10:05 PM (IST) Apr 10

Karnataka news live:Anchor Anushree ಗುಡ್​ನ್ಯೂಸ್​ ಯಾವಾಗ? ಫ್ಯಾನ್ಸ್​ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ

ಆ್ಯಂಕರ್ ಅನುಶ್ರೀ ತಮ್ಮ ಪತಿ ರೋಷನ್ ಜೊತೆ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದು, ಸದ್ಯಕ್ಕೆ ತಮ್ಮ ಬದುಕನ್ನು ಆನಂದಿಸಲು ಬಯಸಿದ್ದಾರೆ. ಮಗು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ ಅವರು, ತಾವು ಮತ್ತು ಪತಿ ಸಂಪೂರ್ಣವಾಗಿ ಸಿದ್ಧರಾಗಬೇಕು ಎಂದಿದ್ದಾರೆ. ವ್ಯವಸಾಯ ಮಾಡಿಕೊಂಡು ಬದುಕುವ ಆಸೆ ಎಂದಿದ್ದಾರೆ.

Read Full Story
08:35 PM (IST) Apr 10

Karnataka news live:ಎಡಿಜಿಪಿಗೆ ಹೆಚ್‌ಡಿಕೆ ಬೆದರಿಕೆ ಪ್ರಕರಣ, ಮಧ್ಯಸ್ಥಿಕೆಗೆ ಸುಪ್ರೀಂ ನಿವೃತ್ತ ನ್ಯಾ.ಓಕಾ ಹೆಸರು ಹೇಳಿದ ಹೈಕೋರ್ಟ್

ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.‌ ಓಕಾ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲು ನ್ಯಾಯಪೀಠ ಪ್ರಸ್ತಾಪಿಸಿದೆ.
Read Full Story
07:56 PM (IST) Apr 10

Karnataka news live:ಬೇಸಿಗೆ ರಜೆ ಹಿನ್ನೆಲೆ, ಮೈಸೂರಿನಿಂದ ಪೂರ್ವ ಭಾರತಕ್ಕೆ ವಿಶೇಷ ರೈಲು, ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲುಗಡೆಯಿದೆ?

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ನೈಋತ್ಯ ರೈಲ್ವೆ ಇಲಾಖೆಯು ಮೈಸೂರು ಮತ್ತು ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಏಪ್ರಿಲ್ ತಿಂಗಳ ನಿಗದಿತ ದಿನಾಂಕಗಳಲ್ಲಿ ಸಂಚರಿಸಲಿದ್ದು, ದಕ್ಷಿಣ ಮತ್ತು ಪೂರ್ವ ಭಾರತದ ನಡುವಿನ ಪ್ರಯಾಣವನ್ನು ಸುಲಭಗೊಳಿಸಲಿವೆ.
Read Full Story
07:38 PM (IST) Apr 10

Karnataka news live:Baba Vanga Predictions - ಇಂದು ಜನರ ಜೀವನ ನುಂಗುತ್ತಿರೋ ಕಂಪೆನಿಗಳು; ಅಂದೇ ಭವಿಷ್ಯ ನುಡಿದಿದ್ದ ಬಾಬಾ ವಂಗಾ

ಖ್ಯಾತ ಭವಿಷ್ಯಗಾರ್ತಿ ಬಾಬಾ ವಂಗಾ ಅವರು 2026ರಲ್ಲಿ ಚಿನ್ನದ ಬೆಲೆ, ಹಣದ ಮೌಲ್ಯ,ಆರ್ಥಿಕತೆಯಲ್ಲಿ ದೊಡ್ಡ ಹಿನ್ನಡೆಯಾಗಲಿದೆ ಎಂದು ಹೇಳಿದ್ದರು. ಈ ಕುರಿತಾದ ವಿವರ ಇಲ್ಲಿದೆ. ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿದ್ದರೂ, ಇವೆಲ್ಲವೂ ಕೇವಲ ಮಾರ್ಗದರ್ಶನಗಳೇ ಹೊರತು, ಖಚಿತವಾದ ನಿರ್ಧಾರಗಳಲ್ಲ. 

