10:27 PM (IST) Jun 19

Karnataka News Live 19th Juneಮ್ಯಾಟ್ರಿಮೋನಿ ಸೈಟ್​ನಲ್ಲಿ ಸಿಕ್ಕ 3 ಮದ್ವೆಯ ಸುಂದರಿ - ಬೆಂಗಳೂರು ಉದ್ಯಮಿಯ ವರಿಸಿ HIV ಬೆದರಿಕೆ ಹಾಕಿ ಲೂಟಿ

ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಮಹಿಳೆಯನ್ನು ಮದುವೆಯಾದ ಬೆಂಗಳೂರಿನ ಉದ್ಯಮಿಯೊಬ್ಬರು, ಆಕೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಈಗಾಗಲೇ ಮೂರು ಬಾರಿ ವಿವಾಹವಾಗಿದ್ದ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಪತ್ನಿ ಮನೆಯಿಂದ 18 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಉದ್ಯಮಿ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ, ಕಳ್ಳತನ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.
Read Full Story
10:17 PM (IST) Jun 19

Karnataka News Live 19th Juneಪುರುಷ ಪ್ರಯಾಣಿಕರು ಏನಾದರು? ಶಕ್ತಿ ಯೋಜನೆಯ ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಾರಿಗೆ ನಿಗಮ

ಶಕ್ತಿ ಯೋಜನೆ ಕುರಿತು ನಡೆದ ಮಹತ್ವದ ಸಭೆಯಲ್ಲಿ ಸಾರಿಗೆ ನಿಗಮಗಳು ಸ್ಫೋಟಕ ವರದಿ ನೀಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ವರದಿ ನೀಡಿದ್ದಾರೆ. ಅಷ್ಟಕ್ಕೂ ಈ ವರದಿಯಲ್ಲಿ ಏನಿದೆ?

Read Full Story
09:06 PM (IST) Jun 19

Karnataka News Live 19th Juneಹೊಸಕೋಟೆಯಲ್ಲಿ ಭೀಕರ ಅಪಘಾತ - BMTC ಬಸ್ ಡಿಕ್ಕಿಗೆ ಒಂದೇ ಕುಟುಂಬದ ಮೂವರು ಸಾವು!

Hoskote ತಾಲ್ಲೂಕಿನ ಸೂಲಿಬೆಲೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ, ಅಮ್ಮ ಹಾಗೂ ಮಗಳು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read Full Story
09:02 PM (IST) Jun 19

Karnataka News Live 19th Juneಎಂಆರ್‌ಜಿ ಗ್ರೂಪ್ ಮಾಲೀಕ, ಮಂಗಳೂರು ಮೂಲದ ಉದ್ಯಮಿ ಪ್ರಕಾಶ್ ಶೆಟ್ಟಿಯಿಂದ ಐಷಾರಾಮಿ ಖಾಸಗಿ ಜೆಟ್ ಖರೀದಿ!

ಮಂಗಳೂರು ಮೂಲದ ಉದ್ಯಮಿ ,ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ 'ಎಂಬ್ರೇಯರ್ ಲೆಗಸಿ 650' ಬಿಸಿನೆಸ್ ಜೆಟ್ ಅನ್ನು ಖರೀದಿಸಿದ್ದಾರೆ. ಈ ಅತ್ಯಾಧುನಿಕ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಸ್ವಾಗತಿಸಲಾಯಿತು. 

Read Full Story
08:22 PM (IST) Jun 19

Karnataka News Live 19th JunePhotos - ಕೋಟಿ ಬೆಲೆಬಾಳೋ ಕೊಡಗಿನಲ್ಲಿರುವ ರಶ್ಮಿಕಾ ಕನಸಿನ ಮನೆ ಒಳಗೆ ಹೇಗಿದೆ - ಫೋಟೋಸ್ ವೈರಲ್!

