Asianet Suvarna News Asianet Suvarna News

ಕಾಫಿ ನಾಡಲ್ಲಿ ಮರೆಯಾದ ಬೆಲ್ಲದ ವಾಸನೆ, ಅಳಿವಿನ ಅಂಚಿನಲ್ಲಿದೆ ಅಲೆಮನೆಗಳು!

ಚಿಕ್ಕ ಮಗಳೂರಿನಲ್ಲಿ ಒಂದೊಂದಾಗಿಯೇ ಕಣ್ಮರೆಯಾಗುತ್ತಿರುವ ಅಲೆಮನೆಗಳು
ಕಾಫಿನಾಡಿನಲ್ಲಿ ಅಲೆಮನೆ ಬೆಲ್ಲಕ್ಕೆ ಕಡಿಮೆಯಾಗಿರುವ ಬೇಡಿಕೆ
ವಿವಿಧ ಕಾರಣಗಳಿಂದ ಕಬ್ಬು ಬೆಳೆಯೋದು ಕಡಿಮೆಯಾಗಿದೆ

ಚಿಕ್ಕಮಗಳೂರು (ಜ. 21): ಮೊದಲೆಲ್ಲಾ ಸಂಕ್ರಾಂತಿ (Sankranti)ಬಂತೆಂದರೆ ಅಲೆಮನೆಯ ಬೆಲ್ಲಕ್ಕೆ (Jaggery) ಎಲ್ಲಿಲ್ಲದ ಬೇಡಿಕೆ. ಅದಕ್ಕಾಗಿಯೇ ಇಲ್ಲಿನ ದಾರಿಯಲ್ಲಿ ಅಲೆಮನೆಗಳನ್ನು ನೋಡದಿರಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ, ವರ್ಷಗಳು ಕಳೆದಂತೆ ಕಬ್ಬು ಬೆಳೆಯುವವ ಸಂಖ್ಯೆಯೂ ಕಡಿಮೆಯಾಗಿದೆ. ಬೆಲ್ಲ ಖರೀದಿಸೋರ ಸಂಖ್ಯೆ ಕೂಡ ಇಳಿಮುಖವಾಗಿದೆ. ಇದರ ಪರಿಣಾಮ ಅಲೆಮನೆಗಳಾಗಿದ್ದು (Alemane), ಕಾಫಿ ನಾಡಿನಲ್ಲಿ ಬೆಲ್ಲದ ಸುವಾಸನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯ ಪ್ರಖ್ಯಾತ ಅಲೆಮನೆಗಳು ಇತಿಹಾಸದ ಪುಟ ಸೇರುತ್ತಿವೆ.

Gold Silver Price : ದೇಶಾದ್ಯಂತ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ
ಚಿಕ್ಕಮಗಳೂರಿನಲ್ಲಿ(Chikkamagalur) ಅಲ್ಲೊಂದು ಇಲ್ಲೊಂದು ಅಲೆಮನೆ ಮಾತ್ರ ಕಾಣಿಸುತ್ತೆ. ಅದ್ರೆ ಅಲ್ಲಿ ಬೆಲ್ಲದ ವಾಸನೆಯೂ ಇಲ್ಲ, ಕಾರ್ಮಿಕರು ಇರೋದಿಲ್ಲ. ಖರೀದಿಸೋರು ಕಾಣೋದೆ ಅಪರೂಪ ಎನ್ನುವಂತಾಗಿದೆ. ದಿನಕ್ಕೊಂದು ಲೋಡ್ ಬೆಲ್ಲ ಕೊಡ್ತಾ ಇದ್ದೋರು ಈಗ ವಾರಕ್ಕೊಂದು ಲೋಡ್ ಮಾರೋದು ಕಷ್ಟ ಎನ್ನುತ್ತಿದ್ದಾರೆ ಅಲೆಮನೆ ಮಾಲೀಕರು. ಇನ್ನೂ ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಶುಗರ್ ಫ್ಯಾಕ್ಟರಿಯಂತೂ ಇಲ್ವೆ ಇಲ್ಲ.ಕಬ್ಬು ಬೆಳೆಯಂತೂ ದಿನೇ ದಿನೇ ಕಡಿಮೆಯಾಗ್ತಾನೇ ಇದ್ದಾರೆ. ಕಬ್ಬಿನ ಇಳುವರಿಯಲ್ಲಿ ಬೆಂಬಲ ಬೆಲೆ ಇಲ್ಲ ಅಂತಾ ಕಬ್ಬನ್ನು ಬೆಳೆಯೋಕೆ ಹಿಂದೇಟು ಹಾಕ್ತಾ ಇದ್ರು. 5 ವರ್ಷದ ಹಿಂದೆಯಂತೂ ಎಷ್ಟೂ ಕಬ್ಬು ಬೆಳೆದ್ರು ಖರೀದಿಸೋಕೆ ಅಲೆಮನೆಗಳಿದ್ವು. ಅದ್ರೆ ಈಗ ಕಡಿಮೆಯಾಗಿವೆ. 9 ಇದ್ದ ಕಡೆಗಳಲ್ಲಿ ಈಗ ಎರಡು ಅಲೆಮನೆ ಸಿಗೋದು ಕಷ್ಟ ಎನ್ನುವಂತಾಗಿದೆ.