- Home
- Entertainment
- TV Talk
- Anchor Anushree ಗುಡ್ನ್ಯೂಸ್ ಯಾವಾಗ? ಫ್ಯಾನ್ಸ್ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ
Anchor Anushree ಗುಡ್ನ್ಯೂಸ್ ಯಾವಾಗ? ಫ್ಯಾನ್ಸ್ ಕಾಡ್ತಿರೋ ಪ್ರಶ್ನೆಗೆ ಉತ್ತರ ಕೊಟ್ಟೇಬಿಟ್ರು ನಟಿ
ಆ್ಯಂಕರ್ ಅನುಶ್ರೀ ತಮ್ಮ ಪತಿ ರೋಷನ್ ಜೊತೆ ಸುಖಮಯ ದಾಂಪತ್ಯ ಜೀವನ ನಡೆಸುತ್ತಿದ್ದು, ಸದ್ಯಕ್ಕೆ ತಮ್ಮ ಬದುಕನ್ನು ಆನಂದಿಸಲು ಬಯಸಿದ್ದಾರೆ. ಮಗು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ ಅವರು, ತಾವು ಮತ್ತು ಪತಿ ಸಂಪೂರ್ಣವಾಗಿ ಸಿದ್ಧರಾಗಬೇಕು ಎಂದಿದ್ದಾರೆ. ವ್ಯವಸಾಯ ಮಾಡಿಕೊಂಡು ಬದುಕುವ ಆಸೆ ಎಂದಿದ್ದಾರೆ.

ಸುಖಮಯ ದಾಂಪತ್ಯ
ಆ್ಯಂಕರ್ ಅನುಶ್ರೀ ಅವರು ಸದ್ಯ ತಾವು ಮನಮೆಚ್ಚಿದ ಹುಡುಗ ರೋಷನ್ ಅವರನ್ನು ಮದುವೆಯಾಗಿ ಸುಖಮಯ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಹಲವು ವರ್ಷಗಳಿಂದ ಅನುಶ್ರೀ ಎಲ್ಲಿಯೇ ಹೋದರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಅದು ಮದುವೆ ಯಾವಾಗ ಎನ್ನುವುದು. ಎರಡು ವರ್ಷಗಳಿಂದ ಅನುಶ್ರೀ ಅವರು ರೋಷನ್ ಅವರ ಜೊತೆ ಫ್ರೆಂಡ್ಷಿಪ್ನಲ್ಲಿ ಇದ್ದರೂ ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಒಂದೇ ಸಲ ಮದುವೆಯ ಬಗ್ಗೆ ಮಾತನಾಡಿ ಸರ್ಪ್ರೈಸ್ ಕೊಟ್ಟಿದ್ದರು.
ಮಗು ಮಾಡಿಕೊಳ್ಳುವ ಬಗ್ಗೆ
ಇದೀಗ ಮಗು ಮಾಡಿಕೊಳ್ಳುವುದು ಹಾಗೂ ಮುಂದಿನ ಪ್ಲ್ಯಾನ್ ಬಗ್ಗೆ ಅನುಶ್ರೀ ಅವರು, Gold Class With Mayuraa ಚಾನೆಲ್ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಹಲವಾರು ವರ್ಷ ದುಡಿತವೆಂದೇ ಬದುಕು ಹೋಯ್ತು. ಈಗ ಕೆಲವೇ ವರ್ಷಗಳಿಂದ ಬದುಕನ್ನು ಎಂಜಾಯ್ ಮಾಡುತ್ತಿದ್ದೇನೆ. ಸದ್ಯ ನನ್ನ ಲೈಫ್ ಅನ್ನು ನಾನು ಎಂಜಾಯ್ ಮಾಡಬೇಕು. ನನ್ನ ಗಂಡನಿಗೆ ಒಳ್ಳೆ ಹೆಂಡತಿ ಆಗಿರಬೇಕು, ನಮ್ಮ ಅತ್ತೆ ಮಾಮನಿಗೆ ಒಳ್ಳೆ ಸೊಸೆ ಆಗಿರಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ.
ಬದುಕಿನ ರೇಸ್
ನನ್ನ ಬದುಕನ್ನ ಬದುಕಬೇಕು ಅನ್ನೋ ಆಸೆ ಇದೆ. ಈ ಎಲ್ಲ ಓಡಾಟಗಳಲ್ಲಿ ಈ ಬದುಕಿನ ರೇಸ್ ಅಲ್ಲಿ ಓಡಿ ಓಡಿಯಾಗಿದೆ. ನಂದೂ ಅಂತ ಎಷ್ಟು ಆಸೆಗಳು ಇರುತ್ತೆ ಗೊತ್ತಾ? ಆ ಎಲ್ಲಾ ಆಸೆ ಆಕಾಂಕ್ಷೆಗಳನ್ನು ನಾನು ಈಡೇರಿಸಿಕೊಳ್ಳಬೇಕು. ಫಸ್ಟ್ ಆಫ್ ಆಲ್ ನನ್ನ ಲೈಫ್ ನ ನಾನು ಇಲ್ಲಿಯವರೆಗೆ ಎಂಜಾಯ್ ಮಾಡಿಯೇ ಇಲ್ಲ. ನಾನು ಒಂಥರ ಭಾವಿಲ್ಲಿ ಇರೋ ಕಪ್ಪೆ ತರ ಆಗಿದ್ದೇನೆ ಎಂದು ಧಾವಂತದ ಬದುಕಿನಲ್ಲಿ ಖುಷಿಯನ್ನೇ ಮರೆತಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ ಅನು.
