MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!

ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!

ವರದಿ: ಬಲಭೀಮರಾವ್ ಕುಲಕರ್ಣಿದಕ್ಷಿಣ ಏಷ್ಯಾದ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿ ಕಂಪನಿಯು 2025-26ನೇ ಸಾಲಿನಲ್ಲಿ 1691.575 ಕೆಜಿ ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಕೊನೆಯ ನಾಲ್ಕು ತಿಂಗಳಲ್ಲಿ ಉತ್ಪಾದನೆ ಭಾರಿ ಚೇತರಿಕೆ ಕಂಡು, ಕಳೆದ ವರ್ಷದ ₹430 ಕೋಟಿ ಲಾಭವನ್ನು ದುಪ್ಪಟ್ಟುಗೊಳಿಸಿದೆ.

2 Min read
Author : Gowthami K
Published : Apr 10 2026, 03:53 PM IST
Share this Photo Gallery
  • FB
  • TW
  • Linkdin
  • Whatsapp
15
 ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿ ಚಿನ್ನದಗಣಿ ಕಂಪನಿ
Image Credit : Asianet News

ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿ ಚಿನ್ನದಗಣಿ ಕಂಪನಿ

ರಾಯಚೂರು: 2025-26 ನೇ ಆರ್ಥಿಕ ವರ್ಷಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿ ಚಿನ್ನದಗಣಿ ಕಂಪನಿ 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ದಾಖಲೆ ಮೆರೆದಿದೆ. 6 ಲಕ್ಷ 49 ಸಾವಿರ 690 ಮೆಟ್ರಿಕ್ ಟನ್ ಅದಿರನ್ನು ಕಂಪನಿ ಭೇದಿಸಿದೆ. 1700 ಕೆಜಿ ಚಿನ್ನ ಉತ್ಪಾದನೆ ಗುರಿ ಹೊಂದಿದ್ದು, 772.190 ಕೆಜಿ ಚಿನ್ನ ಉತ್ಪಾದನೆಯಾಗಿದ್ದು, 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ಕೆಜಿ ಚಿನ್ನ ಉತ್ಪಾದಿಸಿ 99ರಷ್ಟು ಪ್ರಗತಿ ಸಾಧಿಸಿದೆ.ಪ್ರತಿ ಟನ್ ಅದಿರಿನಲ್ಲಿ 2.57 ಗ್ರಾಮ್ ಉತ್ಪಾದನೆ ಗುರಿ ಹೊಂದಿದ್ದು, ಪ್ರತಿ ಟನ್ನಿಗೆ ಹೆಚ್ಚುವರಿಯಾಗಿ 2.90 ಗ್ರಾಮ್ ಹಳದಿ ಲೋಹ ಉತ್ಪಾದನೆ ಸಾಧನೆಯಾಗಿದೆ.

25
ಕೊನೆಯ ನಾಲ್ಕು ತಿಂಗಳು ಭರ್ಜರಿ ಏರಿಕೆ
Image Credit : Asianet News

ಕೊನೆಯ ನಾಲ್ಕು ತಿಂಗಳು ಭರ್ಜರಿ ಏರಿಕೆ

ಏಪ್ರಿಲ್‌ನಲ್ಲಿ 113.011, ಮೇ 104.737, ಜೂನ್ 75.945, ಜುಲೈ 94.238, ಆಗಸ್ಟ್ 119.405 ಸೆಪ್ಟೆಂಬರ್ 83.018, ಅಕ್ಟೋಬರ್ 91.201, ನವೆಂಬರ್‌ನಲ್ಲಿ 86.978 ಪ್ರಾರಂಭದ 8 ತಿಂಗಳಲ್ಲಿ ಮಂದಗತಿಯಲ್ಲಿ ಸಾಗಿದ್ದ ಉತ್ಪಾದನೆ ಚೇತರಿಸಿಕೊಂಡು, ಕೊನೆಯ ನಾಲ್ಕು ತಿಂಗಳು ಡಿಸೆಂಬರ್ 133.ಕೆ.ಜಿ, ಜನವರಿ 246.076 ಕೆ.ಜಿ, ಫೆಬ್ರವರಿ 257.121 ಹಾಗೂ ಮಾರ್ಚ್ ತಿಂಗಳಲ್ಲಿ 286.839 ಕೆ.ಜಿ ಚಿನ್ನ ಉತ್ಪಾದಿಸಿದೆ.

