ಸೋಷಿಯಲ್ ಮೀಡಿಯಾದಲ್ಲಿ ಡೇಟಾ ಕದಿಯುವ ಅಪಾಯಕಾರಿ ಚಾಲೆಂಜ್‌ಗಳ ನಡುವೆ, ಯಾವುದೇ ಹಾನಿಯಿಲ್ಲದ ಮನರಂಜನಾತ್ಮಕ ಆಟವೊಂದು ವೈರಲ್ ಆಗಿದೆ. ಇದರಲ್ಲಿ ಮಹಿಳೆಯೊಬ್ಬಳ ಮುಖದ ಭಾಗಗಳನ್ನು ಸರಿಯಾದ ಜಾಗದಲ್ಲಿ ಜೋಡಿಸುವ ಸವಾಲನ್ನು ನೀಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಚಾಲೆಂಜ್‌ಗಳ ಜಮಾನಾ ಶುರುವಾಗಿ ಕೆಲ ವರ್ಷಗಳೇ ಆಗಿವೆ. ಆದರೆ ಅವುಗಳಲ್ಲಿ ಕೆಲವೊಂದು ಸಿಕ್ಕಾಪಟ್ಟೆ ಡೇಂಜರಸ್ ಆಗಿವೆ. ಯಾವುದೇ ಟ್ರೆಂಡ್ ಎಂದು ಹೇಳಿ, ಅದರ ಚಾಲೆಂಜ್ ಕೊಟ್ಟ ಜನರ ತಲೆಕೆಡಿಸಿ ಇಲ್ಲಸಲ್ಲದ ಅಪರಾಧಗಳು ಆಗುವುದು ಸಾಮಾನ್ಯವಾಗಿದೆ. ಡೇಟಾ ಕದಿಯುವುದಕ್ಕಾಗಿ, ಫೋಟೋ ಪಡೆಯುವುದಕ್ಕಾಗಿ... ಹೀಗೆ ಏನೇನೋ ಅಪರಾಧ ಕೃತ್ಯಗಳಿಗಾಗಿ ಇಂಥ ಚಾಲೆಂಜಸ್ ಬರುವುದು ಹೆಚ್ಚಾಗಿದೆ.
ಟೈಮ್ಪಾಸ್ ಚಾಲೆಂಜ್
ಆದರೆ ಕೆಲವೊಂದು ಚಾಲೆಂಜಸ್ ತಲೆಗೆ ಸಿಕ್ಕಾಪಟ್ಟೆ ಕೆಲಸ ಕೊಟ್ಟರೆ, ಕೆಲವೊಂದು ಆಟವಾಡುತ್ತಲೇ ಟೈಮ್ಪಾಸ್ ಜೊತೆಗೆ, ಮನೋರಂಜನೆಯನ್ನೂ ಒದಗಿಸುತ್ತದೆ. ಇದರಿಂದ ಯಾವುದೇ ಹಾನಿಯೂ ಇಲ್ಲ, ಡೇಟಾ ಕದಿಯುವ ಅಪಾಯವೂ ಇಲ್ಲ. ಅಕೌಂಟ್ನಿಂದ ಹಣ ಹೋಗುವ ಸಮಸ್ಯೆಯೂ ಇಲ್ಲ. ಹೆಚ್ಚೆಂದರೆ ಇದನ್ನು ಶೇರ್ ಮಾಡಿದವರಿಗೆ ವ್ಯೂವ್ಸ್ ಹೆಚ್ಚಾಗುವುದೇ ವಿನಾ ಬಳಕೆದಾರರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.
ನೀವೇನು ಮಾಡಬೇಕು
ಅವುಗಳಲ್ಲಿ ಒಂದು ಮನುಷ್ಯರ ಅಥವಾ ಪ್ರಾಣಿ-ಪಕ್ಷಿಗಳ ದೇಹದ ಎರಡು ಭಾಗ ಮಾಡಿ, ಅವುಗಳನ್ನು ಜೋಡಿಸುವುದು ಆಗಿದೆ. ಇಲ್ಲಿ ಕೆಳಗೆ ಒಂದು ಲಿಂಕ್ ಶೇರ್ ಮಾಡಲಾಗಿದೆ. ಇದರಲ್ಲಿ ನೀವು ಮಾಡಬೇಕಿರುವುದು ಮಹಿಳೆಯ ಮುಖವನ್ನು ಜೋಡಿಸುವ ಚಾಲೆಂಜ್.
ಇಲ್ಲಿ ಮಹಿಳೆಯ ಮುಖದ ಭಾಗವನ್ನು ಕತ್ತರಿಸಿ ಅದನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಿಸಲಾಗುತ್ತಿದೆ. ನೀವು ಮೌಸ್ ಸಹಾಯದಿಂದಲೋ ಅಥವಾ ನಿಮಗೆ ಅನುಕೂಲ ಆದಂತೆ ಕೀಪ್ಯಾಡ್ ಸಹಾಯದಿಂದಲೋ ಮುಖವನ್ನು ಸರಿಯಾದ ಜಾಗದಲ್ಲಿ ಜೋಡಿಸಬೇಕು. ಇದು ಅಂದುಕೊಂಡಷ್ಟು ಸುಲಭದ ಮಾತಲ್ಲ. ಮೌಸ್ ಅಥವಾ ಕೀಪ್ಯಾಡ್ ಕ್ಲಿಕ್ ಮಾಡುವುದು ಸ್ವಲ್ಪ ಆಚೀಚೆ ಆದರೂ ಮುಖದ ಆ ಭಾಗ ಇನ್ನೆಲ್ಲೋ ಹೋಗಿ ಕುಳಿತುಕೊಳ್ಳುತ್ತದೆ. ಈಗ ನೀವು ಇದನ್ನು ಟ್ರೈ ಮಾಡುವಿರಾ? clickstopchallenge ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನೀವೊಮ್ಮೆ ಟ್ರೈ ಮಾಡಿ.