ಸಂಪೂರ್ಣವಾಗಿ ರೆಡಿ ಆಗ್ಬೇಕು
ಬಳಿಕ ಅನುಶ್ರೀ ಮಗು ಯಾವಾಗ ಎನ್ನುವ ಪ್ರಶ್ನೆಗೆ ಮಾತನಾಡಿದ ಅನುಶ್ರೀ ಅವರು, ದೇವರು ಬ್ಲೆಸ್ ಮಾಡಬೇಕು, ಮಗು ಮಾಡಿಕೊಳ್ಳಲು ನಾನು ಮತ್ತು ರೋಷನ್ ಇಬ್ಬರೂ ಸಂಪೂರ್ಣವಾಗಿ ಸಂಪೂರ್ಣವಾಗಿ ತಯಾರಾಗಬೇಕು ಎಂದಿದ್ದಾರೆ. ಇದೇ ವೇಳೆ ನಮ್ಮ ಮಕ್ಕಳಿಗೆ ನಾವು ವಂಡರ್ಫುಲ್ ಪೇರೆಂಟ್ಸ್ ಆಗೋದು ಖಂಡಿತ. ಅದನ್ನು 100% ಆಗಿ ಹೇಳ್ತೇನೆ ಎಂದಿದ್ದಾರೆ ಅನುಶ್ರೀ.
ಸರ್ಕಾರಿ ಶಾಲೆಗೆ ಸೇರಿಸೋ ಆಸೆ
ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಬೇಕು ಎನ್ನುವ ಆಸೆ ಇದೆ. ಈಗಲೇ ಏನನ್ನೂ ಹೇಳಲು ಆಗುವುದಿಲ್ಲ. ಆದರೆ ಸದ್ಯಕ್ಕೆ ಆ ಆಸೆ ಇದೆ. ಸ್ವಲ್ಪ ವರ್ಷಗಳಾದ ಮೇಲೆ ಸ್ವಲ್ಪ ದೂರ ಹೋಗಿ ಒಂದು ಚೂರು ವ್ಯವಸಾಯ ಮಾಡ್ಕೊಂಡು ಕೋಳಿ, ಕುರಿ, ಹಸು ಎಲ್ಲ ಸಾಕೊಂಡು ಚೆನ್ನಾಗಿ ಬದುಕಬೇಕು ಎನ್ನುವ ಆಸೆ ಇದೆ ಎಂದು ಮನದಾಳದ ಮಾತನ್ನು ತೆರೆದಿಟ್ಟಿದ್ದಾರೆ ಅನುಶ್ರೀ.
ವ್ಯವಸಾಯ ಮಾಡ್ತೇನೆ
ಬೆಂಗಳೂರು ಬಿಟ್ಟು ಬೇರೆ ಊರಿಗೆ ಹೋಗ್ಬಿಡೋಣ ಅಂತ ಅನ್ಸುತ್ತಾ ಎಂದಾಗ, ಸದ್ಯ ಹಾಗೆ ಅನ್ನಿಸ್ತಿಲ್ಲ. ಏಕೆಂದರೆ, ನನಗೆ ಅನ್ನ ಹಾಕಿರೋ ಊರು ಇದು. ಎಷ್ಟೇ ಟ್ರಾಫಿಕ್ ಏನೇ ಆದ್ರೂ ನಾನು ಅನ್ನ ಹಾಕಿರೋ ಊರು ನಾವು ಮರೆಯೋದಿಲ್ಲ. ಆದರೆ ಇಲ್ಲಿ ವ್ಯವಸಾಯ ಮಾಡೋಕ್ಕೆ ನಮಗೆ ಜಾಗ ತಗೊಳಕೆ ಆಗಲ್ಲ. ಏಕೆಂದರೆ ಇಲ್ಲಿ ಬಾತ್ರೂಮ್ ಕಟ್ಟೋಕೂ ಕೋಟಿ ರೂಪಾಯಿ ಬೇಕು. ಸೋ, ಊರಿಗೆ ಹೋಗಿ ವ್ಯವಹಾಸ ಮಾಡುವ ಆಸೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

