- Home
- Entertainment
- TV Talk
- ಹಳ್ಳಿಕಾರ್ ಸಾಮ್ರಾಟ 'ಏಕಲವ್ಯ' ಹೋರಿ ಇನ್ನಿಲ್ಲ: ಕಣ್ಣೀರ ಕೋಡಿ ಹರಿಸಿದ ವರ್ತೂರು ಸಂತೋಷ್; ಜಾತ್ರೆಯಂತೆ ಸೇರಿದ ಜನ
ಹಳ್ಳಿಕಾರ್ ಸಾಮ್ರಾಟ 'ಏಕಲವ್ಯ' ಹೋರಿ ಇನ್ನಿಲ್ಲ: ಕಣ್ಣೀರ ಕೋಡಿ ಹರಿಸಿದ ವರ್ತೂರು ಸಂತೋಷ್; ಜಾತ್ರೆಯಂತೆ ಸೇರಿದ ಜನ
ಹಳ್ಳಿಕಾರ್ ತಳಿ ಸಂರಕ್ಷಕ ವರ್ತೂರು ಸಂತೋಷ್ ಅವರ ಪ್ರಸಿದ್ಧ ಏಕಲವ್ಯ ಹೋರಿ ಅನಾರೋಗ್ಯದಿಂದ ನಿಧನವಾಗಿದೆ. ಹಲವು ಜಿಲ್ಲೆಗಳಲ್ಲಿ ಖ್ಯಾತಿ ಪಡೆದಿದ್ದ ಈ ಹೋರಿಯನ್ನು ಕಳೆದುಕೊಂಡ ಸಂತೋಷ್, ಕುಟುಂಬದ ಸದಸ್ಯನಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಹಳ್ಳಿಕಾರ್ ತಳಿ ಹಸುಗಳ ಸಂರಕ್ಷಕ ವರ್ತೂರು ಸಂತೋಷ್ ಅವರ ನೆಚ್ಚಿನ ಏಕಲವ್ಯ ಹೋರಿ ನಿನ್ನೆ ಸಂಜೆ ಸಾವನ್ನಪ್ಪಿದೆ. ಅಜಾನುಬಾಹುವಿನಂತೆ ಇದ್ದ ಹಳ್ಳಿಕಾರ್ ಹೋರಿ ಬೆಂಗಳೂರು, ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಸುತ್ತಲಿನ 10 ಜಿಲ್ಲೆಗಳಿಗೆ ಭಾರೀ ಪ್ರಸಿದ್ಧಿಯನ್ನು ಪಡೆದಿತ್ತು. ಈ ಹೋರಿಯನ್ನು ವರ್ತೂರು ಸಂತೋಷ್ ಅವರು ಜಿಕೆವಿಕೆಯನ್ನು ಭಾರೀ ಸಂತಸಪಟ್ಟಿದ್ದರು.
ಏಕಲವ್ಯ ಹಳ್ಳಿಕಾರ್ ಹೋರಿಯನ್ನು ಮೊದಲು ಉದ್ಯಮಿ ಹಾಗೂ ಮಾಜಿ ಶಾಸಕ ಮಸಾಲಾ ಜಯರಾಂ ಅವರು 26 ಲಕ್ಷ ರೂ.ಗೆ ಖರೀದಿ ಮಾಡಿದ್ದರು. ಅವರಿಂದ ಪುನಃ ಈ ಹೋರಿಯನ್ನು ವರ್ತೂರು ಸಂತೋಷ್ ಅವರು ಖರೀದಿ ಮಾಡಿ, ಇದು ಕೊನೆಗಾಲದವರೆಗೂ ನನ್ನ ಬಳಿಯೇ ಇರುತ್ತದೆ. ಬೇರೆ ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದರು.
ಇನ್ನು ಹಲವು ವರ್ಷಗಳ ಕಾಲ ಏಕಲವ್ಯ ಹೋರಿ ವರ್ತೂರು ಸಂತೋಷ್ ಅವರ ಬಳಿಯೇ ಇತ್ತು. ಹಲವು ಜಾತ್ರೆಗಳಿಗೆ ಪ್ರದರ್ಶನಕ್ಕಾಗಿ ಈ ಹೋರಿಯನ್ನು ವಾಹನದಲ್ಲಿ ಕರೆದೊಯ್ದು ವಾಪಸ್ ಕರೆದುಕೊಂಡು ಬರಲಾಗುತ್ತಿತ್ತು. ಹೀಗಾಗಿ ಸುತ್ತಲಿನ 10 ಜಿಲ್ಲೆಗಳಲ್ಲಿ ಹಳ್ಳಿಕಾರ್ ಹೋರಿ ಪ್ರಿಯರಿಗೆ ಏಕಲವ್ಯ ಹೋರಿ ಬಗ್ಗೆ ಎಲ್ಲಿಲ್ಲದ ಪ್ರೀತಿ ಇತ್ತು.
