Asianet Suvarna News Asianet Suvarna News

Global Investors Meet: ಬಂಡವಾಳ, ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿ ಸಚಿವ ಮುರುಗೇಶ್‌ ನಿರಾಣಿ

ನ.2 ರಿಂದ ಬೆಂಗಳೂರಿನಲ್ಲಿ Global Investors Meet ಆರಂಭವಾಗಲಿದೆ.  ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಈ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಮಾತನಾಡಿದ್ದಾರೆ, ಬನ್ನಿ ಏನಂದ್ರು ನೋಡೋಣ
 

ಬೆಂಗಳೂರು (ನ.1): ಕೋವಿಡ್‌ ಸಾಂಕ್ರಾಮಿಕದ ಬಳಿಕ ನಡೆಯುತ್ತರುವ ಮೊಟ್ಟಮೊದಲ ಜಾಗತಿಕ ಹೂಡಿಕೆದಾರರ ಸಭೆ ಬೆಂಗೂರಿನಲ್ಲಿ ನಡೆಯುತ್ತಿದೆ. ವಿಶ್ವದ ಯಾವುದೇ ನಗರದಲ್ಲಿ ಕೋವಿಡ್‌ ಬಳಿಕ ಈ ಕಾರ್ಯಕ್ರಮ ನಡೆದಿಲ್ಲ ಎಂದು ಹೇಳಿರುವ ಸಚಿವ ಮುರುಗೇಶ್‌ ನಿರಾಣಿ, ಈ ಮೀಟ್‌ನಿಂದ ಖಂಡಿತವಾಗಿ ಬಂಡವಾಳ ಹಾಗೂ ಉದ್ಯೋಗ ಸೃಷ್ಟಿಯ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮುರಗೇಶ್‌ ನಿರಾಣಿ, ಜಾಗತಿಕ ಹೂಡಿಕೆದಾರರ ಶೃಂಗದಿಂದ ಕನಿಷ್ಠ 5 ಲಕ್ಷ ಕೋಟಿ ಬಂಡವಾಳ ಹರಿವಿನ ನಿರೀಕ್ಷೆಯಲ್ಲಿದ್ದೇನೆ. ಅದರೊಂದಿಗೆ ರಾಜ್ಯದಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ಹೇಳಿದ್ದಾರೆ.

ಜಿಮ್‌ನಿಂದ 5 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ: ಸಚಿವ ಮುರುಗೇಶ್‌ ನಿರಾಣಿ

ನಿರುದ್ಯೋಗಿಗಳಿಗೆ ಹೆಚ್ಚಿನ ಕೆಲಸವನ್ನು ನೀಡಲು ಸರ್ಕಾರ ಕೆಲಸ ಮಾಡುತ್ತಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ, ಕಲಬುರಗಿ ಭಾಗದ ಅಭಿವೃದ್ಧಿಗಾಗಿ ಸರ್ಕಾರ ದೊಡ್ಡ ಮಟ್ಟದಲ್ಲಿ ಶ್ರವಹಿಸುತ್ತಿದೆ. ಸರ್ಕಾರದ ಪ್ರಯತ್ನಗಳನ್ನೂ ನೀವಿದನ್ನು ನೋಡಬಹುದಾಗಿದೆ ಎಂದು ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

Video Top Stories