ಒಂದೇ ವಾರದಲ್ಲಿ ಅಮೆರಿಕದ ಮೂರು ಬ್ಯಾಂಕ್ ದಿವಾಳಿ, ಆರ್ಥಿಕ ರಕ್ತಪಾತಕ್ಕೆ ಕಾರಣವೇನು?
ದೊಡ್ಡಣ್ಣ ಅಂತ ಮೆರೆದ ಅಮೆರಿಕಾಕ್ಕೆ ಆಘಾತ ಎದುರಾಗಿದೆ. 2008ರ ಭಯಂಕರ ದುರಂತ ಮತ್ತೆ ರಿಪೀಟ್ ಆಗುತ್ತಾ ಎನ್ನುವ ಅನುಮಾನ ಕಾಡಿದೆ. ಈಗಾಗಲೇ ಮೂರು ಬ್ಯಾಂಕ್‌ಗಳು ದಿವಾಳಿಯ ಅಂಚಿನಲ್ಲಿದೆ. ಆದರೆ. ಅಮೆರಿಕದಲ್ಲಿ ಆರ್ಥಿಕ ರಕ್ತಪಾತಕ್ಕೆ ಕಾರಣವೇನು ಅನ್ನೋದೇ ಈಗಿರುವ ಕುತೂಹಲ.
ನವದೆಹಲಿ (ಮಾ.16): ಒಂದೇ ವಾರದಲ್ಲಿ ಅಮೆರಿಕಾದ ಮೂರು ಬ್ಯಾಂಕ್‌ಗಳು ದಿವಾಳಿಯ ಅಂಚಿನಲ್ಲಿವೆ. ಅದಕ್ಕೆ ಕಾರಣ ಏನು ಗೊತ್ತಾ..? 2008ರ ಆ ಭಯಂಕರ ದುರಂತ ಮತ್ತೆ ರಿಪೀಟ್ ಆಗುತ್ತಾ ಎನ್ನುವ ಆತಂಕ ಅಮೆರಿಕನ್ನರನ್ನು ಕಾಡಿದೆ.
ಅಮೆರಿಕಾದ ಮೂರು ಬ್ಯಾಂಕುಗಳು, ಒಂದರ ಹಿಂದೊಂದು ಬಾಗಿಲು ಮುಚ್ಚಿದ್ದಾವೆ.. ಇದು ಅಮೆರಿಕಾದ ಮತ್ತೊಂದು ದುರಂತಕ್ಕೆ ಕಾರಣವಾಗುತ್ತಾ? ಇದರಿಂದ ಭಾರತಕ್ಕೆ ದೊಡ್ಡ ಆಘಾತ ಎದುರಾಗುತ್ತಾ? ಅನ್ನೋ ಪ್ರಶ್ನೆಗಳು ಕಾಡಿವೆ. ಅಮೆರಿಕಾಗೆ ಎದುರಾಗಿರೋ ಸಂಕಷ್ಟ ಭಾರತವನ್ನೂ ಕಾಡುತ್ತಾ? ಆ ಗಂಡಾತರದಿಂದ ಪಾರಾಗೋಕೆ ಭಾರತ ಸಜ್ಜಾಗಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲಿದೆ.
ಅಮೆರಿಕ ಬ್ಯಾಂಕ್ ಕುಸಿತ: ಆತಂಕಗೊಂಡ ಭಾರತೀಯ ಸ್ಟಾರ್ಟಪ್ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