ಆದರೆ, ನಿನ್ನೆ ಸಂಜೆ ವೇಳೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದ್ದು, ಅಸುನೀಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ವರ್ತೂರು ಸಂತೋಷ್ ಕಣ್ಣೀರಿನ ಕೋಡಿಯನ್ನೇ ಹರಿಸಿದ್ದಾರೆ. ಕುಟುಂಬದ ಒಬ್ಬ ಸದಸ್ಯರನ್ನೇ ಕಳೆದುಕೊಂಡಂತೆ ದುಃಖ ವ್ಯಕ್ತಪಡಿಸಿದ್ದಾರೆ. ಇನ್ನು ಹೋರಿಯ ಅಂತಿಮ ವಿಧಿ ವಿಧಾನವನ್ನು ಕುಟುಂಬದ ಒಬ್ಬ ಸದಸ್ಯರಂತೆಯೇ ನೆರವೇರಿಸಿದ್ದಾರೆ.
ಏಕಲವ್ಯ ಹೋರಿಯ ಅಂತಿಮಯಾತ್ರೆಗೆ ಪೂಜೆ ಸಲ್ಲಿಸಲು ಮಂಡ್ಯ ಜಿಲ್ಲೆ ಗೌಡಗೆರೆಯ ಬಸವನನ್ನು ಕರೆಸಲಾಗಿತ್ತು. ಬಸವ ದೇವರು ಅನುಮತಿಯನ್ನು ಕೊಟ್ಟ ನಂತರ ಟ್ರ್ಯಾಕ್ಟರ್‌ನಲ್ಲಿ ಏಕಲವ್ಯ ಹೋರಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡುತ್ತಾ ಅಂತಿಮ ಯಾತ್ರೆ ಮಾಡಲಾಯಿತು. ಈ ವೇಳೆ ಸಾವಿರಾರು ಜನರು ಜಾತ್ರೆಯಂತೆ ಸೇರಿದ್ದರು.
ವರ್ತೂರು ಸಂತೋಷ್ ಅವರು ಹೋರಿಯನ್ನು ತಮ್ಮ ಜಮೀನಿನಲ್ಲಿ ಸಮಾಧಿಯನ್ನು ಮಾಡಲಾಗಿದೆ. ಇದನ್ನೂ ಮುನ್ನ ಅಂತಿಮ ಪೂಜೆಗಳನ್ನು ಕೂಡ ಭಕ್ತಿಯಿಂದಲೇ ನೆರವೇರಿಸಿದರು. ಗಜಗಾತ್ರದ ಹೋರಿಯನ್ನು ಕಳೆದುಕೊಂಡು ವರ್ತೂರು ಸಂತೋಷ್ ಹಾಗೂ ಅವರ ತಂಡದ ಸದಸ್ಯರ ದುಃಖ ಮುಗಿಲುಮುಟ್ಟಿತ್ತು.
ವರ್ತೂರು ಸಂತೋಷ್ ಅವರು ಬೆಂಗಳೂರು ಮೂಲದವರಾಗಿದ್ದರೂ ಹಳ್ಳಿಕಾರ್ ತಳಿ ಹಸು ಮತ್ತು ಹೋರಿಗಳ ಸಂರಕ್ಷಣೆ ಖ್ಯಾತಿಯಿಂದಲೇ ಬಿಗ್ ಬಾಸ್ ಮನೆಗೆ ಬಂದಿದ್ದರು. ಇಲ್ಲಿ ತಮ್ಮ ಕೈಲಾದಷ್ಟು ಹಳ್ಳಿಕಾರ್ ತಳಿ ಹಸುಗಳ ಬಗ್ಗೆ ಜಾಗೃತಿ ಮೂಡಿಸಿ, ಸ್ಥಳೀಯ ದೇಸಿ ತಳಿಯನ್ನು ಉಳಿಸಿ ಸಂರಕ್ಷಣೆ ಮಾಡಬೇಕು ಎಂದು ಅರಿವು ಮೂಡಿಸಿದ್ದರು. ಬಿಗ್ ಬಾಸ್ ಸ್ಪರ್ಧೆಯ ನಂತರ ವರ್ತೂರು ಸಂತೋಷ್ ಅವರ ಖ್ಯಾತಿ ಹಾಗೂ ಹಳ್ಳಿಕಾರ್ ತಳಿಯ ಹಸುಗಳ ಖ್ಯಾತಿಯೂ ಹೆಚ್ಚಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

