ಟೋಕಿಯೋ ಒಲಿಂಪಿಕ್ಸ್‌: ಚೀನಾದ 431 ಅಥ್ಲೀಟ್ಸ್‌ ಕಣಕ್ಕೆ!

* ಟೋಕಿಯೋ ಒಲಿಂಪಿಕ್ಸ್‌ಗೆ ಅತಿ ಹೆಚ್ಚು ಅಥ್ಲೀಟ್‌ಗಳನ್ನು ಕಳಿಸಿಕೊಟ್ಟ ಚೀನಾ

* ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 431 ಚೀನಾ ಅಥ್ಲೀಟ್‌ಗಳು ಭಾಗಿ

* 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚೀನಾ 639 ಕ್ರೀಡಾಪಟುಗಳನ್ನು ಕಣಕ್ಕಿಳಿಸಿತ್ತು. 

China to send 431 the largest overseas Olympic athletes to Tokyo Olympics 2020 kvn

ಬೀಜಿಂಗ್(ಜು.16)‌: ಮುಂದಿನ ವಾರದಿಂದ ಆರಂಭಗೊಳ್ಳಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ಚೀನಾ ಬರೋಬ್ಬರಿ 431 ಕ್ರೀಡಾಪಟುಗಳನ್ನು ಕಳುಹಿಸಲಿದೆ. ಹೊರ ದೇಶದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಚೀನಾ ಕಳುಹಿಸುತ್ತಿರುವ ಅತಿದೊಡ್ಡ ತಂಡ ಇದಾಗಿದೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.

2008ರಲ್ಲಿ ತಾನೇ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದಾಗ ಚೀನಾ 639 ಕ್ರೀಡಾಪಟುಗಳನ್ನು ಕಣಕ್ಕಿಳಿಸಿತ್ತು. ಈ ಬಾರಿ ಚೀನಾದ 298 ಮಹಿಳಾ, 133 ಪುರುಷ ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಮಹಿಳೆಯರ ಡೈವಿಂಗ್‌ನಲ್ಲಿ ಸ್ಪರ್ಧಿಸಲಿರುವ 14 ವರ್ಷದ ಕ್ವಾನ್‌ ಹೊಂಗ್‌ಚಾನ್‌ ಚೀನಾದ ಅತಿಕಿರಿಯ ಹಾಗೂ ಪುರುಷರ ಈಕ್ವೆಸ್ಟ್ರಿಯನ್‌ನಲ್ಲಿ ಸ್ಪರ್ಧಿಸಲಿರುವ 52 ವರ್ಷದ ಲೀ ಝೆನ್‌ಕ್ವಿಯಾಂಗ್‌ ಚೀನಾದ ಅತಿಹಿರಿಯ ಸ್ಪರ್ಧಿ ಎನಿಸಲಿದ್ದಾರೆ.

Road to Tokyo 2020; ಒಲಿಂಪಿಕ್ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಪ್ರತಿ ದಿನ ಗೆಲ್ಲಿ ಟೀಂ ಇಂಡಿಯಾ ಜರ್ಸಿ!

ಚೀನಾ ದೇಶದಿಂದ ಅಥ್ಲೀಟ್‌ಗಳು ಹಾಗೂ ಸಹಾಯಕ ಸಿಬ್ಬಂದಿಗಳು ಸೇರಿ ಒಟ್ಟು 777 ಮಂದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ ಶೇ.99.61 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಚೀನಾ ಒಲಿಂಪಿಕ್‌ ಸಮಿತಿ ಸ್ಪಷ್ಟಪಡಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 33 ಪ್ರಧಾನ ಸ್ಫರ್ಧೆಗಳು ಹಾಗೂ 339 ಮೈನರ್ ಸ್ಪರ್ಧೆಗಳು ನಡೆಯಲಿವೆ. ಈ ಪೈಕಿ ಚೀನಾ 30 ಮೇಜರ್ ಇವೆಂಟ್ಸ್‌ ಹಾಗೂ 225 ಮೈನರ್ ಇವೆಂಟ್ಸ್‌ಗಳಲ್ಲಿ ಪಾಲ್ಗೊಳ್ಳಲಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ 431 ಅಥ್ಲೀಟ್‌ಗಳ ಪೈಕಿ 138 ಅಥ್ಲೀಟ್‌ಗಳು ಈ ಹಿಂದಿನ ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಈ 138 ಅಥ್ಲೀಟ್‌ಗಳ ಪೈಕಿ 131 ಅಥ್ಲೀಟ್‌ಗಳು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ 19 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು.

Road to Tokyo 2020; ಒಲಿಂಪಿಕ್ ಕ್ವಿಜ್‌ನಲ್ಲಿ ಪಾಲ್ಗೊಳ್ಳಿ ಪ್ರತಿ ದಿನ ಗೆಲ್ಲಿ ಟೀಂ ಇಂಡಿಯಾ ಜರ್ಸಿ! ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್ ಕ್ಲಿಕ್‌ ಮಾಡಿ

Latest Videos
Follow Us:
Download App:
  • android
  • ios