30x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ ರಾಯ್ ಅವರ ಆತ್ಮ*ಹತ್ಯೆಯ ತನಿಖೆಯು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಮೇಲ್ನೋಟಕ್ಕೆ ಐಟಿ ದಾಳಿಯ ಒತ್ತಡ ಕಾರಣ ಎನ್ನಲಾಗಿದ್ದರೂ, ನಟಿಯ ನಂಟು, ಸಿಡಿ ಬಲೆಯಂತಹ ಅನುಮಾನಗಳು ಸಾವಿನ ಸುತ್ತ ಹಬ್ಬಿದ್ದು, ಇದರ ಹಿಂದಿನ ಅಸಲಿ ರಹಸ್ಯದ ಬಗ್ಗೆ ತನಿಖೆ ನಡೆಯುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್​ನ ಮಾಲೀಕ , ರಿಯಲ್ ಎಸ್ಟೇಟ್ ದೊರೆ, ಬರೊಬ್ಬರಿ 8,400 ಕೋಟಿ ಒಡೆಯನಾಗಿದ್ದ ಉದ್ಯಮಿ ಸಿ ಜೆ ರಾಯ್ ಆತ್ಮ*ಹತ್ಯೆ ಕುರಿತ ತನಿಖೆ ನಾನಾ ಆಯಾಮದಲ್ಲಿ ನಡೀತಾ ಇದೆ. ಮೇಲ್ನೋಟಕ್ಕೆ IT ದಾಳಿ ಒತ್ತಡಕ್ಕೆ ಸಿ ಜೆ ರಾಯ್ ಸಾವಿಗೆ ಶರಣಾದ್ರು ಅಂತ ಹೇಳಿದ್ರೂ ಈ ವಿಚಾರದಲ್ಲಿ ನಟಿ ನಂಟು, ಸಿಡಿ ಬಲೆ, ಬೆದರಿಕೆ, ಕೊ*ಲೆ ಅಂತೆಲ್ಲಾ ಮಾತುಗಳು ಕೇಳ್ತಾ ಬರ್ತಾ ಇವೆ. ಹಾಗಾದ್ರೆ ಕಾನ್ಫಿಡೆಂಟ್ ದೊರೆ ಸಾವಿನ ಅಸಲಿ ರಹಸ್ಯ ಏನು? ಇಲ್ಲಿದೆ ನೋಡಿ ರಾಯ್ ಸೂ*ಸೈಡ್ ಸೀಕ್ರೆಟ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಿಷ್ಟೇ ಅಲ್ಲ ಸಿ.ಜೆ ರಾಯ್ ಸಾವಿನ ಸುತ್ತ ಇನ್ನಷ್ಟು ಅನುಮಾನಗಳ ಹುತ್ತವೇ ಬೆಳೆದುಕೊಂಡಿದೆ. ಸಿ.ಜೆ ರಾಯ್ ಅನ್ನೋ ಮಹತ್ವಾಕಾಂಕ್ಷಿ ಉದ್ಯಮಿ ಬರೀ ಐಟಿ ಅಧಿಕಾರಿಗಳ ಭಯಕ್ಕೆ ಸೂ*ಸೈಡ್ ಮಾಡಿಕೊಂಡ್ರು ಅಂದ್ರೆ ಅದನ್ನ ಒಪ್ಪಿಕೊಳ್ಳೋದು ಕಷ್ಟ. ಸಾವಿರಾರು ಉದ್ಯಮ ನಡೆಸೋರಿಗೆ ಐಟಿ ಕಗ್ಗಂಟುಗಳು ಸಾಮಾನ್ಯ. ಸೋ ಸಿ.ಜೆ ರಾಯ್ ಸಾವಿನ ಹಿಂದೆ ಮತ್ತೇನೋ ದೊಡ್ಡ ಕಾರಣ ಅನ್ನೋ ನಿಟ್ಟಿನಲ್ಲಿ ತನಿಖೆ ಆರಂಭಗೊಂಡಿದೆ. ಸಿ.ಜೆ ರಾಯ್ ಸಾ*ವಿಗೆ ನಟಿಯ ನಂಟು ಹಾಗೂ ಮಾನಿನಿಯ ಪ್ರಸಂಗ ಥಳುಕು ಹಾಕಿಕೊಂಡಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Related Video