ಅದಾನಿಯ ನಿಯಂತ್ರಣದಲ್ಲಿ ಇಸ್ರೇಲ್ ಬಂದರು: ಚೀನಾ ಸಿಲ್ಕ್ ಅಸ್ತ್ರಕ್ಕೆ ಎಳ್ಳುನೀರು..!
ಚೀನಾದ ಸಿಲ್ಕ್ ರೂಟಿಗೆ..ಭಾರತದ ಮಸಾಲ ಘಾಟು..! ಏನಿದು ಭಾರತದ ರಣತಂತ್ರ..? ಶತಮಾನಗಳ ಹಿಂದಿನ ಕಡಲ ಮಾರ್ಗ ಆಕ್ಟೀವ್..ಭಾರತಕ್ಕೆ ಆಗುವ ಲಾಭವೇನು? ಭಾರತೀಯನ ನಿಯಂತ್ರಣದಲ್ಲಿದೆ ಇಸ್ರೇಲ್ ಬಂದರು..ಚೀನಾ ಸಿಲ್ಕ್ ಅಸ್ತ್ರಕ್ಕೆ ಎಳ್ಳುನೀರು..!
ಬೆಂಗಳೂರು (ಸೆ.8): ಜುಲೈನಲ್ಲಿ ಇಸ್ರೇಲ್ ತನ್ನ ಮೆಡಿಟರೇನಿಯನ್ ಕರಾವಳಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಹೈಫಾ ಬಂದರನ್ನು ಗೆಲ್ಲುವ ಬಿಡ್ಡರ್‌ಗಳಾದ ಅದಾನಿ ಪೋರ್ಟ್ಸ್ ಮತ್ತು ಸ್ಥಳೀಯ ರಾಸಾಯನಿಕಗಳು ಮತ್ತು ಲಾಜಿಸ್ಟಿಕ್ಸ್ ಗುಂಪು ಗಡೋಟ್‌ಗೆ $ 1.2 ಬಿಲಿಯನ್‌ಗೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲಿಯೇ ಭಾರತಕ್ಕೆ ಇದರಿಂದ ಆಗುವ ಲಾಭ ನಷ್ಟದ ಲೆಕ್ಕಾಚಾರದ ಆರಂಭವಾಗಿದೆ. ಭಾರತದ ಅದಾನಿ ಗ್ರೂಪ್ ನೇತೃತ್ವದ ಒಕ್ಕೂಟವು ಹೈಫಾ ಬಂದರಿನ ಖರೀದಿಯನ್ನು ಪೂರ್ಣಗೊಳಿಸಲು ಇಸ್ರೇಲ್ ಸರ್ಕಾರದಿಂದ ವಿಸ್ತರಣೆಯನ್ನು ಕೋರಿದೆ ಮತ್ತು ಸ್ವೀಕರಿಸಿದೆ ಎಂದು ಅದಾನಿಯ ಸ್ಥಳೀಯ ಪಾಲುದಾರ ಮತ್ತು ಇಸ್ರೇಲ್‌ನ ಹಣಕಾಸು ಸಚಿವಾಲಯವೂ ತಿಳಿಸಿದೆ. ಇದನ್ನು ಚೀನಾದ ಸಿಲ್ಕ್ ರೂಟ್‌ಗೆ ಭಾರತದ ರಣತಂತ್ರ ಎಂದೇ ಬಿಂಬಿಸಲಾಗುತ್ತಿದೆ.