ನನ್ನ ಪ್ರಕಾರ ಆ ನಿರ್ಮಾಪಕರು ಹೇಳಿರುವ ಅಭಿಪ್ರಾಯಗಳು ಸತ್ಯಕ್ಕೆ ದೂರವಾದ ಮಾತುಗಳು. ಈಗ ಚಿತ್ರರಂಗ ಯಾವ ಪರಿಸ್ಥಿತಿಯಲ್ಲಿದೆ, ನಿರ್ಮಾಪಕರ ಸ್ಥಿತಿ ಏನು ಅಂತ ಎಲ್ಲಾ ಹೀರೋಗಳಿಗೂ ಗೊತ್ತು ಎಂದರು ನೆನಪಿರಲಿ ಪ್ರೇಮ್.
- Home
- News
- State
- Karnataka News Live Today: ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಿಲ್ಲ - ನೆನಪಿರಲಿ ಪ್ರೇಮ್ ಗರಂ
Karnataka News Live Today: ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಿಲ್ಲ - ನೆನಪಿರಲಿ ಪ್ರೇಮ್ ಗರಂ

ಪುತ್ರನ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮರಳಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿ ಹೊರತಾಗಿಯೂ ಕಾಂಗ್ರೆಸ್ ಹೈಕಮಾಂಡ್ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರೊಂದಿಗೆ ಗುರುವಾರ ಗಂಭೀರ ಚರ್ಚೆ ನಡೆಸಿದ್ದು, ರಾಜ್ಯ ನಾಯಕರ ಅಭಿಪ್ರಾಯವನ್ನು ಸಂಪೂರ್ಣವಾಗಿ ಸಂಗ್ರಹಿಸಿದೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸೇರಬೇಕಾದವರ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದ್ದಾರೆ.
ಈ ಪಟ್ಟಿಯ ಬಗ್ಗೆ ಖರ್ಗೆ ಅವರು ದೆಹಲಿಗೆ ಹಿಂತಿರುಗಿದ ನಂತರ ಹೈಕಮಾಂಡ್ ಮತ್ತೊಮ್ಮೆ ಚರ್ಚೆ ನಡೆಸಲಿದೆ. ಈ ವೇಳೆ ಅಗತ್ಯಬಿದ್ದರೆ ರಾಜ್ಯ ನಾಯಕರನ್ನು ಮತ್ತೊಮ್ಮೆ ದೆಹಲಿಗೆ ಕರೆಸಬಹುದು. ಒಂದು ವೇಳೆ ತೀವ್ರ ಭಿನ್ನಾಭಿಪ್ರಾಯವಿಲ್ಲದ ಪಕ್ಷದಲ್ಲಿ ಹೈಕಮಾಂಡ್ ತಾನೇ ಪಟ್ಟಿ ಅಂತಿಮಗೊಳಿಸಿ ಒಪ್ಪಿಗೆ ಮುದ್ರೆ ನೀಡಿ ರಾಜ್ಯಕ್ಕೆ ರವಾನಿಸಬಹುದು. ಒಟ್ಟಾರೆ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಹೈಕಮಾಂಡ್ ದೃಢ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
Karnataka News Live Today:ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಿಲ್ಲ - ನೆನಪಿರಲಿ ಪ್ರೇಮ್ ಗರಂ
Karnataka News Live Today:'ನಮ್ಮ ಹುಡುಗ ಯಶ್ ಕರ್ನಾಟಕದ ಹೆಮ್ಮೆ' - 'ಟಾಕ್ಸಿಕ್' ಬಗ್ಗೆ ಯೋಗರಾಜ್ ಭಟ್ ಮನದಾಳದ ಮಾತು
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Karnataka News Live Today:'ಮಾಲ್ಗುಡಿ ಡೇಸ್'ಗೆ 40 ವರ್ಷ - ಕಾಲವನ್ನೇ ಮೀರಿದ ಶಂಕರ್ ನಾಗ್ ಅವರ ಕನಸು ಇಂದಿಗೂ ಜೀವಂತ
40 Years of Malgudi Days: ಭಾರತೀಯ ದೂರದರ್ಶನದ ಇತಿಹಾಸದಲ್ಲಿ ಮನರಂಜನೆಯನ್ನು ಮೀರಿದ ಸಾಂಸ್ಕೃತಿಕ ಮೈಲಿಗಲ್ಲಾಗಿ ಗುರುತಿಸಿಕೊಂಡಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿ 40 ವರ್ಷಗಳನ್ನು ಪೂರೈಸಿದೆ.
