ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ಅಸಮಾಧಾನ ಭುಗಿಲೆದ್ದಿದ್ದು, ಮಹಿಳಾ ಕೋಟಾ ಭರ್ತಿ ಹಾಗೂ ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಯಾರು ಸಚಿವರಾಗುತ್ತಾರೆ ಮತ್ತು ಯಾರು ಸ್ಥಾನ ಕಳೆದುಕೊಳ್ಳುತ್ತಾರೆ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಹೌದು ಇದೀಗ ರಾಜ್ಯರಾಜಕಾರಣದಲ್ಲಿ ಕೂತುಹಲಕರ ಬೆಳವಣಿಗೆಯೊಂದು ಸೃಷ್ಟಿಯಾಗಿದೆ. ಮಂತ್ರಿ ಸ್ಥಾನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅಸಮಾಧಾನ, ಭರ್ತಿಯಾಗಬೇಕಾದ ಮಹಿಳಾ ಕೋಟಾ, ಇದರ ನಡುವೆ ಹೆಚ್ಚಾದ ಅತೃಪ್ತರ ಅಸಮಾಧಾನ ಇವೆಲ್ಲವೂ ಈಗ ಕಾಂಗ್ರೆಸ್ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿವೆ. ಈ ಹಿನ್ನೆಲೆಯಲ್ಲಿ ಅದಲು ಬದಲಾಗುತ್ತಾ ಡಿಕೆ ನೂತನ ಸಂಪುಟ, ಯಾರು ಇನ್ ಯಾರು ಔಟ್? ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆ ಮಾಸ್ಟರ್ ಪ್ಲಾನ್ ಏನು? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಕೈಯಲ್ಲಿ ಹೆಚ್ಚಿದ ಅಸಮಾಧಾನ!
ಹೌದು ನೂತನ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಹಲವಾರು ಶಾಸಕರು, ಈ ಹಿಂದೆ ಸಚಿವರಾಗಿದ್ದವರು ಅಸಮಾಧಾನ ವ್ಯಕ್ತಪಡಿಸಿದ್ದರು, ಅದರ ಜತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅದರಲ್ಲಿ ಕೆಲವರ ಅಸಮಾಧಾನ ಶಮನವಾದರೂ, ಇನ್ನು ಕೆಲವರು ಸಚಿವ ಸ್ಥಾನ ಬೇಕೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಸಾಲಿನಲ್ಲಿ ಎಂ.ಕೃಷ್ಣಪ್ಪ ಅಂತೂ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ. ಅಲ್ಲದೇ ಶಾಸಕ ಬಸವರಾಜ್ ಶಿವಣ್ಣವರಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಸಿದ್ದು ಸಿಟ್ಟು ಹೆಚ್ಚಾಗಿದೆ. ಅಲ್ಲದೇ ಮಹಿಳಾ ಕೋಟಾ ಭರ್ತಿಗೂ ಡಿಕೆ ತಾಲೀಮು ನಡೆಸಬೇಕಿದೆ ಎಂದು ಹೇಳಿದ್ದಾರೆ.
ಯಾರು ಇನ್, ಯಾರಿಗೆ ಗೇಟ್ ಪಾಸ್!
ಎಂ ಕೃಷ್ಣಪ್ಪಗೆ ಒಕ್ಕಲಿಗ ನಾಯಕರಾಗಿರುವುದರಿಂದ, ಅವರಿಗೆ ಸ್ಥಾನ ನೀಡಬೇಕಾದರೆ, ಅಲ್ಲಿ ಒಕ್ಕಲಿಗ ನಾಯಕರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆ ಸಾಲಿನಲ್ಲಿ ಮಾಗಡಿ ಬಾಲಕೃಷ್ಣ ಹಾಗೂ ನರೇಂದ್ರ ಸ್ವಾಮಿ, ಚೆಲುವರಾಯಸ್ವಾಮಿ ಇದ್ದಾರೆ. ಇನ್ನು ಮಹಿಳಾ ಕೋಟಾದಲ್ಲಿ ಖನೀಜಾ ಫಾತೀಮಾ, ರೂಪಾ ಶಶಿಶಧರ್ ಹಾಗೂ ಅನ್ನಪೂರ್ಣ ತುಕಾರಾಂಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಖನಿಜಾ ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ, ಸಚಿವ ಜಮೀರ್ ಹಾಗೂ ರಿಜ್ವಾನ್ ಇಬ್ಬರಲ್ಲಿ ಒಬ್ಬರ ಸ್ಥಾನಕ್ಕೆ ಕೋಕ್ ಸಿಗಲಿದೆ. ಅದರಂತೆ ಅನ್ನಪೂರ್ಣ ತುಕಾರಾಂಗೆ ಸ್ಥಾನ ಸಿಕ್ಕರೆ, ಸಚಿವ ನಾಗೇಂದ್ರ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇನ್ನು ರೂಪಾ ಶಶಿಧರ್ ಮಂತ್ರಯಾದರೆ, ಅವರ ತಂದೆ ಮುನಿಯಪ್ಪ ಅವರ ಸ್ಥಾನ ತ್ಯಾಗ ಮಾಡಬೇಕಿದೆ.
ಕೈಗೆ ಕಗ್ಗಂಟಾದ ಅತೃಪ್ತರು!
ಹೌದು ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಸಮಾಧಾನ, ಮಹಿಳಾ ಕೋಟಾ ಭರ್ತಿ ಜತೆ, ಎಂ ಕೃಷ್ಣಪ್ಪ ಪಟ್ಟು, ನೀಡದಿದ್ದರೆ, ರಾಜೀನಾಮೆಗೆ ಮುಂದಾಗುತ್ತಿರುವ ಶಾಸಕರೂ, ನಿಜಕ್ಕೂ ಇದು ಕೈಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಆದರೆ, ಅಂತಿಮವಾಗಿ ಈ ಗೊಂದಲಕ್ಕೆ ಹೈ ಕಮಾಂಡ ತಿರ್ಮಾಣದೊಂದಿಗೆ ತೆರ ಬೀಳಲಿದೆ ಎನ್ನವುದಂತು ಖಚಿತ. ಈಗ ಎಲ್ಲರ ಗಮನ ಕೈ ಹೈ ಕಮಾಂಡ್ ಮೇಲಿದೆ.


