ಚಿಕ್ಕೋಡಿ: ಜಮೀನು ವಿವಾದ ಎರಡು ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ
ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖನದಾಳ ಗ್ರಾಮದಲ್ಲಿ ಘಟನೆ ನಡೆದಿದೆ.
ರಂಗಪ್ಪ ನಾಯಿಕ,ಪ್ರಹ್ಲಾದ್ ನಾಯಿಕ, ಲಕ್ಷ್ಮೀ ಬಾಯಿ ನಾಯಿಕ, ಗುರುಸಿದ್ದಪ್ಪ ನಾಯಿಕ, ಸುಪ್ರೀತ ನಾಯಿಕ ಗಾಯಗೊಂಡ ಗಾಯಾಳುಗಳು. ಮುಗಳಖೋಡ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಗಾಯಾಳುಗಳನ್ನು ಚಿಕಿತ್ಸೆ ಕೊಡಿಸಲಾಗಿದೆ. ಗೋಪಾಲ ನಾಯಿಕ, ಸುರೇಶ ನಾಯಿಕ ಎಂಬವರು ಹಲ್ಲೆ ನಡೆಸಿರುವ ಆರೋಪಗಳು ಕೇಳಿ ಬಂದಿವೆ.