Karnataka News Live Today:ಮದ್ಯ, ತಂಬಾಕಿಗೆ ಇಲ್ಲದ ನಿಷೇಧ ಲಾಟರಿಗೆ ಏಕೆ? ರಾಜ್ಯದಲ್ಲಿ ಬ್ಯಾನ್ ತೆಗೆಯುವಂತೆ ಸಂಘದ ಆಗ್ರಹ!
ರಾಜ್ಯದಲ್ಲಿ ಲಾಟರಿ ನಿಷೇಧದ ಹೊರತಾಗಿಯೂ ನೆರೆ ರಾಜ್ಯಗಳ ಅಕ್ರಮ ಲಾಟರಿ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಸರ್ಕಾರಕ್ಕೆ ಭಾರೀ ಆದಾಯ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ, 'ಕರ್ನಾಟಕ ರಾಜ್ಯ ಲಾಟರಿ'ಯನ್ನು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪುನರಾರಂಭಿಸಿಬೇಕೆಂದು ಆಗ್ರಹಿಸಲಾಗಿದೆ.
Karnataka News Live Today:₹17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ - ಪ್ರಧಾನಿ ಮೋದಿ ಲೋಕಾರ್ಪಣೆ
ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಗೆ ಬಲ ನೀಡಿದೆ. ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭಾರತೀಯ ರೈಲ್ವೆ ಕೊಡುಗೆ ಅಪಾರವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
Karnataka News Live Today:'ರಾಜ್ ಬಿ. ಶೆಟ್ಟಿಯಲ್ಲಿ ಅಹಂಕಾರವೇ ಇಲ್ಲ' - ಕರಾವಳಿ ಬಗ್ಗೆ ಸುಶ್ಮಿತಾ ಭಟ್ ಮನದಾಳದ ಮಾತು
ಜುಲೈ 24ರಂದು ತೆರೆಗೆ ಬರಲಿರುವ 'ಕರಾವಳಿ' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ನಟಿ ಸುಶ್ಮಿತಾ ಭಟ್ ಸಿನಿಮಾ, ತಮ್ಮ ಪಾತ್ರ ಹಾಗೂ ಚಿತ್ರರಂಗದ ಅನುಭವಗಳ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ.
Karnataka News Live Today:ಕೋಡಿಚಿಕ್ಕನಹಳ್ಳಿ ಕೆರೆ ತನಿಖೆ - ಅಧಿಕಾರಿಗಳ ಬೇಜವಾಬ್ದಾರಿಗೆ NGT ತರಾಟೆ!
ಕೊಡಿಚಿಕ್ಕನಹಳ್ಳಿ ಕೆರೆ ಪರಿಸರಕ್ಕೆ ಧಕ್ಕೆ ತರುತ್ತಿರುವ ರಾಜಕಾಲುವೆ ಒತ್ತುವರಿ ಮತ್ತು ಒಳಚರಂಡಿ ನೀರು ಹರಿಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Karnataka News Live Today:ಬರ ಪರಿಸ್ಥಿತಿ, ಜಾನುವಾರು ಸಾಕಲಾಗದೆ ಕನಿಷ್ಠ ಬೆಲೆಗೆ ಎತ್ತುಗಳ ಮಾರಾಟಕ್ಕೆ ಮುಂದಾದ ಚಿತ್ರದುರ್ಗದ ರೈತರು!
ಚಿತ್ರದುರ್ಗದಲ್ಲಿ ತೀವ್ರ ಬರಗಾಲದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಸಾಲ ಮಾಡಿ ಖರೀದಿಸಿದ್ದ ಎತ್ತುಗಳನ್ನು, ಇದೀಗ ಮೇವು ಮತ್ತು ನೀರಿನ ಅಭಾವದಿಂದಾಗಿ ಭಾರಿ ನಷ್ಟಕ್ಕೆ ಮಾರಲು ಮುಂದಾಗಿದ್ದಾರೆ.
