ಈ ಸಲ 7 ಕ್ರೀಡೆಗಳಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಇಟ್ಟುಕೊಂಡಿದೆ ಟೀಂ ಇಂಡಿಯಾ
ಬೆಂಗಳೂರು: ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ 85 ಪದಕಗಳಿಗೆ ಸ್ಪರ್ಧಿಸಲಿದೆ. ಕೆಲ ಕ್ರೀಡೆಗಳಲ್ಲಿ ಭಾರತದ ಪಾಲಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಸಿಕ್ಕಿರುವುದೇ ಪದಕ ಗೆದ್ದ ಸಾಧನೆ ಎಂದರೆ ತಪ್ಪಾಗುವುದಿಲ್ಲ. ಇದೇ ಮೊದಲ ಬಾರಿಗೆ ಫೆನ್ಸಿಂಗ್‌ನಲ್ಲಿ ಭಾರತ ಸ್ಪರ್ಧಿಸಲಿದೆ. 2 ದಶಕಗಳ ಬಳಿಕ ಈಕ್ವೆಸ್ಟ್ರಿಯನ್‌ನಲ್ಲಿ ಸ್ಪರ್ಧಿಸಲಿದೆ. ಮೊದಲ ಬಾರಿಗೆ ಭಾರತದ ಮಹಿಳಾ ಸೈಲರ್ ಸ್ಪರ್ಧಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದ ಈಜುಗಾರರು ‘ಎ’ ವಿಭಾಗದ ಸಮಯ ಸಾಧಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಆಯಾ ದೇಶಗಳ ಸಿದ್ಧತೆ, ಕ್ರೀಡಾಪಟುಗಳ ಲಯ, ಸ್ಥಿರತೆ ಸೇರಿ ಹಲವು ಅಂಶಗಳನ್ನು ಪರಿಗಣಿಸಿ ಒಲಿಂಪಿಕ್ಸ್‌ನ ವರ್ಚುವಲ್ ಪದಕ ಪಟ್ಟಿಯನ್ನು ಸಿದ್ಧಪಡಿಸುವ ಗ್ರೇಸ್‌ನೋಟ್ ಸಂಸ್ಥೆ ಈ ಬಾರಿ ಭಾರತ ಒಟ್ಟು 19 ಪದಕಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿದೆ. ಯಾವ ಕ್ರೀಡೆಗಳಲ್ಲಿ ಭಾರತಕ್ಕೆ ಪದಕ ನಿರೀಕ್ಷೆ ಇದೆ ಎನ್ನುವ ವಿವರ ಇಲ್ಲಿದೆ.
1. ಶೂಟಿಂಗ್
ಭಾರತದ 15 ಶೂಟರ್‌ಗಳು ಅರ್ಹತೆ ಪಡೆದಿದ್ದು, ಈ ಪೈಕಿ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಇಳವೆನಿಲ್ ವಳರಿವನ್ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಲಿರುವ ಮನು ಭಾಕರ್ ಹಾಗೂ ಸೌರಭ್ ಚೌಧರಿ ಪದಕ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತೀಯ ಶೂಟರ್‌ಗಳ ಇತ್ತೀಚಿನ ಲಯದ ಆಧಾರದ ಮೇಲೆ ಹೇಳುವುದಾದರೆ ಇನ್ನೂ ಕೆಲವು ಪದಕಗಳು ಬಂದರೂ ಅಚ್ಚರಿಯಿಲ್ಲ.
2. ಕುಸ್ತಿ
ಕಳೆದ 3 ಒಲಿಂಪಿಕ್ಸ್‌ನಲ್ಲೂ ಭಾರತಕ್ಕೆ ಕುಸ್ತಿಯಲ್ಲಿ ಪದಕ ದೊರೆತಿದೆ. 2008ರಲ್ಲಿ ಸುಶೀಲ್ ಕುಮಾರ್, 2012ರಲ್ಲಿ ಸುಶೀಲ್ ಹಾಗೂ ಯೋಗೇಶ್ವರ್ ದತ್, 2016ರಲ್ಲಿ ಸಾಕ್ಷಿ ಮಲಿಕ್ ಪದಕ ಗೆದ್ದಿದ್ದರು. ಈ ಬಾರಿಯೂ ಕುಸ್ತಿಯಲ್ಲಿ 2 ಪದಕ ನಿರೀಕ್ಷೆ ಮಾಡಲಾಗುತ್ತಿದೆ.
3. ಬಾಕ್ಸಿಂಗ್
ಬಾಕ್ಸಿಂಗ್‌ನಲ್ಲೂ ಭಾರತ ಪದಕ ಗೆಲ್ಲುವ ನಿರೀಕ್ಷೆ ಇರಿಸಿಕೊಂಡಿದೆ. 5 ಪುರುಷ, 9 ಮಹಿಳಾ ಬಾಕ್ಸರ್‌ಗಳು ಕಣದಲ್ಲಿದ್ದು, ಒಟ್ಟು 4 ಪದಕಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ.
4. ಆರ್ಚರಿ
ಒಲಿಂಪಿಕ್ಸ್ ಆರ್ಚರಿಯಲ್ಲಿ ಭಾರತ ಈ ವರೆಗೂ ಪದಕ ಗೆದ್ದಿಲ್ಲವಾದರೂ, ಈ ಬಾರಿ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಮಿಶ್ರ ತಂಡ ವಿಭಾಗವನ್ನು ಹೊಸದಾಗಿ ಪರಿಚಯಿಸಲಾಗುತ್ತಿದ್ದು, ಈ ವಿಭಾಗದಲ್ಲಿ ಭಾರತ ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ.
5. ವೇಟ್‌ಲಿಫ್ಟಿಂಗ್
ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಕೇವಲ ಒಬ್ಬ ಕ್ರೀಡಾಪಟು ಅರ್ಹತೆ ಪಡೆದಿದ್ದರೂ, ಪದಕ ನಿರೀಕ್ಷೆ ಇರುವುದು ವಿಶೇಷ. ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಲಿದ್ದು, ಅವರ ಇತ್ತೀಚಿನ ಲಯ ಅವರನ್ನು ಪದಕ ಗೆಲ್ಲುವ ಫೇವರಿಟ್ ಸ್ಥಾನದಲ್ಲಿ ನಿಲ್ಲಿಸಿದೆ.
6. ಬ್ಯಾಡ್ಮಿಂಟನ್
ಕಳೆದ 2 ಒಲಿಂಪಿಕ್ಸ್‌ನಲ್ಲೂ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಪದಕ ದೊರೆತಿದೆ. 2012ರಲ್ಲಿ ಸೈನಾ ನೆಹ್ವಾಲ್, 2016ರಲ್ಲಿ ಪಿ.ವಿ.ಸಿಂಧು ಪದಕ ಜಯಿಸಿದ್ದರು. ಈ ಬಾರಿ ಸಿಂಧು ಮತ್ತೊಮ್ಮೆ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟು ಎನಿಸಿದ್ದಾರೆ.
7. ಅಥ್ಲೆಟಿಕ್ಸ್