Read Full Story
07:25 PM (IST) Apr 10

Karnataka news live:ಕೂಲಿ ಕಾರ್ಮಿಕಳ ಮಗಳಿಗೆ 512 ಅಂಕ! 7 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ತಂದೆ

ಏಳು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡ ತಂದೆ. ಕೂಲಿ, ಬಟ್ಟೆ ಹೊಲಿದು ಮೂವರು ಮಕ್ಕಳನ್ನು ಸಾಕುತ್ತಿರುವ ತಾಯಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೂ ಅವಳಿಗೆ ಅಕ್ಷರ ಕಲಿಯಬೇಕೆಂಬ ಛಲ. ಇದೀಗ ಈ ಛಲವೇ ಅವಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 512 ಅಂಕ ಗಳಿಸಲು ಪ್ರೇರಣೆಯಾಗಿದೆ.

Read Full Story
07:16 PM (IST) Apr 10

Karnataka news live:ಜ್ಯೋತಿಷ್ಯದ ಪ್ರಕಾರ ಈ ರೀತಿ ಕನಸು ಬಿದ್ರೆ ಯಾರಿಗೂ ಹೇಳಬಾರದು! ಹೇಳಿದ್ರೆ ಆಗಬೇಕಾಗಿರೋದು ಆಗಲ್ಲ!

Dreams You Should Never Share With Anyone: ಕೆಲವೊಮ್ಮೆ ಮುಂದೆ ಆಗುವ ಸೂಚನೆ ಸಿಗುವುದು. ಈಗ ಪ್ರತಿಯೊಂದು ಕನಸಿಗೂ ಒಂದೊಂದು ಆಳವಾದ ಅರ್ಥವಿರುತ್ತೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ನಮ್ಮ ಭವಿಷ್ಯ, ಮಾನಸಿಕ ಸ್ಥಿತಿ, ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸೂಚನೆಗಳಾಗಿವೆ.

Read Full Story
07:13 PM (IST) Apr 10

Karnataka news live:ಲ್ಯಾಂಬೋರ್ಗಿನಿ ಚಾಲಕನ ದರ್ಪಕ್ಕೆ ಹೈಕೋರ್ಟ್‌ನಿಂದ ರಸ್ತೆ ಪಾಠ, ಅದೇ ಕಾರಲ್ಲಿ ಹೋಗಿ ರಸ್ತೆ ಗುಡಿಸಿವಂತೆ ಆದೇಶ!

ಅತಿವೇಗ ಹಾಗೂ ಅಜಾಗರೂಕ ಚಾಲನೆ ಮಾಡಿದ ಲ್ಯಾಂಬೋರ್ಗಿನಿ ಕಾರು ಚಾಲಕನಿಗೆ ಕರ್ನಾಟಕ ಹೈಕೋರ್ಟ್ ಅಪರೂಪದ ಸಮುದಾಯ ಸೇವಾ ಶಿಕ್ಷೆ ವಿಧಿಸಿದೆ. ಆರೋಪಿಯು ತನ್ನದೇ ಹಸಿರು ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಗುಡಿಸಿ, ಸ್ವಚ್ಛತಾ ಕಾರ್ಯ ನಡೆಸಬೇಕೆಂದು ನ್ಯಾಯಾಲಯ ಆದೇಶಿಸಿದೆ.
Read Full Story
06:42 PM (IST) Apr 10

Karnataka news live:ಬೆಂಗಳೂರಲ್ಲಿ ಸಡನ್ ಮಳೆ, ವಾಪಸಾದ ವಿಮಾನಗಳು! ರಾಜ್ಯಪಾಲರಿದ್ದ ವಿಮಾನ ಲ್ಯಾಂಡಿಂಗ್ ಆಗದೆ ಮಂಗಳೂರಿಗೆ ವಾಪಸ್!

