Asianet Suvarna News Asianet Suvarna News

ಅಗರ್ಭ ಶ್ರೀಮಂತ ಅನಿಲ್ ಅಂಬಾನಿಗೆ ಇದೆಂಥಾ ಸ್ಥಿತಿ; ತಮ್ಮ ಆಭರಣಗಳನ್ನೇ ಮಾರುವ ಗತಿ ಬಂದೋಯ್ತಾ!

Sep 29, 2020, 11:23 AM IST

ಬೆಂಗಳೂರು (ಸೆ. 29): ಅಗರ್ಭ ಶ್ರೀಮಂತ ಅನಿಲ್ ಅಂಬಾನಿ ಬಳಿ ಬಿಡಿಗಾಸೂ ಇಲ್ವಂತೆ.  ಹೆಂಡತಿ, ಕುಟುಂಬದ ದುಡ್ಡಿನಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆಯಂತೆ.  ಮಗನಿಂದ ಸಾಲ ಪಡೆದಿದ್ದಾರಂತೆ.  ವೈಭೋಗದ ಜೀವನ ಬಿಟ್ಟು ಶಿಸ್ತುಬದ್ಧವಾಗಿ ಬದುಕುತ್ತಿದ್ದಾರಂತೆ! ಹೀಗಂತ ನಾವು ಹೇಳ್ತಾಯಿಲ್ಲ.  ಸಹಸ್ರಾರು ಕೋಟಿ ರು. ಒಡೆಯ, ಉದ್ಯಮಿ ಅನಿಲ್‌ ಅಂಬಾನಿ ಬ್ರಿಟನ್‌ ನ್ಯಾಯಾಲಯದ ಮುಂದೆ ಗೋಳು ತೋಡಿಕೊಂಡಿದ್ದಾರೆ.

ಸ್ಟಾರ್ಟ್‌ಅಪ್ ಪ್ರಾರಂಭಿಸಬೇಕಾ? ಹಾಗಾದ್ರೆ ನೀವು ಈ ವಿಷಯ ತಿಳಿದುಕೊಳ್ಳಿ

ಚೀನಾ ಕಂಪನಿಗಳು ಲಂಡನ್‌ ಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಕಾನೂನು ಸಮರ ನಡೆಸುವುದಕ್ಕೆ ಬೇಕಾದ ಕಾನೂನು ಶುಲ್ಕ ಹೊಂದಿಸಲು ಹಣ ಇಲ್ಲದೆ ನನ್ನ ಬಳಿ ಇದ್ದ ಆಭರಣವನ್ನೂ ಮಾರಿಕೊಂಡಿದ್ದೇನೆ ಎಂದು ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಮುಕೇಶ್‌ ಅಂಬಾನಿ ಅವರ ಖಾಸಾ ಸೋದರ ಆಗಿರುವ ಅನಿಲ್‌ ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾದರೆ ಅನಿಲ್ ಅಂಬಾನಿಗೆ ಈ ಸ್ಥಿತಿ ಬರಲು ಕಾರಣವೇನು? ಆರ್ಥಿಕ ದಿವಾಳಿಯಾದ್ರಾ ಅಂಬಾನಿ? ಏನಿವರ ಕಥೆ? ನೋಡೋಣ ಬನ್ನಿ!
 

Video Top Stories