಅತೀ ಶ್ರೀಮಂತ ವ್ಯಕ್ತಿಗಳು, ದೇಶದ 953 ಮಿಲಿಯನ್, ಅಂದರೆ ಜನಸಂಖ್ಯೆಯ ಶೇಕಡಾ 70 ಮಂದಿ ಹೊಂದಿರುವ ಸಂಪತ್ತಿನ ನಾಲ್ಕು ಪಟ್ಟಿಗಿಂತಲೂ ಹೆಚ್ಚು ಸಂಪತ್ತು ಹೊಂದಿದ್ದಾರೆಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಒಂದು ಶೇಕಡಾ ಬಿಲಿಯನೇರ್‌ಗಳ  ಒಟ್ಟು ಸಂಪತ್ತು ದೇಶದ ಒಂದು ವರ್ಷದ ಬಜೆಟ್‌ಗಿಂತಲೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

Share this Video
  • FB
  • Linkdin
  • Whatsapp

ಭಾರತದ 1 ಶೇಕಡಾ ಅತೀ ಶ್ರೀಮಂತ ವ್ಯಕ್ತಿಗಳು, ದೇಶದ 953 ಮಿಲಿಯನ್, ಅಂದರೆ ಜನಸಂಖ್ಯೆಯ ಶೇಕಡಾ 70 ಮಂದಿ ಹೊಂದಿರುವ ಸಂಪತ್ತಿನ ನಾಲ್ಕು ಪಟ್ಟಿಗಿಂತಲೂ ಹೆಚ್ಚು ಸಂಪತ್ತು ಹೊಂದಿದ್ದಾರೆಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಒಂದು ಶೇಕಡಾ ಬಿಲಿಯನೇರ್‌ಗಳ ಒಟ್ಟು ಸಂಪತ್ತು ದೇಶದ ಒಂದು ವರ್ಷದ ಬಜೆಟ್‌ಗಿಂತಲೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ವರ್ಲ್ಡ್ ಇಕಾನಮಿಕ್ ಫೋರಂನ 50ನೇ ವಾರ್ಷಿಕ ಸಭೆಯ ಹಿನ್ನೆಲೆಯಲ್ಲಿ ಆಕ್ಸ್‌ಫ್ಯಾಮ್ ಎಂಬ ಹಕ್ಕುಗಳ ಸಂಸ್ಥೆ 'ಟೈಮ್ ಟು ಕೇರ್' ಎಂಬ ವರದಿ ಬಿಡುಗಡೆ ಮಾಡಿದ್ದು, ಜಗತ್ತಿನ 2153 ಬಿಲಿಯನೇರ್‌ಗಳ ಸಂಪತ್ತು, ವಿಶ್ವದ 60 ಶೇಕಡಾ, ಅಂದರೆ 4.6 ಬಿಲಿಯನ್ ಮಂದಿಯ ಸಂಪತ್ತಿಗಿಂತಲೂ ಹೆಚ್ಚಾಗಿದೆ, ಎಂದು ಹೇಳಿದೆ.

ಇದನ್ನೂ ಓದಿ | ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದ್ದು, ಕಳೆದೊಂದು ದಶಕದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಸಂಪತ್ತಿನಲ್ಲಿ ಇಳಿಮುಖ ಕಂಡು ಬಂದಿದೆ.

Related Video