Rashmika Mandanna ಅವರ ಐಷಾರಾಮಿ ಜೀವನಶೈಲಿ ಯಾವಾಗಲೂ ಗಮನ ಸೆಳೆಯುತ್ತದೆ. ಅವರ ಬೆರಗುಗೊಳಿಸುವ ಕೊಡಗಿನ ಮನೆಯಿಂದ ಹಿಡಿದು ಅದರ ಸುಂದರವಾದ ಒಳಾಂಗಣದವರೆಗೆ, 'ಕಾಕ್‌ಟೇಲ್ 2' ನಟಿಯ ಕನಸಿನ ಮನೆ, ಅದರ ಮೌಲ್ಯ ಮತ್ತು ಸೊಗಸಾದ ವಾಸದ ಸ್ಥಳದ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
08:07 PM (IST) Jun 19

Karnataka News Live 19th JuneBengaluru - ಲಿಂಗ ತಾರತಮ್ಯದ ಗೋಡೆ ಮುರಿದ ಯುವಕರು - ನರ್ಸಿಂಗ್ ರಂಗಕ್ಕೆ ಪುರುಷರು, ಐದೇ ವರ್ಷದಲ್ಲಿ 450% ಏರಿಕೆ!

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ನರ್ಸಿಂಗ್ ಕ್ಷೇತ್ರದಲ್ಲಿ ಪುರುಷರ ಸಂಖ್ಯೆ ಐದು ವರ್ಷಗಳಲ್ಲಿ ಶೇ. 450ರಷ್ಟು ಹೆಚ್ಚಾಗಿದೆ. ಜಾಗತಿಕ ಬೇಡಿಕೆ, ಉದ್ಯೋಗ ಭದ್ರತೆ, ಆಕರ್ಷಕ ವೇತನ ಮತ್ತು ಸುಲಭ ಪ್ರವೇಶಾವಕಾಶಗಳು ಈ ಐತಿಹಾಸಿಕ ಬದಲಾವಣೆಗೆ ಪ್ರಮುಖ ಕಾರಣಗಳಾಗಿವೆ.
Read Full Story
07:38 PM (IST) Jun 19

Karnataka News Live 19th June'ಇದು ಚೆನ್ನಾಗಿದೆ ಅಂತ ಗ್ಯಾರಂಟಿ ಏನು?' - Darshanಗೆ ಅದನ್ನ ತಿನ್ನಿಸಿದ್ದ ಘಟನೆ ನೆನೆದ ಓಂ ಪ್ರಕಾಶ್ ರಾವ್!

Ayya Movie ಶೂಟಿಂಗ್ ವೇಳೆ ನಟ ದರ್ಶನ್‌ಗೆ ಉಪ್ಪಿಟ್ಟು ಮಾಡಿ ತಿನ್ನಿಸಿದ್ದ ಕುತೂಹಲಕರ ಘಟನೆಯನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಅಡುಗೆ ಪ್ರಯೋಗದ ಹಿಂದಿನ ಮಜವಾದ ಕಥೆಯನ್ನೂ ಅವರು ಬಹಿರಂಗಪಡಿಸಿದ್ದಾರೆ.

Read Full Story
07:08 PM (IST) Jun 19

Karnataka News Live 19th Juneಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ, ವಿಧಾನಸಭೆಯಲ್ಲಿ ಸಿಎಂ ವಿಜಯ್ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ!

ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ವಿಧಾನಸಭೆಯು ಸರ್ವಾನುಮತದಿಂದ ವಿರೋಧದ ನಿರ್ಣಯವನ್ನು ಅಂಗೀಕರಿಸಿದೆ. ಈ ಯೋಜನೆಯು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದ್ದು, ಇದಕ್ಕೆ ಯಾವುದೇ ಅನುಮತಿ ನೀಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಕರ್ನಾಟಕ ಸಲ್ಲಿಸಿರುವ ವಿವರವಾದ ಯೋಜನಾ ವರದಿಯನ್ನು (DPR) ಪರಿಶೀಲಿಸದಂತೆ ಕೇಂದ್ರ ಜಲ ಆಯೋಗಕ್ಕೂ ಮನವಿ ಮಾಡಲಾಗಿದೆ.
Read Full Story
06:11 PM (IST) Jun 19

Karnataka News Live 19th Juneಬೆಂಗಳೂರಿನಲ್ಲಿ ಐಎಚ್‌ಸಿಎಲ್ ಮಹತ್ವದ ಹೆಜ್ಜೆ - ಯಶವಂತಪುರದಲ್ಲಿ ಹೈ-ಫೈ ಗೇಟ್‌ವೇ ಹೋಟೆಲ್ ಸ್ಥಾಪನೆಗೆ ಒಪ್ಪಂದ!

ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (IHCL), ಬೆಂಗಳೂರಿನ ಯಶವಂತಪುರದಲ್ಲಿ ಹೊಸ 'ಗೇಟ್‌ವೇ' ಹೋಟೆಲ್ ಆರಂಭಿಸಲು ಆರ್.ಎನ್. ಶೆಟ್ಟಿ ಗ್ರೂಪ್‌ನ 'ನವೀನ್ ಹೋಟೆಲ್ಸ್' ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಬ್ರೌನ್‌ಫೀಲ್ಡ್ ಯೋಜನೆಯು 283 ಕೊಠಡಿಗಳು, ರೆಸ್ಟೋರೆಂಟ್‌ಗಳು, ಮತ್ತು ಬೃಹತ್ ಸಮಾವೇಶ ಸ್ಥಳವನ್ನು ಹೊಂದಿರಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

Read Full Story
05:21 PM (IST) Jun 19

Karnataka News Live 19th Juneಸಾಕುಪ್ರಾಣಿಗಳಿಗೆ ರಾಜಾತಿಥ್ಯ - ಪ್ರಾಣಿಗಳ ಆರೈಕೆ, ಮುದ್ದಿಸುವಿಕೆಯಲ್ಲಿ ಬೆಂಗಳೂರಿಗರಿಗೇ ಪ್ರಥಮ ಸ್ಥಾನ!

ಸಾಕುಪ್ರಾಣಿಗಳ ಐಷಾರಾಮಿ ಆರೈಕೆ ಮತ್ತು ಸಂತೋಷಕ್ಕಾಗಿ ಅತಿ ಹೆಚ್ಚು ಖರ್ಚು ಮಾಡುವ ಮೂಲಕ ಬೆಂಗಳೂರು ಭಾರತದ 'ಪೆಟ್ ಕ್ಯಾಪಿಟಲ್' ಆಗಿ ಹೊರಹೊಮ್ಮಿದೆ. ದೇಶಾದ್ಯಂತ ಬೆಕ್ಕಿನ ಆಹಾರದ ಆರ್ಡರ್‌ಗಳು ಹೆಚ್ಚಿದ್ದರೂ, ಶ್ವಾನ ಪ್ರೇಮಿಗಳ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ 

Read Full Story
04:53 PM (IST) Jun 19

Karnataka News Live 19th JuneRishab Shetty - 500 ಕೋಟಿ ಬಜೆಟ್‌, ಎರಡು ಭಾಗಗಳು - ರಿಷಬ್ ಚಿತ್ರದ ಬಗ್ಗೆ ಹೊರಬಿತ್ತು ಹೊಸ ಮಾಹಿತಿ!

Rishab Shetty ಅಭಿನಯದ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಸುಮಾರು 500 ಕೋಟಿ ರೂಪಾಯಿ ಬಜೆಟ್‌ನ ಈ ಐತಿಹಾಸಿಕ ಚಿತ್ರ 2028 ಮತ್ತು 2029ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.

Read Full Story
04:41 PM (IST) Jun 19

Karnataka News Live 19th JuneBengaluru - ರಿಹ್ಯಾಬ್ ಸೆಂಟರ್ ಮಾಲೀಕನ ಭೀಕರ ಕೊಲೆ ಮಾಡಿದ ರೋಗಿಗಳು, ಕಾರು, ಬೈಕ್ ಕದ್ದು ಎಸ್ಕೇಪ್!

ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿರುವ 'ನ್ಯೂ ಲೈಫ್ ರಿಹ್ಯಾಬ್ ಸೆಂಟರ್' ಮಾಲೀಕ ಶಿವಲಿಂಗಯ್ಯ ಅವರನ್ನು, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಾಲೀಕರ ನಂಬಿಕೆ ಗಳಿಸಿ ಇನ್‌ಚಾರ್ಜ್ ಆಗಿದ್ದ ನಿತಿನ್ ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದು, ತನ್ನ ಗ್ಯಾಂಗ್ ಜೊತೆ ಸೇರಿ ಈ ಭೀಕರ ಹತ್ಯೆಗೈದು ಪರಾರಿಯಾಗಿದ್ದಾನೆ.
Read Full Story
04:11 PM (IST) Jun 19

