ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ ಕಚೇರಿ ಉದ್ಘಾಟಿಸಿದ ಆರಗ ಜ್ಞಾನೇಂದ್ರ, 900 ಕೋರ್ಸ್‌ಗಳು ಲಭ್ಯ

ಬನಶಂಕರಿ 2ನೇ ಹಂತದಲ್ಲಿ ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ ಕಚೇರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಆ.05): ಬನಶಂಕರಿ 2ನೇ ಹಂತದಲ್ಲಿ ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ ಕಚೇರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. 

ಕೃಷಿ, ವೈಯಕ್ತಿಕ ಹಣಕಾಸು ಮತ್ತು ಉದ್ಯಮಿಗಳಾಗಬೇಕು ಎನ್ನುವವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ನಲ್ಲಿ ಉಪಯುಕ್ತ ಕೋರ್ಸ್‌ಗಳ ಮೂಲಕ ಮೌಲ್ಯವರ್ಧಿತ ಜೀವನೋಪಾಯ ಮತ್ತು ಉದ್ಯಮಶೀಲತೆ ಶಿಕ್ಷಣವನ್ನು ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಫೈನಾನ್ಸಿಯಲ್‌ ಫ್ರೀಡಂ ಆ್ಯಪ್‌ ಸಂಸ್ಥಾಪಕ ಮತ್ತು ಸಿಇಒ ಸಿಎಸ್‌ ಸುಧೀರ್‌ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಫೈನಾನ್ಸಿಯಲ್‌ ಆ್ಯಪ್‌ ನಿರ್ದೇಶಕ ರವೀಂದ್ರ ಕೃಷ್ಣಪ್ಪ, ಫಿಡೆಲಿಟಸ್‌ ಗ್ರೂಪ್‌ ಸಂಸ್ಥಾಪಕ ಅಚ್ಯುತ್‌ಗೌಡ ಉಪಸ್ಥಿತರಿದ್ದರು.

Related Video