Idgah Maidan Row: ಗಣೇಶೋತ್ಸವ ಆಚರಣೆಗೆ ಹಿಂದೂ ಸಂಘಟನೆಗಳು ಪಟ್ಟು
ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರಿ ಬಿಗಿ ಭದ್ರತೆಯಲ್ಲಿ75ನೇ ಸ್ವಾತಂತ್ರ ದಿನಾಚರಣೆಯೆನೋ ನಡೆಯಿತು. ಈಗ ಗಣೇಶೋತ್ಸವ ಆಚರಿಸಲು ಇಲ್ಲಿ ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ಬೆಂಗಳೂರು: ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸರ್ಕಾರಿ ಬಿಗಿ ಭದ್ರತೆಯಲ್ಲಿ75ನೇ ಸ್ವಾತಂತ್ರ ದಿನಾಚರಣೆಯೆನೋ ನಡೆಯಿತು. ಈಗ ಗಣೇಶೋತ್ಸವ ಆಚರಿಸಲು ಇಲ್ಲಿ ಅವಕಾಶ ನೀಡಬೇಕು ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಒಂದು ಸಂಘಟನೆಗೆ ಅವಕಾಶ ನೀಡಿದರೆ ಮತ್ತೊಂದು ಸಂಘಟನೆಗಳು ನಮಗೂ ಅವಕಾಶ ನೀಡಬೇಕು ಎಂದು ಕೇಳುತ್ತವೆ. ಅಲ್ಲದೇ ಇದಕ್ಕೆ ಭದ್ರತೆ ಒದಗಿಸುವುದು ಬಲು ಕಷ್ಟದ ಕೆಲಸ ಎಂಬುದು ಸರ್ಕಾರದ ನಿಲುವು ಅಲ್ಲದೇ. ಈ ವಿಚಾರವಾಗಿ ಸರ್ಕಾರಕ್ಕೆ ಪೊಲೀಸ್ ಇಲಾಖೆ ಹತ್ತು ಅಂಶಗಳ ಶಿಫಾರಸು ನೀಡಲು ಮುಂದಾಗಿದೆ. ಗಣೇಶೋತ್ಸವಕ್ಕೆ ಅವಕಾಶ ನೀಡದಿರುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಇತ್ತ ಹಿಂದೂ ಸಂಘಟನೆಗಳು ಅವಕಾಶ ನೀಡದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದು, ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಇತ್ತ ಪೊಲೀಸ್ ಇಲಾಖೆ ನೀಡಿದ 10 ಅಂಶಗಳ ವಿವರ ಈ ವಿಡಿಯೋದಲ್ಲಿದೆ .