Karnataka News Live Today:ಶಾಹಪುರ-ವಾಡಿ ರೈಲು ಮಾರ್ಗ 2028ರೊಳಗೆ ಪೂರ್ಣ - ಬಾದಾಮಿಯಲ್ಲಿ ವಿ. ಸೋಮಣ್ಣ ಮಹತ್ವದ ಘೋಷಣೆ
ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು.
Karnataka News Live Today:ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ವಿಜಯಲಕ್ಷ್ಮಿ ದರ್ಶನ್ ಭೇಟಿ - ವಿಶೇಷ ಪೂಜೆ ಸಲ್ಲಿಕೆ
ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
Karnataka News Live Today:ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದುಃಖದ ಸುದ್ದಿ - ಹಿರಿಯ ನಟಿ ಶೈಲಜಾ ಶ್ರೀಶೈಲನ್ ಇನ್ನಿಲ್ಲ!
ಹಿರಿಯ ನಟಿ ಶೈಲಜಾ ಶ್ರೀಶೈಲನ್ ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನರಾದರು. ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.
Karnataka News Live Today:ಅಕ್ಕ ಸಮ್ಮೇಳನ 2026ರಲ್ಲಿ ‘ಸಿನಿಗನ್ನಡ ಚಲನಚಿತ್ರೋತ್ಸವ’ - ಅತ್ಯುತ್ತಮ ಕನ್ನಡ ಚಿತ್ರಕ್ಕೆ ₹1 ಲಕ್ಷ ಬಹುಮಾನ
Cinegannada Film Festival: ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 25ನೇ ವರ್ಷದ ‘ಅಕ್ಕ’ ಸಮ್ಮೇಳನದಲ್ಲಿ ಈ ಬಾರಿ ‘ಸಿನಿಗನ್ನಡ ಚಲನಚಿತ್ರೋತ್ಸವ 2026’ ವನ್ನು ಆಯೋಜಿಸಲಾಗಿದೆ.
Karnataka News Live Today:Carbon Dating ಪ್ರಕ್ರಿಯೆಯಲ್ಲಿ ಗೊತ್ತಾಯ್ತು ಸಂಡೂರು ಗುಹೆ ಇತಿಹಾಸ, ಭಾರತದಲ್ಲಿಯೇ ಅತ್ಯಂತ ಹಳೇ ಮಾನವ ವಾಸಸ್ಥಾನ ಎಂದ ತಜ್ಞರು!
ಬಳ್ಳಾರಿಯ ಸಂಡೂರು ಅರಣ್ಯದಲ್ಲಿ 10,000 ವರ್ಷಗಳಷ್ಟು ಹಳೆಯದಾದ ಶಿಲಾಯುಗದ ಗುಹೆ ವಾಸಸ್ಥಾನ ಪತ್ತೆಯಾಗಿದೆ. ಕಾರ್ಬನ್ ಡೇಟಿಂಗ್ ಮೂಲಕ ಇದು ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದಲ್ಲಿರುವ ಭಾರತದ ಅತ್ಯಂತ ಹಳೆಯ ಗುಹಾ ವಾಸಸ್ಥಾನವೆಂದು ದೃಢಪಟ್ಟಿದೆ.
Karnataka News Live Today:ಸಂಭಾವನೆಗಳು ಭಾರವಾಗುತ್ತಿವೆ, ಕಷ್ಟಗಳು ಹೆಚ್ಚಾಗಿವೆ - ನಿರ್ದೇಶಕ ಕೆ.ಎಂ. ಚೈತನ್ಯ ಹೇಳಿದ್ರು ಕಹಿ ಸತ್ಯ
ಕಳೆದ ಎರಡು ದಶಕಗಳು ಕನ್ನಡ ಸಿನೆಮಾ ಇತಿಹಾಸದಲ್ಲೇ ಅತ್ಯಂತ ಸ್ಥಿತ್ಯಂತರಗಳನ್ನು ಕಂಡ ಸಮಯ. 2006ರಲ್ಲಿ ತೆರೆ ಕಂಡ ‘ಮುಂಗಾರು ಮಳೆ’, ಅಲ್ಲಿ ತನಕ ಕನ್ನಡ ಸಿನೆಮಾ ಗಳಿಕೆಯಲ್ಲಿ ಮಾಡಿದ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು.
