
ಗ್ಯಾರೆಂಟಿ ಯೋಜನೆ ಅನುಷ್ಠಾನಗೊಳಿಸಿದ ಪ್ರಮೋದ್ ಶ್ರೀನಿವಾಸ್ ಪ್ರಯತ್ನ,ಅಪ್ಪು ಪುತ್ಥಳಿ ಉದ್ಘಾಟನೆ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಪದ್ಮನಾಭನಗರದಲ್ಲಿ ಜಾರಿಗೊಳಿಸಿದ ಪ್ರಮೋದ್ ಶ್ರೀನಿವಾಸ್ ಪ್ರಯತ್ನದ ಫಲವಾಗಿ ಇಂದು ಡಾ.ಪುನೀತ್ ರಾಜ್‌ಕುಮಾರ್ ಪುತ್ಥಲಿ ಉದ್ಘಾಟನೆಗೊಂಡಿದೆ. ಡಿಸಿಎಂ ಹಾಗೂ ಸಾರಿಗೆ ಸಚಿವರು ಪುತ್ಥಳಿ ಉದ್ಘಾಟನೆ ಮಾಡಿದ್ದಾರೆ.
ಕರ್ನಾಟಕದ ರತ್ನ, ಭಾರತ ಕಂಡ ಶ್ರೇಷ್ಠ ನಟ ಡಾ.ಪುನೀತ್ ರಾಜ್‌ಕುಮಾರ್ ಅಗಲಿ ವರ್ಷಗಳು ಉರುಳಿದರೂ ನೆನಪು ಹಚ್ಚ ಹಸಿರಾಗಿದೆ. ಇದೀಗ ಬೆಂಗಳೂರಿನ ಪದ್ಮನಾಭನಗರದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟಿಸಿದ್ದಾರೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಈ ಕಾರ್ಯಕ್ರಮದ ಪ್ರಮುಖ ರೂವಾರಿಯಾಗಿದ್ದಾರೆ.ರ್ನಾಟಕ ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಪದ್ಮನಾಭ ನಗರದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದ ಕೀರ್ತಿ ಪ್ರಮೋದ್ ಶ್ರೀನಿವಾಸ್‌ಗಿದೆ.