ಬೆಂಗಳೂರಿನಲ್ಲಿ ಅಕಸ್ಮಿಕವಾಗಿ ಸುರಿದ ಮಳೆಯು ಜನರಿಗೆ ತಂಪು ನೀಡಿದರೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರು, ಚೆನ್ನೈ ಮತ್ತು ಮುಂಬೈನಿಂದ ಬಂದ ನಾಲ್ಕು ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ತಮ್ಮ ಮೂಲ ನಗರಗಳಿಗೆ ಹಿಂತಿರುಗಿವೆ.
Read Full Story
06:34 PM (IST) Apr 10

Karnataka news live:ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು

ನಾಲ್ಕು ದಶಕಗಳ ಕಾಲ ಅಕ್ಷರ ಸೇವೆ ಸಲ್ಲಿಸಿದ, ಓದುಗರ ಸಾಂಸ್ಕೃತಿಕ ಕೇಂದ್ರವಾಗಿದ್ದ 'ಅಯ್ನೋರು ಅಂಗಡಿ' (ಶೇಖಿ ಅಣ್ಣನ ಅಂಗಡಿ) ಇದೀಗ ಇತಿಹಾಸದ ಪುಟ ಸೇರಿದೆ. ಈ ಅಂಗಡಿಯ ಮುಚ್ಚುವಿಕೆಯು ನಗರದ ಓದು ಸಂಸ್ಕೃತಿ ಮತ್ತು ಪತ್ರಿಕಾ ಪರಂಪರೆಯ ಒಂದು ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ.

Read Full Story
06:15 PM (IST) Apr 10

Karnataka news live:ಬೆಂಗಳೂರು - ಜೀವ ಹೋಗುವ ಭಯದಲ್ಲಿ 9ನೇ ತರಗತಿ ಹುಡುಗನಿಂದ 107 ಗ್ರಾಂ ಚಿನ್ನ ಸುಲಿಗೆ! ಮನೆಯಿಂದಲೇ ಕದ್ದ ಬಾಲಕ

ಬೆಂಗಳೂರಿನಲ್ಲಿ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸಹಚರನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಯ ವರ್ತನೆಯಲ್ಲಿನ ಬದಲಾವಣೆಯನ್ನು ಗಮನಿಸಿ ಪೋಷಕರಿಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
Read Full Story
04:29 PM (IST) Apr 10

Karnataka news live:ಎಣ್ಣೆ ಹೊಡೆದು ಡ್ಯಾಮೇಜ್‌ ಆಗಿರುವ ಲಿವರ್‌ಗೆ ಮರು ಜೀವ ಕೊಡುವ ಈ ಹಣ್ಣು; ಯಾವುದು

Alcoholic Liver Damage: ಕೆಲವರಂತೂ ಅತಿಯಾದ ಮದ್ಯಪಾನ ಮಾಡುತ್ತಾರೆ. ಖುಷಿಗೂ, ದುಃಖಕ್ಕೂ ಇವರಿಗೆ ಮದ್ಯ ಬೇಕು. ಆದರೆ ಇದರಿಂದ ಲಿವರ್‌ನಲ್ಲಿ ಕಿಣ್ವಗಳ (enzymes) ವ್ಯತ್ಯಯ ಉಂಟಾಗುವುದು. ಅಂಜೂರ ಈ ಕಿಣ್ವಗಳನ್ನು ಸಮತೋಲನಕ್ಕೆ ತರಲು ಸಹಾಯ ಮಾಡುವುದು.

Read Full Story
04:26 PM (IST) Apr 10

Karnataka news live:10 ವರ್ಷದಿಂದ ಅಂಗಲಾಚಿದ್ರೂ ಪೊಲೀಸರ ಗೋಳು ಕೇಳ್ತಿಲ್ಲ ಸರ್ಕಾರ! ಖಾಕಿಗೆ ಬೇಡಿ ಹಾಕಿತಾ ಸರ್ಕಾರ? ಇವರ ಹಿತ ಕಾಯೋರ್ಯಾರು?

ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಪೊಲೀಸ್ ಕಾನ್‌ಸ್ಟೆಬಲ್‌ಗಳು, ವಿಶೇಷವಾಗಿ 2016ರ ಬ್ಯಾಚ್‌ನವರು, ಕಳೆದ 10 ವರ್ಷಗಳಿಂದ ಅಂತರ ಜಿಲ್ಲಾ ವರ್ಗಾವಣೆಗಾಗಿ ಕಾಯುತ್ತಿದ್ದಾರೆ. ಸರ್ಕಾರದ ವಿಳಂಬ ನೀತಿ, ಕುಟುಂಬದ ಒತ್ತಡ ಮತ್ತು ಮಾನಸಿಕ ಸಂಕಷ್ಟದಿಂದಾಗಿ ಅವರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೆಲವರು ದಯಾಮರಣಕ್ಕೂ ಮನವಿ ಸಲ್ಲಿಸಿದ್ದಾರೆ.
Read Full Story
03:53 PM (IST) Apr 10

Karnataka news live:ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!

ವರದಿ: ಬಲಭೀಮರಾವ್ ಕುಲಕರ್ಣಿ

ದಕ್ಷಿಣ ಏಷ್ಯಾದ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿ ಕಂಪನಿಯು 2025-26ನೇ ಸಾಲಿನಲ್ಲಿ 1691.575 ಕೆಜಿ ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಕೊನೆಯ ನಾಲ್ಕು ತಿಂಗಳಲ್ಲಿ ಉತ್ಪಾದನೆ ಭಾರಿ ಚೇತರಿಕೆ ಕಂಡು, ಕಳೆದ ವರ್ಷದ ₹430 ಕೋಟಿ ಲಾಭವನ್ನು ದುಪ್ಪಟ್ಟುಗೊಳಿಸಿದೆ.

Read Full Story
03:50 PM (IST) Apr 10

Karnataka news live:ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್ - 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ

ಜಾಗತಿಕ ಬಯೋಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ, ಉತ್ತರ ಬೆಂಗಳೂರಿನಲ್ಲಿರುವ ತನ್ನ 64 ಎಕರೆ ಉತ್ಪಾದನಾ ಘಟಕದ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸುಮಾರು ₹3,400 ಕೋಟಿ ಮೌಲ್ಯದ ಈ ಭೂಮಿಗಾಗಿ ಸತ್ತ್ವ ಗ್ರೂಪ್, ಅರಬಿಂದೋ ಫಾರ್ಮಾ ಮತ್ತು ಆರ್‌ಎಂಝಡ್‌ ಕಂಪನಿಗಳು ತೀವ್ರ ಆಸಕ್ತಿ ತೋರಿಸಿವೆ. 

Read Full Story
02:29 PM (IST) Apr 10

Karnataka news live:ಅಮೆರಿಕಕ್ಕೆ ಬಿಗ್ ಶಾಕ್ - ಹಾರ್ಮುಜ್ ಜಲಸಂಧಿಯಲ್ಲಿ 1800 ಕೋಟಿ ರೂ. ಮೌಲ್ಯದ ಕಣ್ಗಾವಲು ಡ್ರೋನ್ ನಾಪತ್ತೆ!

ಹರ್ಮುಜ್ ಜಲಸಂಧಿ ಬಳಿ ಅಮೆರಿಕದ ಅತ್ಯಂತ ದುಬಾರಿ ಕಣ್ಗಾವಲು ಡ್ರೋನ್ MQ-4C ಟ್ರೈಟಾನ್ ತುರ್ತು ಎಚ್ಚರಿಕೆ ಕಳುಹಿಸಿ ನಾಪತ್ತೆಯಾಗಿದೆ. ಈ ಡ್ರೋನ್ ಪತನವಾಗಿದೆಯೇ ಅಥವಾ ಶತ್ರುಗಳಿಂದ ಹೊಡೆದುರುಳಿಸಲ್ಪಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ, ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ ಈ ಘಟನೆ ನಡೆದಿದೆ.

