ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಇಬ್ಬರ ಸ್ಥಿತಿ ಗಂಭೀರ; ಮನೆ ಕೆಡವಲು ಆದೇಶ ಕೊಟ್ಟ ಸರ್ಕಾರ!

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಕಟ್ಟಡ ಛಿದ್ರಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

First Published Jan 6, 2025, 9:42 PM IST | Last Updated Jan 6, 2025, 9:42 PM IST

ಪ್ರತಿನಿತ್ಯ ನಾವು ಬಳಕೆ ಮಾಡೋ‌ ಎಲ್ ಪಿಜಿ ಸಿಲಿಂಡರ್ ಬಗ್ಗೆ ಎಚ್ಚರ ವಹಿಸಬೇಕು.  ಸ್ವಲ್ಪ ಯಾಮಾರಿದ್ರೂ ಜೀವದ ಜೊತೆ ಇಡೀ ಮನೆಗು ಬರಬಹುದು ಕುತ್ತು. ನಿಜ ಇಂದು ಬೆಳಗ್ಗೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಿತ್ತಗಾನಹಳ್ಳಿಯ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ ಲೀಕೇಜ್ ಆಗಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಇಡೀ ಕಟ್ಟಡ ಛಿದ್ರಗೊಂಡಿದ್ದು, ಮನೆಯಲ್ಲಿ ವಾಸವಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ರಭಸಕ್ಕೆ ಕಟ್ಟಡದ ಒಂದು ಫ್ಲೋರ್ ಸಂಪೂರ್ಣ ಛಿದ್ರ ಛಿದ್ರ ಆಗಿದ್ದು, ಎದುರ್ಗಡೆ ಮನೆಗೂ ಅವಷೇಷಗಳು ಬಿದ್ದು ಅಲ್ಲೂ ಡ್ಯಾಮೇಜ್ ಆಗಿದೆ.

ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ಕಿತ್ತಗಾನ ಹಳ್ಳಿಯಲ್ಲಿ ಸುನೀಲ್ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಬೆಳಗ್ಗೆ 8.20ರ ಸುಮಾರಿಗೆ ಸಿಲಿಂಡರ್ ಲೀಕೇಜ್ ಆಗಿ ಬ್ಲಾಸ್ಟ್ ಆಗಿದೆ. 30 ವರ್ಷದ ಆಸುಪಾಸಿನ ತಮಿಳುನಾಡು ಮೂಲದ ಸುನೀಲ್ ಜೋಸೆಫ್, ಕೇರಳ ಮೂಲದ ವಿಷ್ಣು ಜಯರಾಜ್ ಎಂಬ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇಕಡಾ 50% ರಷ್ಟು ಸುಟ್ಟ ಗಾಯಗಳಾಗಿದ್ದು, ಪ್ರಾರಂಭದಲ್ಲಿ ನಾರಾಯಣ ಹೆಲ್ತ್ ಸಿಟಿಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಪುತ್ರನಿಗೆ ತಿಳಿದಿಲ್ಲ ಅಪ್ಪನ ಸಾವು!

ಸಿಲಿಂಡರ್ ಸ್ಫೋಟದ ತೀವ್ರತೆಗೆ ಕಟ್ಟಡದ ಒಂದು ಪ್ಲೋರ್ ಸಂಪೂರ್ಣ ಛಿದ್ರಗೊಂಡಿದೆ. ಕಟ್ಟಡದ ಅವಶೇಷಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಎಸೆಯಲ್ಪಟ್ಟಿವೆ.  ಬ್ಲಾಸ್ಟ್ ಆಗ್ತಿದ್ದಂತೆಯೇ ಓರ್ವ ಗಾಯಾಗಳು ಮೇಲಿಂದ ಜಿಗಿದ್ರೆ ಮತ್ತೋರ್ವನನ್ನ ಸ್ಥಳೀಯರು ರಕ್ಷಿಸಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡದ ಕೆಳಗಡೆ ಇದ್ದ ನಾಲ್ಕೈದು ಬೈಕ್ ಗಳು, ಒಂದು ಕಾರು ಜಖಂ‌ಗೊಂಡಿದೆ. 

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ವಿಷ್ಣು ಜಯರಾಜ್ ಹಾಗೂ ನಾರಾಯಣ ಹೃದಯಾಲದಲ್ಲಿ ಕೆಲಸ ಮಾಡ್ತಿದ್ದ ಸುನೀಲ್ ಜೋಸೆಫ್ ಇಬ್ಬರೂ ಕಟ್ಟಡದಲ್ಲಿ ಬಾಡಿಗೆಗೆ ಇದ್ದರು. ಬೆಳಗ್ಗೆ ಕಚೇರಿಗೆ ಹೋಗೋಕೆ ರೆಡಿಯಾಗ್ತಿದ್ದವರು ಸಿಲಿಂಡರ್ ಗ್ಯಾಸ್ ಆಫ್ ಮಾಡೋದು ಮರೆತಿದ್ದಾರೆ. ಪರಿಣಾಮ ಗ್ಯಾಸ್ ಲೀಕೇಜ್ ಆಗಿ ಸ್ಫೋಟಗೊಂಡಿದೆ. ಘಟನೆಯಲ್ಲಿ ಇಬ್ಬರಗೂ ಸುಟ್ಟಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಬಿಲ್ಡಿಂಗ್‌ನ ಎರಡು ಪ್ಲೋರ್ ಗಳು ಸಂಪೂರ್ಣ ಡ್ಯಾಮೇಜ್ ಆಗಿದ್ದು, ಕಟ್ಟಡವನ್ನ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೆನರಾ ಬ್ಯಾಂಕ್ ಎಟಿಎಂ ಮಿಷನ್ ಹೊತ್ತೊಯ್ದರೂ ಹಣ ಕದಿಯೋಕಾಗ್ಲಿಲ್ಲ; ಇವರೆಂಥಾ ಕಳ್ಳರು!

ಈ ಪ್ರಕರಣ ಸಂಬಂಧ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಈಗಾಗಲೇ ಘಟನಾ ಸ್ಥಳದಲ್ಲಿ ಪೊಲೀಸ್ರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ‌. ಜ್ಯೋತಿ ಗ್ಯಾಸ್ ಎಂಬ ಕಂಪನಿಯಿಂದ‌ ಸಿಲಿಂಡರ್ ತಂದಿದ್ದರು ಎನ್ನಲಾಗಿದೆ.. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು ತನಿಖೆ ನಂತರ ಮತ್ತಷ್ಟು ವಿಚಾರಗಳು ಗೊತ್ತಾಗಬೇಕಿದೆ.