Related Articles

Related image1
ರನ್ಯಾ ರಾವ್ ಬಳಿಕ ಮತ್ತೊಂದು ಸ್ಮಗ್ಲಿಂಗ್, ಬೆಂಗಳೂರು ಏರ್ಪೋರ್ಟ್‌ನಲ್ಲಿ 5 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿಗಳು ವಶಕ್ಕೆ!
Related image2
ಸ್ನ್ಯಾಪ್‌ಚಾಟ್ ಮೂಲಕ ಮಹಿಳೆ ಬಲೆಗೆ ಬೀಳಿಸಿದ್ದ ಹ್ಯಾಂಡ್ಸಮ್ ಹುಡುಗ: 40 ಲಕ್ಷ ಹಣ, 1 ಕೆಜಿ ಚಿನ್ನ ಲೂಟಿ!
35
ಮುಮ್ಮಡಿ ಲಾಭ
Image Credit : Asianet News

ಮುಮ್ಮಡಿ ಲಾಭ

ನವೆಂಬರ್‌ನಲ್ಲಿ 130.084 ಆರ್ಥಿಕ ವರ್ಷದ ಪ್ರಾರಂಭದಲ್ಲಿ 1700 ಕೆ.ಜಿ ಗುರಿ ಹೊಂದಲಾಗಿತ್ತು. ಹಟ್ಟಿಚಿನ್ನದಗಣಿ ಕಂಪನಿ ಉತ್ಪಾದಿಸುವ 24 ಕ್ಯಾರೇಟ್ ಚಿನ್ನದ ದರ ಇಂದಿನ ಮಾರುಕಟ್ಟೆಯಲ್ಲಿ 1.45 ಸಾವಿರ ಆಸು-ಪಾಸಿನಲ್ಲಿದೆ. ಅಲ್ಪ ಸ್ವಲ್ಪ ಬೆಲೆಯಲ್ಲಿ ಏರಿಳಿಕೆ ಕಂಡರೂ ಸಹಿತ ಇಂದಿನ ದರಕ್ಕೆ ಹೋಲಿಸಿದರೆ ತಿಂಗಳಿಗೆ ಸರಾಸರಿ 60 ರಿಂದ 65 ಕೆ.ಜಿ ಚಿನ್ನ ಉತ್ಪಾದಿಸಿದರೆ ಗಣಿಯ ಕಾರ್ಯಕ್ಷಮತೆ ಉಳಿಸಿಕೊಂಡು ಅಧಿಕ ಲಾಭ ಗಳಿಸಬಹುದೆಂಬ ಲೆಕ್ಕಾಚಾರವಿದೆ. 1691 ಕೆ.ಜಿ ಉತ್ಪಾದಿಸಿ ಕಳೆದ ವರ್ಷದ ಲಾಭಕ್ಕೆ ಮುಮ್ಮಡಿಯಾಗುವಂತೆ ಸಾಧನೆಗೈದಿದೆ.