Read Full Story
01:57 PM (IST) Apr 10

Karnataka news live:40th State Journalists Conference - ಏ.11, 12ರಂದು ಬೀದರ್‌ಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ಬೀದರ್‌ನಲ್ಲಿ ಏಪ್ರಿಲ್ 11 ಮತ್ತು 12 ರಂದು 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 

Read Full Story
01:26 PM (IST) Apr 10

Karnataka news live:Women's Reservation - ಮಹಿಳಾ ಮೀಸಲಾತಿ ಬಗ್ಗೆ ಮೋದಿ ಸರ್ಕಾರದ್ದು ಯು-ಟರ್ನ್, ಬೂಟಾಟಿಕೆ - ಜೈರಾಮ್ ರಮೇಶ್ ವಾಗ್ದಾಳಿ

ಮಹಿಳಾ ಮೀಸಲಾತಿ ಮಸೂದೆ ಜಾರಿ ವಿಚಾರದಲ್ಲಿ ಪ್ರಧಾನಿ ಮೋದಿ ‘ಬೂಟಾಟಿಕೆ’ 'ವಂಚನೆ' ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸೋಲನ್ನು ತಪ್ಪಿಸಲು ಸರ್ಕಾರವು ಹತಾಶೆಯಿಂದ 'ಯು-ಟರ್ನ್' ತೆಗೆದುಕೊಂಡಿದೆ ಎಂದು ಟೀಕಿಸಿದ್ದಾರೆ.

Read Full Story
01:14 PM (IST) Apr 10

Karnataka news live:ಮಾಣಿಕ್ಯಧಾರದಲ್ಲಿ ಕಾಣೆಯಾದ ಕೇರಳ ಬಾಲಕಿ 3 ದಿನಗಳ ಬಳಿಕ ಪ್ರಪಾತದಲ್ಲಿ ಶವವಾಗಿ ಪತ್ತೆ, ಆತ್ಮ*ಹತ್ಯೆಯೋ? ಆಕಸ್ಮಿಕವೋ?

ಚಿಕ್ಕಮಗಳೂರಿನ ಮಾಣಿಕ್ಯಧಾರಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಮೂರು ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ, ಆಕೆಯ ಮೃತದೇಹವು 1500 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ದುರಂತವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
01:08 PM (IST) Apr 10

Karnataka news live:ಬೆಂಗಳೂರಲ್ಲಿ 'ಜೋಂಬಿ ಡ್ರಗ್ಸ್' ವೈರಲ್, ವಿಡಿಯೋ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ ಪೊಲೀಸರು ನೋಟಿಸ್!

Bengaluru Zombie Drugs viral video case ಬೆಂಗಳೂರಿನಲ್ಲಿ 'ಜೋಂಬಿ ಡ್ರಗ್ಸ್' ಹರಡಿದೆ ಎಂದು ವೈರಲ್ ಆದ ವಿಡಿಯೋ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡ ನಟ ದುನಿಯಾ ವಿಜಯ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ, ವಿಡಿಯೋ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

Read Full Story
12:47 PM (IST) Apr 10

Karnataka news live:ಸೆಲ್ಫಿ ಕ್ರೇಜ್‌ಗೆ 3 ಬಾಲಕಿಯರು ಬಲಿ - ಜಲಪಾತದಲ್ಲಿ ಫೋಟೋ ತೆಗೆಯುವಾಗ ದುರಂತ - ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಲಪಾತವೊಂದರಲ್ಲಿ ಮೂವರು ಹದಿಹರೆಯದ ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಫೋಟೋ ತೆಗೆಯುತ್ತಿದ್ದಾಗ ಬಂಡೆಯಿಂದ ಆಯತಪ್ಪಿ ನೀರಿಗೆ ಬಿದ್ದು ಈ ದುರಂತ ಸಂಭವಿಸಿದ್ದು, ಅವರ ಕೊನೆಯ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
Read Full Story