Karnataka News Live Today:ಕೊಡಗಿನಲ್ಲಿ ಕಾಟಿ ಕಳ್ಳಬೇಟೆಗಾರರ ಮೇಲೆ ಅರಣ್ಯ ಇಲಾಖೆ ಫೈರಿಂಗ್ - 260 ಕೆಜಿ ಮಾಂಸ ಜಪ್ತಿ
ಅಕ್ರಮವಾಗಿ ಕಾಟಿಕೊಂದನ್ನು ಕೊಂದು ಮಾಂಸವನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಕಳ್ಳಬೇಟೆಗಾರರ ಮೇಲೆ ಕೊಡಗು ಅರಣ್ಯ ಇಲಾಖೆ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದವರಾದ..
Karnataka News Live Today:ಸ್ಟಾರ್‌ಗಳು ಕಿರುತೆರೆ ಬಿಡಿ, ಸಂಭಾವನೆ ಕಡಿಮೆ ಮಾಡಿ - ಸ್ಟಾರ್ ನಿರ್ಮಾಕರೊಬ್ಬರ ಅಳಲುಗಳು
Kannada Cinema: ಕನ್ನಡದ ಸ್ಟಾರ್ ನಿರ್ಮಾಪಕರ ಲೇಖನವಿದು. ಇದು ಸತ್ಯ, ಆದರೆ ನನ್ನ ಹೆಸರು ಹೇಳಿದರೆ ಎಲ್ಲರೂ ಮುಗಿಬೀಳುತ್ತಾರೆ, ಹಾಗಾಗಕೂಡದು. ಸತ್ಯ ಮಾತ್ರ ಚರ್ಚೆಯಾಗಲಿ, ನನ್ನ ಹೆಸರು ಹಾಕಬೇಡಿ ಎಂದು ಅವರು ಹೇಳಿದ್ದಾರೆ.
Karnataka News Live Today:ಬಳ್ಳಾರಿಯ ಹೊಲದಲ್ಲಿ 14ನೇ ಶತಮಾನದ ವಿಜಯನಗರ ಕಾಲದ ಅಪರೂಪದ ಜೈನ ದಾನ ಶಾಸನ ಪತ್ತೆ! ಹಂಪಿಯ ನಂಟು ಉಲ್ಲೇಖ
Karnataka News Live Today:ಡಿಸೆಂಬರ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಮತ್ತೆ ಅವಧಿ ವಿಸ್ತರಿಸಿದ ಸುಪ್ರೀಂ ಕೋರ್ಟ್
ಜಿಬಿಎ ಚುನಾವಣೆ ನ ನಡೆಸಲು ನೀಡಿದ್ದ ಗಡುವು ಹತ್ತಿರ ಬರುತ್ತಿದ್ದಂತೆ ವಿಸ್ತರಣೆಗಾಗಿ ರಾಜ್ಯ ಸರ್ಕಾರ ನೀಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇದೀಗ ಡಿಸೆಂಬರ್ ವರೆಗೆ ಅವಧಿ ನೀಡಿದೆ.
Karnataka News Live Today:ಮಂಗಳೂರು - ಲಾವಣ್ಯ ನೆತ್ತರು ಹರಿಸಿದ ಹುಚ್ಚು ಪ್ರೇಮಿ ಕೊನೆಗೂ ಅರೆಸ್ಟ್, ಇಲಿಪಾಷಾಣ ಸೇವಿಸಿ ಅಸ್ವಸ್ಥನಾಗಿದ್ದವನ ಬಂಧನ
Karnataka News Live Today:ಮಾದರಿಯಾದ ಸಚಿವ ಯತೀಂದ್ರ ನಡೆ.. ಚಾಮುಂಡಿ ಬೆಟ್ಟಕ್ಕೆ ಬಂದರೂ ದರ್ಶನ ಪಡೆಯಲಿಲ್ಲ! ಯಾಕೆ ಗೊತ್ತಾ?
ಮೊದಲ ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಗಣ್ಯರ ದರ್ಶನಕ್ಕೆ ನಿಗದಿತ ಸಮಯ ಮೀರಿದ್ದರಿಂದ ನಿಯಮ ಪಾಲಿಸಿ ದರ್ಶನ ಪಡೆಯದೆ ಹಿಂತಿರುಗಿದರು. ಜನಸಾಮಾನ್ಯರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನಿರ್ಧಾರ ಕೈಗೊಂಡಿದ್ದಾರೆ.