Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ

ಬಹುನಿರೀಕ್ಷಿತ ಕೇಂದ್ರ ಬಜೆಟ್‌ (Union Budget 2022) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಇಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಿದ್ದಾರೆ.

First Published Feb 1, 2022, 2:59 PM IST | Last Updated Feb 1, 2022, 5:46 PM IST

ನವದೆಹಲಿ (ಫೆ. 01): ಬಹುನಿರೀಕ್ಷಿತ ಕೇಂದ್ರ ಬಜೆಟ್‌ (Union Budget 2022) ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಇಂದು ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಮಂಡನೆ ಮಾಡಿದ್ದಾರೆ. ಈ ಬಜೆಟ್‌ ಹಲವು ಪ್ರಥಮಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

Tech Budget 2022: ಶೀಘ್ರದಲ್ಲೇ 5G, ಇ-ಪಾರ್‌ಪೋರ್ಟ್ ಸೇವೆ: ಭಾರತದ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್

ಕೋವಿಡ್‌ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ ಬಜೆಟ್ ನೀಡಿದ್ದಾರೆ. ಬಜೆಟ್‌ನ ಗಾತ್ರ, ಯಾರ್ಯಾರಿಗೆ ಏನೇನು ಸಿಕ್ಕಿದೆ..? ಬಜೆಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ.