ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ಭಾರತದ ಶೂಟರ್‌ಗಳಿವರು

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ 15 ಭಾರತೀಯ ಶೂಟರ್‌ಗಳು ಅರ್ಹತೆ

* ಮನು ಭಾಕರ್, ಸೌರಭ್ ಚೌಧರಿ ಮೇಲೆ ಹೆಚ್ಚಿನ ನಿರೀಕ್ಷೆ

* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ

Saurabh Chaudhary to Manu Bhaker 15 Indian Shooter Qualified for Tokyo Olympics kvn

ಬೆಂಗಳೂರು(ಜು.19): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದ್ದು, ಈಗಾಗಲೇ ಮೊದಲ ಹಂತದಲ್ಲಿ ಭಾರತೀಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ ಕ್ರೀಡಾಗ್ರಾಮವನ್ನು ಪ್ರವೇಶಿಸಿದ್ದಾರೆ.

ಭಾರತದಿಂದ ಈ ಬಾರಿ ಅತಿ ಹೆಚ್ಚು ಅಂದರೆ 127 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತೀಯ ಅಥ್ಲೀಟ್‌ಗಳು 18 ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸ್ಪರ್ಧೆಗಳ ಪೈಕಿ ಈ ಬಾರಿ ಶೂಟಿಂಗ್‌ನಲ್ಲಿ ಭಾರತದಿಂದ ಹೆಚ್ಚು ಪದಕಗಳನ್ನು ನಿರೀಕ್ಷೆ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಭಾರತದ ಶೂಟರ್‌ಗಳು, ಶೂಟಿಂಗ್‌ ವಿಶ್ವಕಪ್‌ನಲ್ಲಿ ನಿರಂತರವಾಗಿ ಪದಕಗಳನ್ನು ಬೇಟೆಯಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಪೈಕಿ ಯುವ ಶೂಟರ್‌ಗಳಾದ ಮನು ಭಾಕರ್, ಸೌರಭ್ ಚೌಧರಿ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯ ಅಭಿನವ್‌ ಬಿಂದ್ರಾ ಸಂದರ್ಶನ

ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ಗೆ ಒಟ್ಟು 15 ಶೂಟರ್‌ಗಳು ಅರ್ಹತೆಗಿಟ್ಟಿಸಿಕೊಂಡಿದ್ದು, 8 ಪುರುಷರ ಹಾಗೂ 7 ಮಹಿಳಾ ಶೂಟರ್‌ಗಳಾಗಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪುರುಷ ಶೂಟರ್‌ಗಳಿವರು:

* ದಿವ್ಯಾನ್ಸ್‌ ಸಿಂಗ್ ಪನ್ವಾರ್: 10 ಮೀ ಏರ್ ರೈಫಲ್‌ ವೈಯುಕ್ತಿಕ, ಮಿಶ್ರ ತಂಡ

* ದೀಪಕ್ ಕುಮಾರ್: 10 ಮೀ ಏರ್ ರೈಫಲ್‌ ವೈಯುಕ್ತಿಕ, ಮಿಶ್ರ ತಂಡ

* ಸೌರಭ್ ಚೌಧರಿ: 10 ಮೀ ಏರ್ ಪಿಸ್ತೂಲ್‌ ವೈಯುಕ್ತಿಕ, ಮಿಶ್ರ ತಂಡ

* ಅಭಿಷೇಕ್‌ ವರ್ಮಾ: 10 ಮೀ ಏರ್ ಪಿಸ್ತೂಲ್‌ ವೈಯುಕ್ತಿಕ, ಮಿಶ್ರ ತಂಡ

* ಸಂಜೀವ್ ರಜಪೂತ್: 50 ಮೀ ರೈಫಲ್‌ 3 ಪೊಸಿಷನ್‌

* ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್: 50 ಮೀ ರೈಫಲ್‌ 3 ಪೊಸಿಷನ್‌

* ಅಂಗದ್‌ ವೀರ್ ಸಿಂಗ್ ಭಾಜ್ವಾ: ಪುರುಷರ ಸ್ಕಿಟ್‌

* ಮಿರಾಜ್ ಅಹಮದ್ ಖಾನ್‌: ಪುರುಷರ ಸ್ಕಿಟ್‌

ಮಹಿಳಾ ಶೂಟರ್‌ಗಳು

* ಅಪೂರ್ವಿ ಚಾಂಡೀಲಾ: 10 ಮೀ ಏರ್ ರೈಫಲ್‌ ವೈಯುಕ್ತಿಕ

* ಎಲಾವೆನಿಲ್‌ ವಲರಿವನ್‌: 10 ಮೀ ಏರ್ ರೈಫಲ್‌ ವೈಯುಕ್ತಿಕ, ಮಿಶ್ರ ತಂಡ

* ಮನು ಭಾಕರ್: 10 ಮೀ ಏರ್ ಪಿಸ್ತೂಲ್‌ ವೈಯುಕ್ತಿಕ, ಮಿಶ್ರ ತಂಡ, 25 ಮೀ ಪಿಸ್ತೂಲ್‌ ವೈಯುಕ್ತಿಕ

* ಯಶಸ್ವಿನಿ ಸಿಂಗ್ ದೇಸ್ವಾಲ್‌: 10 ಮೀ ಏರ್ ಪಿಸ್ತೂಲ್ ವೈಯುಕ್ತಿಕ, ಮಿಶ್ರ ತಂಡ

* ರಾಹಿ ಸರ್ನೊಬತ್‌: 25 ಮೀ ಪಿಸ್ತೂಲ್ ವೈಯುಕ್ತಿಕ

* ಅಂಜುಮ್‌ ಮೌದ್ಗಿಲ್‌: 50 ಮೀ ರೈಫಲ್‌ 3 ಪೊಸಿಷನ್‌ ವೈಯುಕ್ತಿಕ, 10 ಮೀ ಏರ್ ರೈಫಲ್‌ ಮಿಶ್ರ ತಂಡ

* ತೇಜಸ್ವಿನಿ ಸಾವಂತ್: 50 ಮೀ ರೈಫಲ್‌ 3 ಪೊಸಿಷನ್‌ ವೈಯುಕ್ತಿಕ

Latest Videos
Follow Us:
Download App:
  • android
  • ios