Asianet Suvarna News Asianet Suvarna News

‘ಚಿಯರ್‌4ಇಂಡಿಯಾ’ ಭಾರತದ ಒಲಿಂಪಿಕ್‌ ಗೀತೆ ಬಿಡುಗಡೆ

* ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ತಂಡದ ಅಧಿಕೃತ ಗೀತೆ ‘ಚಿಯರ್‌4ಇಂಡಿಯಾ’ ಬಿಡುಗಡೆ

* ಕ್ರೀಡಾಸಚಿವ ಅನುರಾಗ್ ಠಾಕೂರ್ ಅವರಿಂದ ಚಿಯರ್‌4ಇಂಡಿಯಾ’ ಬಿಡುಗಡೆ

* ಚಿಯರ್‌4ಇಂಡಿಯಾ’ ಹಾಡಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೈಚಳಕ

Sports Minister Anurag Thakur Launches Official Cheer 4 India Song For Tokyo Olympics 2020 by music composer AR Rahman kvn
Author
New Delhi, First Published Jul 15, 2021, 9:21 AM IST

ನವದೆಹಲಿ(ಜು.15): ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ತಂಡದ ಅಧಿಕೃತ ಗೀತೆ ‘ಚಿಯರ್‌4ಇಂಡಿಯಾ’ವನ್ನು ಬುಧವಾರ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಬಿಡುಗಡೆಗೊಳಿಸಿದರು. 

ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್‌ ರಚಿಸಿರುವ ಈ ಗೀತೆಯನ್ನು ಯುವ ಗಾಯಕಿ ಅನನ್ಯ ಬಿರ್ಲಾ ಹಾಕಿದ್ದಾರೆ. ‘ದೇಶದ ಎಲ್ಲರೂ ಈ ಗೀತೆಯನ್ನು ಕೇಳಿ, ಭಾರತ ತಂಡವನ್ನು ಬೆಂಬಲಿಸಿ’ ಎಂದು ಠಾಕೂರ್‌ ಮನವಿ ಮಾಡಿದ್ದಾರೆ. ಈ ಹಾಡಿನಲ್ಲಿ ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಟ್ಟ ಲಿಯಾಂಡರ್ ಪೇಸ್‌, ರಾಜ್ಯವರ್ಧನ್ ಸಿಂಗ್ ರಾಥೋಡ್, ಅಭಿನವ್ ಬಿಂದ್ರಾ, ಮೇರಿ ಕೋಮ್‌, ಸಾಕ್ಷಿ ಮಲಿಕ್‌, ಪಿ,ವಿ ಸಿಂಧು ಅವರ ಗೆಲುವಿನ ಕ್ಷಣಗಳನ್ನು ಮೆಲುಕು ಹಾಕಲಾಗಿದೆ.

ಗುರಿ ನಿನ್ನ ಮುಂದಿದೆ, ಗೆದ್ದು ಬನ್ನಿ: ಭಾರತದ ಒಲಿಂಪಿಕ್ಸ್ ಧ್ಯೇಯ ಗೀತೆ ಬಿಡುಗಡೆ

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಿ ಆಗಸ್ಟ್ 08ರವರೆಗೆ ನಡೆಯಲಿದೆ. ಭಾರತದಿಂದ ಈ ಬಾರಿ 127 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಹಿಂದೆಂದಿಗಿಂತಲೂ ಹೆಚ್ಚಿನ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

Follow Us:
Download App:
  • android
  • ios