ಪ್ರತಿಷ್ಠಿತ ಕ್ರೀಡಾಕೂಟ ಟೋಕಿಯೊ ಒಲಿಂಪಿಕ್ಸ್‌ಗೆ ಕೌಂಟ್‌ಡೌನ್ ಕ್ರೀಡಾಕೂಟದ ಜೊತೆ ಏಷ್ಯಾನೆಟ್ ಒಲಿಂಪಿಕ್ಸ್ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಪ್ರತಿ ದಿನ ಭಾರತ ತಂಡದ ಜರ್ಸಿ ಗೆಲ್ಲುವ, ನೆಚ್ಚಿನ ತಾರೆಯರ ಭೇಟಿಯಾಗುವ ಅವಕಾಶ

ಬೆಂಗಳೂರು(ಜು.15): ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ ಜುಲೈ 23ರಿಂದ ಆರಂಭಗೊಳ್ಳಲಿದೆ. ಈ ಬಾರಿ ಭಾರತ ಅತೀ ದೊಡ್ಡ ತಂಡವನ್ನು ಕಳುಹಿಸುತ್ತಿದೆ. ಇದರ ಜೊತೆಗೆ ಪದಕದ ನಿರೀಕ್ಷೆ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಹಲವು ವಿಶೇಷತೆಗಳಿವೆ. ಇದೇ ಮೊದಲ ಬಾರಿಗೆ ಫೆನ್ಸಿಂಗ್ ಕ್ರೀಡಾಕೂಟದಲ್ಲಿ ಭಾರತ ಪಾಲ್ಗೊಳ್ಳುತ್ತಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಫೆನ್ಸರ್ ಭವಾನಿ ದೇವಿ, ಭಾರತದ ಮೊದಲ ಮಹಿಳಾ ಸೈಲರ್ ನೇತ್ರ ಕುಮಾರ್ ಸೇರಿದಂತೆ ಹಲವರ ಮೇಲೆ ಪದಕದ ಭರವಸೆಯೂ ಹೆಚ್ಚಿದೆ.

ಸರಿಸುಮಾರು ಒಂದು ವಾರದಲ್ಲಿ ವಿಶ್ವದ ಅತೀ ದೊಡ್ಡ ಕ್ರೀಡಾಹಬ್ಬ ಆರಂಭಗೊಳ್ಳುತ್ತಿದೆ. ಈ ಸುಂದರ ಹಾಗೂ ರೋಚಕ ಕ್ಷಣಗಳನ್ನು ಮತ್ತಷ್ಟು ಸ್ಮರಣೀಯವಾಗಿಸಲು ಏಷ್ಯಾನೆಟ್ ಸುವರ್ಣನ್ಯೂಸ್, ಭಾರತೀಯ ಕ್ರೀಡಾಪ್ರಾದಿಕಾರ(SAI) ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(IOA) ಜಂಟಿಯಾಗಿ ಒಲಿಂಪಿಕ್ಸ್ ಜಾಗೃತಿ ಮೂಡಿಸಲು ಮುಂದಾಗಿದೆ.

ಒಲಿಂಪಿಕ್ಸ್ ಜಾಗೃತಿ ಅಭಿಯಾನದಡಿ ಟೋಕಿಯೊ 2020 ರ ಒಲಿಂಪಿಕ್ ರಸಪ್ರಶ್ನೆ(Quiz)ಆರಂಭಿಸಿದೆ. ಒಲಿಂಪಿಕ್ಸ್ ಇತಿಹಾಸ, ಕ್ರೀಡೆ ಮತ್ತು ವಿಭಾಗಗಳು, ಕ್ರೀಡಾಪಟುಗಳ ಹಿಂದಿನ ಸಾಧನೆಗಳು, ವಿಶ್ವ ದಾಖಲೆಗಳು, ಪ್ರಸ್ತುತ ಮತ್ತು ಹಿಂದಿನ ಭಾರತೀಯ ಕ್ರೀಡಾಪಟುಗಳು, ಸ್ಮರಣೀಯ ನಿಮಿಷಗಳನ್ನು ನೆನಪಿಸುವ ಪ್ರಯತ್ನವಾಗಿದೆ. ಇದರೊಂದಿಗೆ ಆಕರ್ಷಕ ಬಹುಮಾನ ಗೆಲ್ಲೋ ಅವಕಾಶವೂ ಇದೆ.

ಈ ಕ್ವಿಜ್ ಸವಾಲು ಸ್ವೀಕರಿಸಿದರೆ ಪ್ರತಿ ದಿನ ಭಾರತ ತಂಡದ ಜರ್ಸಿ ಗೆಲ್ಲುವ ಸುವರ್ಣ ಅವಕಾಶ ಪಡೆಯಲಿದ್ದೀರಿ. ನೀವು ಮಾತ್ರವಲ್ಲ, ನಿಮ್ಮ ಸ್ನೇಹಿತರು, ಆಪ್ತರು, ಕುಟುಂಬಸ್ಥರನ್ನು ಆಹ್ವಾನಿಸಬಹುದು. ಅಥವಾ ನೀವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋ ಮೂಲಕ ನಿಮ್ಮ ಆಪ್ತರು ಟೀಂ ಇಂಡಿಯಾ ಜರ್ಸಿ ಗೆಲ್ಲುವ ಅವಕಾಶವನ್ನು ನೀವು ಕಲ್ಪಿಸಬಹುದು.

ಹಾಗಾದರೆ ಇನ್ಯಾಕೆ ತಡ, ಟೋಕಿಯೊ 2020 ರ ಒಲಿಂಪಿಕ್ ರಸಪ್ರಶ್ನೆ ಸವಾಲು ಸ್ವೀಕರಿಸಲು ಇಲ್ಲಿ ಕ್ಲಿಕ್ ಮಾಡಿ