Asianet Suvarna News Asianet Suvarna News

ಆತ್ಮ ನಿರ್ಭರ ಭಾರತಕ್ಕೆ ಮುನ್ನುಡಿ ಬರೆದ ಮಲೆನಾಡ ಯುವಕ ಭಾರದ್ವಾಜ್ ಕಾರಂತ್ !

ಮಲೆನಾಡಿನಲ್ಲಿ ಉದ್ಯಮ ಆರಂಭಿಸುವುದು ಸುಲಭವಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಯುವಕರಿಗೆ ಮಾದರಿಯಾಗಿದ್ದಾರೆ  ಭಾರಧ್ವಜ್ ಕಾರಂತ್.  ಓದಿದ್ದು MSc ಕಂಪ್ಯೂಟರ್ ಸೈನ್ಸ್,  ಜೊತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಿಜಿಟಲ್ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಪಿಎಚ್‌ಡಿ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಭಾರಧ್ವಜ್. ಆದರೆ ಇವರು ನೆಚ್ಚಿಕೊಂಡಿದ್ದು ಎಂಟರ್‌ಪ್ರ್ಯೂನರ್‌ಶಿಪ್.
 

ಬೆಂಗಳೂರು (ಆ. 19): ಮಲೆನಾಡಿನಲ್ಲಿ ಉದ್ಯಮ ಆರಂಭಿಸುವುದು ಸುಲಭವಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಯುವಕರಿಗೆ ಮಾದರಿಯಾಗಿದ್ದಾರೆ  ಭಾರಧ್ವಜ್ ಕಾರಂತ್.  ಓದಿದ್ದು MSc ಕಂಪ್ಯೂಟರ್ ಸೈನ್ಸ್,  ಜೊತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಿಜಿಟಲ್ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಪಿಎಚ್‌ಡಿ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಭಾರಧ್ವಜ್. ಆದರೆ ಇವರು ನೆಚ್ಚಿಕೊಂಡಿದ್ದು ಎಂಟರ್‌ಪ್ರ್ಯೂನರ್‌ಶಿಪ್.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಹುಟ್ಟಿ, ಇಲ್ಲೇ ಓದಿಕೊಂಡು ಬೆಳೆದ ಹುಡುಗ. ಇಲ್ಲಿ ಸಿಗೋ ಆಹಾರ ಪದಾರ್ಥಗಳಿಂದಾನೇ ಸಾಕಷ್ಟು ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಯನ್ನು ಕಂಡುಕೊಂಡು, ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ ನೀಡಿದ್ದಾರೆ.

'ಆತ್ಮ ನಿರ್ಭರ ಭಾರತದ ಯಶಸ್ವಿಗೆ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ ಸೂತ್ರ'

ಸ್ಥಳೀಯವಾಗಿ ಸಿಗುವ ತರಕಾರಿ ಮತ್ತು ಹಣ್ಣುಗಳನ್ನು ಬಳಸಿ, ಬಗೆ ಬಗೆಯ ತಿಂಡಿ-ಪದಾರ್ಥಗಳನ್ನು ತಯಾರಿಸುವ 'ಕಾರಂತ್ ಫುಡ್‌ ಪ್ರಾಡಕ್ಸ್‌'  ಘಟಕ ಶುರುಮಾಡಿದ್ದು. ಸದ್ಯ 15 ಮಂದಿಗೆ ಈ ಘಟಕದಲ್ಲಿ ನೇರ ಉದ್ಯೋಗ ಸಿಕ್ಕಿದೆ. ಹಾಗಾದರೆ 'ಕಾರಂತ್ ಫುಡ್‌ ಪ್ರಾಡಕ್ಸ್‌'  ನಲ್ಲಿ ಏನೆಲ್ಲಾ ಸಿಗುತ್ತದೆ? ಇಲ್ಲಿಯ ಕಾರ್ಯ ವೈಖರಿ ಹೇಗಿರುತ್ತದೆ? ಇಲ್ಲಿದೆ ನೋಡಿ!

 

Video Top Stories