Asianet Suvarna News Asianet Suvarna News

ಪದಕ ಬೇಟೆಯಾಡಲು ಟೋಕಿಯೋದತ್ತ ಮುಖ ಮಾಡಿದ ಭಾರತದ ಶೂಟರ್‌ಗಳು

Jul 16, 2021, 4:35 PM IST

ಕ್ರೊವೇಷಿಯಾ(ಜು.16): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೊರೋನಾ ಭೀತಿಯ ನಡುವೆಯೆ ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.

ಯುರೋಪಿಯನ್‌ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದ ಶೂಟರ್‌ಗಳು ಮೇ ತಿಂಗಳಿನಲ್ಲಿಯೇ ಕ್ರೊವೇಷಿಯಾಗೆ ತೆರಳಿದ್ದರು. ಶೂಟಿಂಗ್ ಟೂರ್ನಮೆಂಟ್‌ ಮುಗಿಸಿದ ಬಳಿಕ ಕ್ರೊವೇಷಿಯಾದಲ್ಲಿಯೇ ಶೂಟರ್‌ಗಳು ಪದಕ ಬೇಟೆಗೆ ಅಭ್ಯಾಸ ನಡೆಸುತ್ತಿದ್ದರು.

ಟೋಕಿಯೋ ಒಲಿಂಪಿಕ್ಸ್‌: ಈ 10 ಭಾರತೀಯ ಅಥ್ಲೀಟ್‌ಗಳು ಪದಕ ಗೆಲ್ಲಬಹುದು..!

ಇದೀಗ ಇಂದು(ಜು.16) ಬೆಳಗ್ಗೆ ಭಾರತದ ಶೂಟರ್‌ಗಳು ಕ್ರೊವೇಷಿಯಾದ ಜಾಗ್ರೆಬ್‌ ಏರ್‌ಪೋರ್ಟ್‌ನಲ್ಲಿ ಟೋಕಿಯೋದತ್ತ ಹೊರಡಲು ಸಿದ್ದರಾಗಿದ್ದ ಎಕ್ಸ್‌ಕ್ಲೂಸಿವ್ ವಿಡಿಯೋಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಗೆ ಲಭ್ಯವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

Video Top Stories