Asianet Suvarna News Asianet Suvarna News

ಶತಮಾನದ ದಾನಿ: ಬಿಲ್‌ಗೇಟ್ಸ್‌ ಹಿಂದಿಕ್ಕಿದ ಹೆಮ್ಮೆಯ ಭಾರತೀಯ ಜಮ್‍ಸೆಟ್‍ಜಿ ಟಾಟಾ!

Jun 25, 2021, 3:06 PM IST

ನವದೆಹಲಿ(ಜೂ.05):  ವಿಶ್ವದ ಗ್ರೇಟ್‌ ದಾನಿಗಳಲ್ಲಿ ನಮ್ಮ ಹೆಮ್ಮೆಯ ಭಾರತೀಯ. ಶತಮಾನದ ದಾನಶೂರ ನಂಬರ್ ವನ್ ಜಮ್‍ಸೆಟ್‍ಜಿ ಟಾಟಾ. ದೇಶ ಕಟ್ಟಿದ ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುವ ಜಮ್‍ಸೆಟ್‍ಜಿ ಟಾಟಾಜಗತ್ತಿನ ನಂಬರ್‌ ವನ್ ದಾನಿಯಾಗಿದ್ದು ಹೇಗೆ

ಹೌದು ದಾನ ಮಾಡುವ ವಿಚಾರದಲ್ಲಿ ಜಮ್‍ಸೆಟ್‍ಜಿ ಟಾಟಾ, ಮೈಕ್ರೋಸಾಫ್ಟ್‌ ದಿಗ್ಗಜ ಬಿಲ್‌ಗೇಟ್ಸ್‌ರನ್ನೇ ಹಿಂದಿಕ್ಕಿದ್ದಾರೆ. ಇಂದು ಉಪ್ಪಿನಿಂದ ಸಾಫ್ಟ್‌ವೇರ್‌ವರೆಗೆ ಬೆಳೆದು ನಿಂತಿರುವ ಟಾಟಾ ಸಾಮ್ರಾಜ್ಯದ ಮೂಲಪುರುಷ ಜಮ್‍ಸೆಟ್‍ಜಿ ಟಾಟಾರವರೇ ಜಗತ್ತಿನ ಶತಮಾನದ ದಾನಿ ಎನಿಸಿಕೊಂಡಿದ್ದಾರೆ.

ಮಹಾಭಾರತಕ್ಕೆ ಕರ್ಣ, ಜಗತ್ತಿಗೆ ಜಮ್‍ಸೆಟ್‍ಜಿ  ಟಾಟಾ... ಕಳೆದೊಂದು ಶತಮಾನದಲ್ಲಿ ಸಾಮಾಜಿಕ ಸೇವೆಗಾಗಿ ಅತೀ ಹೆಚ್ಚು ದೇಣಿಗೆ ನೀಡಿದ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. 

Video Top Stories