Asianet Suvarna News Asianet Suvarna News

ಜೀವ ಹಿಂಡುವ ಲೋನ್ ಆ್ಯಪ್'ಗಳು: ಸಾವಿರಾರು ಜನರ ಬದುಕು ನರಕ

ಕೊರೋನಾದಿಂದ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡು, ಬೀದಿಗೆ ಬಂದು ಒಂದು ರೂಪಾಯಿಗೂ ಅಂಗಲಾಚುವ ಪರಿಸ್ಥಿತಿ ಎದುರಾಗಿದ್ದಂತೂ ಸತ್ಯ. ಇಂತಹ ಸಮಯದಲ್ಲಿ ಕ್ಷಣ ಮಾತ್ರದಲ್ಲಿ ಸಾಲ ಕೊಟ್ಟು ಅಂಗೈನಲ್ಲೇ ಆಕಾಶ ತೋರಿಸಿದ್ದು ಕೆಲ ಲೋನ್ ಆ್ಯಪ್'ಗಳು.

First Published Oct 22, 2022, 2:53 PM IST | Last Updated Oct 22, 2022, 2:53 PM IST

ಕ್ಷಣ ಮಾತ್ರದಲ್ಲಿ ಹತ್ತಿಪ್ಪತ್ತು ಸಾವಿರ ಸಾಲ ಕೊಡುವ ಆ್ಯಪ್'ಗಳು, ದುಪ್ಪಟ್ಟು ಬಡ್ಡಿ ವಿಧಿಸಿದ್ದಲ್ಲದೇ ಸಾಲ ವಸೂಲಿಗೆ ಹಿಡಿದ ಅಡ್ಡ ದಾರಿಯಿಂದಾಗಿ ಅದೆಷ್ಟೋ ಕುಟುಂಬಗಳು ಸರ್ವನಾಶ ಆಗಿವೆ. ಇವುಗಳ ಟಾರ್ಚರ್'ಗೆ ಹೆದರಿ ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಹಲವರು ಈ ಸುಳಿಯಿಂದ ಹೊರಬರಲಾಗದೇ ಒದ್ದಾಡ್ತಾ ಇದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಸಾವಿರಾರು ಜನರ ಬದುಕಲ್ಲಿ ಈ ಆ್ಯಪ್'ಗಳು ನರಕ ತೋರಿಸಿವೆ.

ದೀಪಾವಳಿ ಪ್ರಯುಕ್ತ ನಾಳೆಯಿಂದ 6 ದಿನ ಬ್ಯಾಂಕುಗಳಿಗೆ ರಜೆ


 

Video Top Stories