ಒಲಿಂಪಿಕ್ಸ್ ಸೈಲಿಂಗ್ ಪದಕ ಬೇಟೆಗೆ ಕನ್ನಡಿಗ ಗಣಪತಿ ರೆಡಿ!

* ಒಲಿಂಪಿಕ್ಸ್‌ ಸೇಯ್ಲಿಂಗ್‌ನಲ್ಲಿ ಕನ್ನಡಿಗ ಗಣಪತಿ ಪದಕ ನಿರೀಕ್ಷೆ

* 49ಇಆರ್‌ ವಿಭಾಗದಲ್ಲಿ ಸ್ಪರ್ಧೆ

* ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಆಯ್ಕೆ

Meet KC ganapathy young sailors from Bengaluru who will represent India at the Olympics pod

ವಿಘ್ನೇಶ್‌ ಎಂ. ಭೂತನಕಾಡು

ಮಡಿಕೇರಿ(ಜು.18): ಹೆಚ್ಚು ಜನಪ್ರಿಯವಲ್ಲದ, ಅತ್ಯಂತ ಸಾಹಸ ಹಾಗೂ ಕಠಿಣ ಕ್ರೀಡೆ ಎಂದೇ ಕರೆಯಲಾಗುವ ಸೇಯ್ಲಿಂಗ್‌(ನೌಕಾಯಾನ)ನಲ್ಲಿ ರಾಜ್ಯದ ಕ್ರೀಡಾಪಟು ಟೋಕಿಯೋ ಒಲಿಂಪಿP್ಸ…ಗೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಕೊಡಗು ಮೂಲದ ಕೇಳಪಂಡ ಚೆಂಗಪ್ಪ ಗಣಪತಿ ಸೇಯ್ಲಿಂಗ್‌ನ 49ಇಆರ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಇದು ಇಬ್ಬರು ಸ್ಪರ್ಧಿಸಲು ಸೇರಿ ಆಡುವ ವಿಭಾಗವಾಗಿದ್ದು, ವರುಣ್‌ ಥಾಕ್ಕರ್‌ರೊಂದಿಗೆ ಗಣಪತಿ ಸ್ಪರ್ಧೆಗಿಳಿಯಲಿದ್ದಾರೆ.

ಗಣಪತಿ ತಮ್ಮ ವೃತ್ತಿ ಬದುಕಿನ ಬಗ್ಗೆ, ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಆಯ್ಕೆಯಾದ ರೀತಿಯ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಚಿಕ್ಕಂದಿನಿಂದಲೇ ಸೇಯ್ಲಿಂಗ್‌ನಲ್ಲಿ ಅತೀವ ಆಸಕ್ತಿ ಹೊಂದಿದ್ದ ಗಣಪತಿಗೆ ಸ್ನೇಹಿತನೊಬ್ಬನ ತಂದೆಯಿಂದ ಉತ್ತಮ ತರಬೇತಿ ದೊರೆಯಿತು. 2007ರಿಂದ ಭಾರತ ತಂಡದಲ್ಲಿರುವ ಗಣಪತಿ, 2010ರ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಸಹ ಗೆದ್ದಿದ್ದರು.

ಒಲಿಂಪಿಕ್‌ಗೆ ಸಿದ್ಧತೆ ಹೇಗಿದೆ?: ಸೇಯ್ಲಿಂಗ್‌ಗೆ ಬಳಸುವ ಬೋಟ್‌ಗಳು ಬಹಳ ದುಬಾರಿ. ಅಲ್ಲದೇ ಭಾರತದಲ್ಲಿ ಹೆಚ್ಚು ಜನಪ್ರಿಯತೆಯೂ ಇಲ್ಲದ ಕಾರಣ ಅಭ್ಯಾಸಕ್ಕಾಗಿ ಹೆಚ್ಚಿನ ಪರಿಶ್ರಮ ವಹಿಸಬೇಕಿದೆ. ಆದರೆ ಗಣಪತಿ ತಮಗೆ ಎದುರಾದ ಎಲ್ಲಾ ಸವಾಲುಗಳನ್ನು ಮೀರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ‘ಚೆನ್ನೈನಲ್ಲಿ ಕಠಿಣ ಅಭ್ಯಾಸ ನಡೆಸಿದ್ದೇವೆ. ನಾನು ಹಾಗೂ ವರುಣ್‌ 2011ರಿಂದ ಜೊತೆಯಲ್ಲಿ ಸ್ಪರ್ಧಿಸುತ್ತಿದ್ದೇವೆ. ಒಲಿಂಪಿಕ್ಸ್‌ಗೆ ಹೋಗಲೇಬೇಕು ಎನ್ನುವ ಹಠದಿಂದ ಶ್ರಮ ವಹಿಸಿ, ಟೋಕಿಯೋ ಗೇಮ್ಸ್‌ಗೆ ಅರ್ಹತೆ ಗಳಿಸಿದೆವು’ ಎಂದು ಗಣಪತಿ ಹೇಳಿಕೊಂಡಿದ್ದಾರೆ.

ಶಾಲೆ ಬಿಟ್ಟು ಅಭ್ಯಾಸ: 25 ವರ್ಷ ವಯಸ್ಸಿನ ಗಣಪತಿ, 2010ರಲ್ಲಿ ಶಾಲೆ ಬಿಟ್ಟು ಸಂಪೂರ್ಣವಾಗಿ ಸೇಯ್ಲಿಂಗ್‌ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಾನು, ತಾಯಿ ಚೆನ್ನೈನಲ್ಲಿ ವಾಸವಿದ್ದೇವೆ. ತಂದೆ ಕೆಲ ವರ್ಷಗಳ ಹಿಂದೆ ತೀರಿಕೊಂಡರು. ತಂದೆ ಕೊಡಗಿನ ಹಾತೂರು ಗ್ರಾಮದವರು, ತಾಯಿ ಅಮ್ಮತ್ತಿಯವರು. ರಜೆ ಇರುವಾಗ ಕೊಡಗಿಗೆ ಬರುತ್ತಿರುತ್ತೇನೆ. ಒಲಿಂಪಿಕ್ಸ್‌ ಮುಗಿದ ಬಳಿಕ ಕೊಡಗಿಗೆ ಭೇಟಿ ನೀಡುತ್ತೇನೆ’ ಎಂದರು ಗಣಪತಿ ಹೇಳಿದರು.

ಆರು ವರ್ಷ ಇರುವಾಗಲೇ ನನಗೆ ಸೇಯ್ಲಿಂಗ್‌ ಕ್ರೀಡೆಯಲ್ಲಿ ಆಸಕ್ತಿ ಬಂತು. ಪೂರ್ಣ ಪ್ರಮಾಣದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ಈ ಕ್ರೀಡೆಗೆ ಹೆಚ್ಚು ವೆಚ್ಚ ಆಗುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದ ಮೂಲಕ ಪಾಲ್ಗೊಳ್ಳುತ್ತಿದ್ದೆ. ಇದೀಗ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವುದು ಖುಷಿ ನೀಡಿದ್ದು, ಪದಕ ಗೆಲ್ಲುವ ಭರವಸೆಯಲ್ಲಿದ್ದೇನೆ.

- ಕೇಳಪಂಡ ಚೆಂಗಪ್ಪ ಗಣಪತಿ, ಸೇಯ್ಲಿಂಗ್‌ ಪಟು

Latest Videos
Follow Us:
Download App:
  • android
  • ios