Karnataka News Live 19th JuneRachita Ram - ಮದುವೆ, ಪ್ರೀತಿ, ಡೈವೋರ್ಸ್ ಬಗ್ಗೆ ರಚಿತಾ ನೇರ ಮಾತು - 14 ವರ್ಷದ ಸಿನಿ ಪಯಣದ ಅನುಭವ ಹಂಚಿಕೆ

Rachita Ram: ರಕ್ಷಿತಾ, ರಮ್ಯಾ, ರಾಧಿಕಾ ಬಳಿಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದ ‘ರ’ ಹೆಸರಿನ ಪ್ರತಿಭಾವಂತ ನಟಿ. ಮೊದಲ ಮೂವರೂ ಒಂದು ದಶಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 14 ವರ್ಷಗಳಾದರೂ ರಚಿತಾ ಓಟ ಮುಂದುವರಿಕೆ. ಈ ಹಿನ್ನೆಲೆಯಲ್ಲಿ ಅವರ ಜತೆ ಮಾತುಕತೆ.

Read Full Story
03:46 PM (IST) Jun 19

Karnataka News Live 19th Juneರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ - ಇಡೀ ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ ದರ್ಶನ್ ಪರ ವಕೀಲ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರ ವಾದಿಸುತ್ತಿದ್ದ ವಕೀಲ ಎಸ್. ಸುನಿಲ್ ಕುಮಾರ್, ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಆರೋಪಿಗಳಿಂದ ಸರಿಯಾದ ಸಹಕಾರ ಸಿಗದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಲಾಗಿದ್ದು, ಹೈಕೋರ್ಟ್‌ನಲ್ಲಿ ಈ ವಿಷಯ ತಿಳಿಸಿರುವ ಅವರು, ವಿಚಾರಣಾ ನ್ಯಾಯಾಲಯಕ್ಕೂ ಮಾಹಿತಿ ನೀಡುವ ಸಾಧ್ಯತೆಯಿದೆ.
Read Full Story
02:51 PM (IST) Jun 19

Karnataka News Live 19th Juneನಾಲ್ಕೂವರೆ ವರ್ಷದಿಂದ ಯಾವುದೇ ಕಾರಿಡಾರ್‌ಗೆ ಸಿಗದ ಒಪ್ಪಿಗೆ, ಬೆಂಗಳೂರು ಮೆಟ್ರೋಗೆ ಗ್ರಹಣ

ಬೆಂಗಳೂರಿನ 'ನಮ್ಮ ಮೆಟ್ರೋ' ವಿಸ್ತರಣೆ ಯೋಜನೆಗಳು ತೀವ್ರ ವಿಳಂಬ ಎದುರಿಸುತ್ತಿವೆ. ಹಂತ-3 ಮತ್ತು ಹಂತ-3ಎ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುಮೋದನೆ ಪ್ರಕ್ರಿಯೆಯಲ್ಲಿ ಸಿಲುಕಿದ್ದು, ಡಬಲ್ ಡೆಕ್ಕರ್ ಕಾರಿಡಾರ್‌ನಂತಹ ಹೊಸ ಪ್ರಸ್ತಾಪಗಳು ವಿಳಂಬಕ್ಕೆ ಮತ್ತಷ್ಟು ಕಾರಣವಾಗಿವೆ. 

Read Full Story
01:28 PM (IST) Jun 19

Karnataka News Live 19th JuneBengaluru CID Inspector Robbery - ಎಂಥಾ ಸ್ಥಿತಿಗೆ ಬಂತು ಕರ್ನಾಟಕ, ಬೆಂಗಳೂರಲ್ಲಿ ಕಳ್ಳರಾದ ಪೊಲೀಸ್‌!

ಬೆಂಗಳೂರಿನಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕೇರಳದ ಯುವಕರಿಂದ ₹20 ಲಕ್ಷ ದರೋಡೆ ಮಾಡಿದ್ದಾರೆ. ಈ ಕೃತ್ಯಕ್ಕೆ ಅಧಿಕೃತ ಸಿಐಡಿ ಜೀಪ್ ಬಳಸಲಾಗಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದಾನೆ.
Read Full Story
01:16 PM (IST) Jun 19

Karnataka News Live 19th JuneChikkamagaluru - ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕಟ್! ವೈರಲ್ ವಿಡಿಯೋ ಬೆನ್ನಲ್ಲೇ ಯುವಕನ ವಿರುದ್ಧ FIR

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.

