ಜಗತ್ತಲ್ಲಿ ಆಗಿದ್ದಾಗಲಿ ನಮಗಂತೂ ನೋ ಟೆನ್ಷನ್: ಭಾರತಕ್ಕೆ ನಿರ್ಮಲಾ ಸೀತಾರಾಮನ್ ಅಭಯ!‌

ಲೋಕಸಭೆಯಲ್ಲಿ 15 ದಿನಗಳಿಂದ ಜಿಎಸ್‌ಟಿ ದರ ಏರಿಕೆ ಹಾಗೂ ಇತರ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಗಲಾಟೆ ನಡೆಸುತ್ತಿದ್ದವು. ಬೆಲೆ ಏರಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ದಿಟ್ಟ ಉತ್ತರ ನೀಡಿದ್ದಾರೆ. 

First Published Aug 3, 2022, 4:51 PM IST | Last Updated Aug 3, 2022, 4:51 PM IST

ಲೋಕಸಭೆಯಲ್ಲಿ 15 ದಿನಗಳಿಂದ ಜಿಎಸ್‌ಟಿ ದರ ಏರಿಕೆ ಹಾಗೂ ಇತರ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಗಲಾಟೆ ನಡೆಸುತ್ತಿದ್ದವು. ಬೆಲೆ ಏರಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ದಿಟ್ಟ ಉತ್ತರ ನೀಡಿದ್ದಾರೆ. 

‘ಪ್ರಪಂಚದ ವಿದ್ಯಮಾನಗಳ ಪರಿಣಾಮ ಭಾರತದ ಮೇಲೂ ಆಗಿದೆ. ಆದರೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತವನ್ನು ಆರ್ಥಿಕವಾಗಿ ಮೇಲೆತ್ತಲು ಮೋದಿ ಸರ್ಕಾರ ಸಕಲ ಕ್ರಮ ಜರುಗಿಸುತ್ತಿದೆ. ಇದರ ಪರಿಣಾಮ ಇಂದು ಭಾರತವು ಆರ್ಥಿಕ ಕುಸಿತ ಎದುರಿಸುವ ಯಾವುದೇ ಭೀತಿಯಿಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

‘ದೇಶದಲ್ಲಿ ಪ್ರಸ್ತುತ ಚಿಲ್ಲರೆ ಹಣದುಬ್ಬರವು ಶೇ.7 ರಷ್ಟಿದೆ. 2004 ರಿಂದ 2014ರ ಯುಪಿಎ ಅವಧಿಯಲ್ಲಿ ಹಣದುಬ್ಬರವು ಎರಡಂಕಿ ದಾಟಿತ್ತು. ಸತತ 22 ತಿಂಗಳುಗಳ ಕಾಲ ಹಣದುಬ್ಬರ ಶೇ.9ಕ್ಕಿಂತ ಹೆಚ್ಚಾಗಿತ್ತು’ ಎಂದು ವಿಪಕ್ಷಗಳತ್ತ ಚಾಟಿ ಬೀಸಿದರು. ಇತರೆ ದೇಶಗಳಿಗೆ ಹೋಲಿಸಿದರೆ ದೇಶದ ಬ್ಯಾಂಕಿಂಗ್‌ ವಲಯವೂ ಆರೋಗ್ಯಕರ ಸ್ಥಿತಿಯಲ್ಲಿದೆ. 2022ರ ಹಣಕಾಸಿನ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಅನುಪಾತಕ್ಕೆ ಸರ್ಕಾರದ ಸಾಲವು ಶೇ. 56.29 ಕ್ಕೆ ಇಳಿಕೆಯಾಗಿದೆ’ ಎಂದರು.