ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಮತ್ತೆ ಶಾಕ್: ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ!
ಅಕ್ಟೋಬರ್ ತಿಂಗಳ ಆರಂಭದಲ್ಲಿ ಅನಿಲ ದರ ಹೆಚ್ಚಳದ ಶಾಕ್ ನೀಡಿದ ತೈಲ ಕಂಪನಿಗಳು ಇದೀಗ, ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಿಸಿದೆ.
ನವದೆಹಲಿ(ಅ.06): ಅಕ್ಟೋಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿದ್ದವು. ವಾಣಿಜ್ಯ ಸಿಲಿಂಡರ್ಗಳ(Commercial Cylinder) ಬೆಲೆಯನ್ನು 43.5 ರೂಪಾಯಿಗಳಷ್ಟು ಏರಿಕೆ ಮಾಡಿದ್ದವು. ಆದ್ರೆ ಈಗ ಗ್ರಾಹಕರಿಗೆ ಎಲ್‌ಪಿಜಿ ಅಡುಗೆ ಸಿಲಿಂಡರ್ ದರ ಏರಿಕೆ ಶಾಕ್ ಕೊಟ್ಟಿದೆ.
ಮತ್ತೆ ಎಲ್ಪಿಜಿ ಅಡುಗೆ ಸಿಲಿಂಡರ್( Domestic LPG Cylinders) ಬೆಲೆ ಮತ್ತೆ 15 ರೂ. ಹೆಚ್ಚಳವಾಗಿದೆ. ದೇಶಾದ್ಯಂತ ಇಂದಿನಿಂದಲೇ ಹೊಸ ದರ ಜಾರಿಯಾಗಲಿದೆ.
ಬೆಲೆ ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ ₹902.5 ರೂ ಆಗಲಿದ್ದು ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ. ಇರಲಿದೆ.