Read Full Story
12:49 PM (IST) Jun 19

Karnataka News Live 19th Juneತವರು ಬಿಡ್ತಿದ್ದಾರೆ ಮಿಲಿಯನೇರ್, ಲಂಡನ್‌ - ಪ್ಯಾರಿಸ್ ಅಲ್ಲ ಈ ಎರಡು ದೇಶ ಎಲ್ಲರ ಫೆವರೆಟ್‌

ಈ ವರ್ಷ ವಿಶ್ವದಲ್ಲಿ ಮಿಲಿಯನೇರ್ಗಳು ಹೊಸ ದಾಖಲೆ ಸ್ಥಾಪಿಸಲಿದ್ದಾರೆ. ಹೆನ್ಲಿ ಖಾಸಗಿ ಸಂಪತ್ತು ವಲಸೆ ವರದಿ 2026 ರ ಪ್ರಕಾರ, ವಿಶ್ವದ ಸುಮಾರು 165,000 ಶ್ರೀಮಂತರು ತಮ್ಮ ತಾಯ್ನಾಡನ್ನು ತೊರೆದು ಇತರ ದೇಶಗಳಲ್ಲಿ ನೆಲೆಸುವ ಪ್ಲಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಮಿಲಿಯನೇರ್ ಗಳ ಫೆವರೆಟ್ ಜಾಗ ಬದಲಾಗಿದೆ. 

Read Full Story
12:44 PM (IST) Jun 19

Karnataka News Live 19th Juneತಿರುಪತಿಗೆ ಹೋಗುವ ರಾಜ್ಯದ ಭಕ್ತರಿಗೆ ಗುಡ್‌ನ್ಯೂಸ್‌, KSTDC ಸುಪರ್ದಿಗೆ ಕರ್ನಾಟಕ ಭವನದ 350 ರೂಮ್‌!

ತಿರುಮಲದಲ್ಲಿರುವ ಕರ್ನಾಟಕ ಭವನದ 350 ಕೊಠಡಿಗಳ ನಿರ್ವಹಣೆಯನ್ನು ಮುಜರಾಯಿ ಇಲಾಖೆಯು ಕೆಎಸ್‌ಟಿಡಿಸಿಗೆ ಹಸ್ತಾಂತರಿಸಿದೆ. ಇದರಿಂದ ಕೆಎಸ್‌ಟಿಡಿಸಿ ಪ್ರವಾಸ ಪ್ಯಾಕೇಜ್ ಮೂಲಕ ಹೋಗುವ ಭಕ್ತರಿಗೆ ಉತ್ತಮ ವಸತಿ ಸೌಲಭ್ಯ ಸಿಗಲಿದ್ದು, ಬೆಂಗಳೂರಿನಿಂದ ವಿಶೇಷ ಪ್ಯಾಕೇಜ್ ಮೂಲಕ ಶೀಘ್ರ ದರ್ಶನವನ್ನೂ ಪಡೆಯಬಹುದು.

Read Full Story
12:20 PM (IST) Jun 19

Karnataka News Live 19th Juneಬೆಂಗಳೂರು - ದಾರಿಹೋಕನ ಮೊಬೈಲ್ ಕದ್ದವರ ಗಾಡಿ ಮೇಲೆ ಮೂಟೆ ಹಾಕಿದ ಕಾರ್ಮಿಕ, ತಪ್ಪಿಸಿಕೊಳ್ಳಲು ಓಡಿ ಸುಸ್ತಾದ ಕಳ್ಳ ಸಾವು!

ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನಿಗೆ ಕಾರ್ಮಿಕನೊಬ್ಬ ಮೂಟೆ ಎಸೆದು ಅಡ್ಡಿಪಡಿಸಿದ್ದಾನೆ. ಇದರಿಂದ ಗಾಬರಿಗೊಂಡು ಓಡುವಾಗ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಳ್ಳ ಜುನೈದ್ ಹೃದಯಾಘಾತದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವಿಲಕ್ಷಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story