Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್‌: ಚಿನ್ನದ ಬೇಟೆಗೆ ರೆಡಿಯಾದ ನೊವಾಕ್ ಜೋಕೋವಿಚ್‌

* ಟೋಕಿಯೋ ಒಲಿಂಪಿಕ್ಸ್‌ಗೆ ರೆಡಿಯಾದ ನಂ.1 ಟೆನಿಸಿಗ ಜೋಕೋವಿಚ್

* ವಿಂಬಲ್ಡನ್‌ ಚಾಂಪಿಯನ್‌ ಜೋಕೋ ಗೋಲ್ಡನ್‌ ಸ್ಲಾಂ ಮೇಲೆ ಕಣ್ಣು

* ಗೋಲ್ಡನ್‌ ಗ್ರ್ಯಾನ್‌ ಸ್ಲಾಂ ಇತಿಹಾಸ ಬರೆಯುತ್ತಾರಾ ಸರ್ಬಿಯಾದ ಆಟಗಾರ?

Tennis Legend Novak Djokovic posts he is in for Tokyo Olympics 2020 kvn
Author
Tokyo, First Published Jul 16, 2021, 11:59 AM IST

ಟೋಕಿಯೋ(ಜು.16) ವಿಶ್ವದ ನಂ.1 ಟೆನಿಸಿಗ, ಸರ್ಬಿಯಾದ ನೊವಾಕ್ ಜೋಕೋವಿಚ್‌ ವಿಂಬಲ್ಡನ್‌ ಟ್ರೋಫಿ ಗೆಲ್ಲುವುದರೊಂದಿಗೆ ಗೋಲ್ಡನ್‌ ಸ್ಲಾಂ(ಸತತ 4 ಗ್ರ್ಯಾನ್‌ ಸ್ಲಾಂ+ಒಲಿಂಪಿಕ್ಸ್‌ನಲ್ಲಿ ಚಿನ್ನ) ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದ್ದು, ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ರೆಡಿಯಾಗಿದ್ದಾರೆ.

ವಿಂಬಲ್ಡನ್‌ ಗೆಲ್ಲುವ ಮೂಲಕ 20 ಗ್ರ್ಯಾನ್‌ ಸ್ಲಾಂ ಗೆದ್ದ ಸಾಧನೆ ಮಾಡಿದ 34 ವರ್ಷದ ನೊವಾಕ್ ಜೋಕೋವಿಚ್‌, ಈಗ ಟೋಕಿಯೋ ಒಲಿಂಪಿಕ್ಸ್‌ನತ್ತ ಮುಖ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸರ್ಬಿಯಾವನ್ನು ಪ್ರತಿನಿಧಿಸಲು ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್ ಜೋಕೋವಿಚ್ ಯುಎಸ್ ಓಪನ್‌ ಗ್ರ್ಯಾನ್‌ಸ್ಲಾಂ ಹಾಗೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರೆ, ಕ್ಯಾಲೆಂಡರ್ ವರ್ಷದಲ್ಲಿ ಸತತ 4 ಗ್ರ್ತಾನ್‌ ಸ್ಲಾಂ ಹಾಗೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದ ಗೆದ್ದು ಗೋಲ್ಡನ್‌ ಸ್ಲಾಂ ಪಡೆದ ಮೊದಲ ಪುರುಷ ಟೆನಿಸ್ ಆಟಗಾರ ಎನಿಸಲಿದ್ದಾರೆ. 1988ರಲ್ಲಿ ಸ್ಟೆಫಿ ಗ್ರಾಫ್‌ ಗೋಲ್ಡನ್‌ ಸ್ಲಾಂ ಜಯಿಸಿದ ಮೊದಲ ಹಾಗೂ ಏಕೈಕ ಮಹಿಳಾ ಟೆನಿಸ್ ಆಟಗಾರ್ತಿ ಎನಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ರೋಜರ್ ಫೆಡರರ್

ಟೋಕಿಯೋ ಒಲಿಂಪಿಕ್ಸ್‌ಗೆ ತೆರಳುವ ಮುನ್ನ ಜೋಕೋವಿಚ್‌ ತಮ್ಮ 6 ವರ್ಷದ ಅಭಿಮಾನಿಗೆ ಹುಟ್ಟುಹಬ್ಬದ ಶುಭಕೋರಿ ಸರ್ಫ್ರೈಸ್‌ ಕೊಟ್ಟಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಈಗಾಗಲೇ ತಾರಾ ಆಟಗಾರರಾದ ರೋಜರ್ ಫೆಡರರ್, ರಾಫೆಲ್‌ ನಡಾಲ್, ಡೋಮಿನಿಕ್‌ ಥೀಮ್‌ ಮುಂತಾದ ಆಟಗಾರರು ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ನೊವಾಕ್ ಜೋಕೋವಿಚ್‌ ಟೋಕಿಯೋ ಒಲಿಂಪಿಕ್ಸ್‌ ಪುರುಷರ ಟೆನಿಸ್ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲಬಲ್ಲ ನೆಚ್ಚಿನ ಆಟಗಾರ ಎನಿಸಿದ್ದಾರೆ.

Road to Tokyo 2020; ಒಲಿಂಪಿಕ್ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಪ್ರತಿ ದಿನ ಗೆಲ್ಲಿ ಟೀಂ ಇಂಡಿಯಾ ಜರ್ಸಿ! ಕಿಜ್ವ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

Follow Us:
Download App:
  • android
  • ios