ಸಿಕ್ತು ಸ್ವಿಸ್ ಕಾಳ ಧನಿಕರ ಪಟ್ಟಿ: ಮೋದಿ ಹಿಡಿತಾರೆ ಕೊರಳ ಪಟ್ಟಿ!
ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ ಭಾರತವು ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಮೊದಲ ಬಾರಿಗೆ ಪಡೆದುಕೊಂಡಿದೆ. ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲಾಗಿದೆ.
ನವದೆಹಲಿ(ಅ.07): ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ ಭಾರತವು ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಮೊದಲ ಬಾರಿಗೆ ಪಡೆದುಕೊಂಡಿದೆ. ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲಾಗಿದೆ. ಎಇಒಐನಲ್ಲಿ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಡ್ಜರ್ಲ್ಯಾಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಹಣಕಾಸು ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡ 75 ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಎಫ್‌ಟಿಎ ವಕ್ತಾರ ಸ್ಪಷ್ಟಪಡಿಸಿದ್ದಾರೆ. ಮುಂದಿನ ಮಾಹಿತಿ ವಿನಿಮಯ ಸೆಪ್ಟೆಂಬರ್ 2020ರಲ್ಲಿ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...