ಅನೇಕ ಷರತ್ತು, ನಷ್ಟದಲ್ಲಿದ್ದರೂ ಏರ್‌ ಇಂಡಿಯಾ ಖರೀದಿಸಿದ್ದೇಕೆ ಟಾಟಾ?

ವಿಮಾನದ ಟಾಯ್ಲೆಟ್‌ನ್ನು ತಾವೇ ತೊಳೆಯುತ್ತಿದ್ದರು ಟಾಟಾ. ಸಂಬಳ ಇಲ್ಲ, ಸವಲತ್ತೂ ಇಲ್ಲ... ಇಪ್ಪತ್ತೈದು ವರ್ಷ ಚೇರ್ಮನ್ ಆಗಿದ್ದರು ಟಾಟಾ. ಯಾಕೆ ಗೊತ್ತಾ? ನಿನನ್ನ್ನು ಚೇರ್ಮನ್ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಟಾಟಾಗೆ ಹೇಳಿದ್ದ ಪ್ರಧಾನಿ ಯಾರು ಗೊತ್ತಾ? ತಮ್ಮದೇ ಏರ್‌ಲೈನ್ಸ್‌ನಿಂದ ಹೊರ ದಬ್ಬಿಸಿಕೊಂಡ ಟಾಟಾ ಅಲ್ಲೇ ಇದ್ದರು. ಯಾಕೆ ಗೊತ್ತಾ? ಇಲ್ಲಿದೆ ಈ ಕುರಿತಾದ ರೋಚಕ ಕಹಾನಿ

First Published Oct 10, 2021, 5:51 PM IST | Last Updated Oct 10, 2021, 5:51 PM IST

ನವದೆಹಲಿ(ಅ.10): ವಿಮಾನದ ಟಾಯ್ಲೆಟ್‌ನ್ನು ತಾವೇ ತೊಳೆಯುತ್ತಿದ್ದರು ಟಾಟಾ(Tata). ಸಂಬಳ ಇಲ್ಲ, ಸವಲತ್ತೂ ಇಲ್ಲ... ಇಪ್ಪತ್ತೈದು ವರ್ಷ ಚೇರ್ಮನ್ ಆಗಿದ್ದರು ಟಾಟಾ. ಯಾಕೆ ಗೊತ್ತಾ? ನಿನ್ನನ್ನು ಚೇರ್ಮನ್ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಟಾಟಾಗೆ ಹೇಳಿದ್ದ ಪ್ರಧಾನಿ ಯಾರು ಗೊತ್ತಾ? ತಮ್ಮದೇ ಏರ್‌ಲೈನ್ಸ್‌ನಿಂದ ಹೊರ ದಬ್ಬಿಸಿಕೊಂಡ ಟಾಟಾ ಅಲ್ಲೇ ಇದ್ದರು. ಯಾಕೆ ಗೊತ್ತಾ? ಇಲ್ಲಿದೆ ಈ ಕುರಿತಾದ ರೋಚಕ ಕಹಾನಿ

‘ಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡ 90 ವರ್ಷಗಳ ಇತಿಹಾಸ ಹೊಂದಿದ ಏರ್‌ ಇಂಡಿಯಾ(Air India) ವಿಮಾನಯಾನ ಸಂಸ್ಥೆ ಇಂದು 60000 ಕೋಟಿ ನಷ್ಟದಲ್ಲಿದೆ. ಸಂಸ್ಥೆಯನ್ನು ಮೇಲೆತ್ತಲು ಮಾಡಿರುವ ಎಲ್ಲಾ ಪ್ರಯತ್ನಗಳು ವಿಫಲಗೊಂಡಿರುವುದರಿಂದ ಸರ್ಕಾರ ಅದನ್ನು ಖಾಸಗೀಕರಣ ಮಾಡಿದೆ. ಸರ್ಕಾರ ಆಹ್ವಾನಿಸಿದ್ದ ಬಿಡ್‌ನಲ್ಲಿ ಅತಿ ಹೆಚ್ಚು ನಮೂದಿಸಿದ್ದ ಟಾಟಾ ಸಮೂಹ, ಕಂಪನಿಯನ್ನು ಮರಳಿ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಏರ್‌ ಇಂಡಿಯಾ ಕಂಪನಿ ತನ್ನ ಕುಟುಂಬಕ್ಕೆ ಮರಳಿದೆ. ಈ ಹಿನ್ನೆಲೆಯಲ್ಲಿ ಆಗಸದ ರಾಜನಾಗಿ ಮೆರೆದ ಏರ್‌ ಇಂಡಿಯಾ ಇಂದು ಈ ಪರಿಯ ದುಸ್ಥಿತಿಗೆ ತಲುಪಿದ್ದು ಹೇಗೆ? ಟಾಟಾ ಸಮೂಹದಿಂದ ಅದು ಸರ್ಕಾರದ ಪಾಲಾಗಿದ್ದು ಹೇಗೆ, ಮತ್ತೆ ಟಾಟಾ ಸಮೂಹದ ಪಾಲಾಗಬಹುದೇ ಎಂಬ ಸಮಗ್ರ ಮಾಹಿತಿ ಇಲ್ಲಿದೆ.