45
ಅಧಿಕ ಉತ್ಪಾದನೆ ವೆಚ್ಚ
Image Credit : Asianet News

ಅಧಿಕ ಉತ್ಪಾದನೆ ವೆಚ್ಚ

ಗಣಿ ಕಂಪನಿ ಆಧೀನದ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಉತ್ಪಾದನೆ ಕುಂಟುತ್ತಾ ಸಾಗಿದೆ. ಪ್ರತಿ ಟನ್ ಅದಿರಿಗೆ ಚಿನ್ನದ ಪ್ರಮಾಣ ಕಡಿಮೆ ಸಿಗುತ್ತದೆ. 25 ಕಿ.ಮೀ ಅಂತರದಿಂದ ಅದಿರನ್ನು ಹಟ್ಟಿ ಲೋಹ ವಿಭಾಗಕ್ಕೆ ತಂದು ಸಂಸ್ಕರಿಸುವಲ್ಲಿ ಉತ್ಪಾದನಾ ವೆಚ್ಚವೂ ಕೂಡ ಅಧಿಕವಾಗಿದೆ. ಊಟಿ, ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಕಡಿಮೆ ಚಿನ್ನದ ಪ್ರಮಾಣ ಸಿಗುವ ಸ್ಥಳಗಳಿಂದ ಉಂಟಾಗುವ ನಷ್ಟವನ್ನು ಹಟ್ಟಿಗಣಿಯಲ್ಲಿ ಹೆಚ್ಚು ಚಿನ್ನ ತೆಗೆದು ಸರಾಸರಿಯಲ್ಲಿ ಸರಿದೂಗಿಸಬೇಕಿದೆ.

55
 ಕಳೆದ ವರ್ಷ ₹430 ಕೋಟಿ ನಿವ್ವಳ ಲಾಭ
Image Credit : Pixabay

ಕಳೆದ ವರ್ಷ ₹430 ಕೋಟಿ ನಿವ್ವಳ ಲಾಭ

ಈಗಿರುವ ಚಿನ್ನದ ಉತ್ಪಾದನೆಯಿಂದ ಕಳೆದ ವರ್ಷ ₹430 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಬಾರಿಯು ಲಾಭಾಂಶ ತರುವಲ್ಲಿ ಯಾವುದೇ ಗೊಂದಲವಿಲ್ಲ. ಉತ್ಪಾದನೆಗೆ ಚುರುಕು ಮೂಡಿಸಲು ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸಿ ತಿಳಿಸಲಾಗಿದೆ. ಉತ್ಪಾದನೆ ಜತೆಗೆ ಕಂಪನಿಯ ಕಾರ್ಯಕ್ಷಮತೆಯೂ ಮುಖ್ಯ ವಾಗಿದೆ. ನಿಸರ್ಗದ ವಿರುದ್ಧವಾಗಿ ಕಾರ್ಯ ನಿರ್ವಹಿಸುವ ಕಾರ್ಮಿಕ-ಅಧಿಕಾರಿ ವರ್ಗದ ಶ್ರಮದ ಫಲದಿಂದ, ಕಡಿಮೆ ಅವಘಡಗಳಿಂದ ಉತ್ಪಾದನೆಗೈದ ತೃಪ್ತಿ ಕಂಪನಿಗಿದೆ.

- ಪ್ರಕಾಶ್ ರಾಯಮಾಜಿ, ಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಚಿನ್ನದ ಬೆಲೆ
ಚಿನ್ನ
ರಾಯಚೂರು
ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್: 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ
Recommended image2
ಮೈಸೂರು ಅಶೋಕಪುರಂ ರೈಲ್ವೆ ನಿಲ್ದಾಣ ಹೆಸರು ಬದಲಾವಣೆ; ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ
Recommended image3
40th State Journalists Conference: ಏ.11, 12ರಂದು ಬೀದರ್‌ಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ
Related Stories
Recommended image1
ರನ್ಯಾ ರಾವ್ ಬಳಿಕ ಮತ್ತೊಂದು ಸ್ಮಗ್ಲಿಂಗ್, ಬೆಂಗಳೂರು ಏರ್ಪೋರ್ಟ್‌ನಲ್ಲಿ 5 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿಗಳು ವಶಕ್ಕೆ!
Recommended image2
ಸ್ನ್ಯಾಪ್‌ಚಾಟ್ ಮೂಲಕ ಮಹಿಳೆ ಬಲೆಗೆ ಬೀಳಿಸಿದ್ದ ಹ್ಯಾಂಡ್ಸಮ್ ಹುಡುಗ: 40 ಲಕ್ಷ ಹಣ, 1 ಕೆಜಿ ಚಿನ್ನ ಲೂಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved