* ಕೊರೋನಾ ಭೀತಿಯ ನಡುವೆಯೇ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ* ಈ ಬಾರಿ ವಿಜೇತ ಅಥ್ಳೀಟ್‌ಗಳೇ ಪದಕದ ಹಾರ ಹಾಕಿಕೊಳ್ಳಬೇಕಿದೆ.* ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭ

ಟೋಕಿಯೋ(ಜು.15): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳು ತಮಗೆ ತಾವೇ ಪದಕ ಹಾಕಿಕೊಳ್ಳಲಿದ್ದಾರೆ. ಕೋವಿಡ್‌ ಆತಂಕದಿಂದಾಗಿ ಈ ಕ್ರಮಕ್ಕೆ ಆಯೋಜಕರು ಮುಂದಾಗಿದ್ದಾರೆ. 

ಈ ಹಿಂದಿನ ಕ್ರೀಡಾಕೂಟಗಳಲ್ಲಿ ಪದಕ ವಿತರಣೆ ಸಮಾರಂಭದ ವೇಳೆ ಗಣ್ಯರು, ಕ್ರೀಡಾಪಟುಗಳ ಕೊರಳಿಗೆ ಪದಕ ಹಾಕುತ್ತಿದ್ದರು. ಆದರೆ ಈ ಬಾರಿ, ಸ್ಯಾನಿಟೈಸ್‌ ಮಾಡಿದ ಟ್ರೇನಲ್ಲಿ ಪದಕಗಳನ್ನು ಇಡಲಾಗುತ್ತದೆ. ಕ್ರೀಡಾಪಟುಗಳು ಅದನ್ನು ತೆಗೆದುಕೊಂಡು ಕೊರಳಿಗೆ ಹಾಕಿಕೊಳ್ಳಲಿದ್ದಾರೆ. ಕ್ರೀಡಾಪಟುಗಳಲ್ಲಿ ಕೊರೋನಾ ಭೀತಿ ಎದುರಾಗದಿರಲಿ ಎನ್ನುವ ಕಾರಣಕ್ಕೆ ಈ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಬಾರಿ ವಿಜೇತರಾದ ಅಥ್ಲೀಟ್‌ಗಳ ಕೊರಳಿಗೆ ಪದಕದ ಹಾರ ಹಾಕಲಾಗುವುದಿಲ್ಲ, ಟ್ರೇನಲ್ಲಿ ಪದಕಗಳನ್ನು ತಂದಿಡಲಾಗುವುದು, ವಿಜೇತ ಅಥ್ಲೀಟ್‌ಗಳು ತಮ್ಮ ಕೊರಳಿಗೆ ತಾವೇ ಪದಕವನ್ನು ಹಾಕಿಕೊಳ್ಳಲಿದ್ದಾರೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಯ ಮುಖ್ಯಸ್ಥ ಥಾಮಸ್ ಬಾಚ್ ತಿಳಿಸಿದ್ದಾರೆ.

ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ: ಖಾಲಿ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್..!

ಕೊರೋನಾ ಭೀತಿಯ ನಡುವೆಯೇ ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದೇ ಒಲಿಂಪಿಕ್ಸ್‌ ಕ್ರೀಡಾಕೂಟವು ಜರುಗಲಿದೆ. ಜುಲೈ 14ರಂದು ಒಂದೇ ದಿನ ಟೋಕಿಯೋ ನಗರದಲ್ಲಿ 1,149 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಇದು ಕಳೆದ ಆರು ತಿಂಗಳಿನಲ್ಲಿ ಒಂದು ದಿನ ದಾಖಲಾದ ಗರಿಷ್ಠ ಕೋವಿಡ್ ಪ್ರಕರಣಗಳೆನಿಸಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.