Tokyo Olympics 2020 Team India Expects Medals in 7 Sports Events kvn
Gallery Icon

ಈ ಸಲ 7 ಕ್ರೀಡೆಗಳಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಇಟ್ಟುಕೊಂಡಿದೆ ಟೀಂ ಇಂಡಿಯಾ

ಬೆಂಗಳೂರು: ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ 85 ಪದಕಗಳಿಗೆ ಸ್ಪರ್ಧಿಸಲಿದೆ. ಕೆಲ ಕ್ರೀಡೆಗಳಲ್ಲಿ ಭಾರತದ ಪಾಲಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಸಿಕ್ಕಿರುವುದೇ ಪದಕ ಗೆದ್ದ ಸಾಧನೆ ಎಂದರೆ ತಪ್ಪಾಗುವುದಿಲ್ಲ. ಇದೇ ಮೊದಲ ಬಾರಿಗೆ ಫೆನ್ಸಿಂಗ್‌ನಲ್ಲಿ ಭಾರತ ಸ್ಪರ್ಧಿಸಲಿದೆ. 2 ದಶಕಗಳ ಬಳಿಕ ಈಕ್ವೆಸ್ಟ್ರಿಯನ್‌ನಲ್ಲಿ ಸ್ಪರ್ಧಿಸಲಿದೆ. ಮೊದಲ ಬಾರಿಗೆ ಭಾರತದ ಮಹಿಳಾ ಸೈಲರ್‌ ಸ್ಪರ್ಧಿಸಲಿದ್ದಾರೆ. 

ಇದೇ ಮೊದಲ ಬಾರಿಗೆ ಭಾರತದ ಈಜುಗಾರರು ‘ಎ’ ವಿಭಾಗದ ಸಮಯ ಸಾಧಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಆಯಾ ದೇಶಗಳ ಸಿದ್ಧತೆ, ಕ್ರೀಡಾಪಟುಗಳ ಲಯ, ಸ್ಥಿರತೆ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಒಲಿಂಪಿಕ್ಸ್‌ನ ವರ್ಚುವಲ್‌ ಪದಕ ಪಟ್ಟಿಯನ್ನು ಸಿದ್ಧಪಡಿಸುವ ಗ್ರೇಸ್‌ನೋಟ್‌ ಸಂಸ್ಥೆ ಈ ಬಾರಿ ಭಾರತ ಒಟ್ಟು 19 ಪದಕಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿದೆ. ಯಾವ ಕ್ರೀಡೆಗಳಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಇದೆ ಎನ್ನುವ ವಿವರ ಇಲ್ಲಿದೆ.