- Home
- Karnataka Districts
- Chikkamagaluru: ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕಟ್! ವೈರಲ್ ವಿಡಿಯೋ ಬೆನ್ನಲ್ಲೇ ಯುವಕನ ವಿರುದ್ಧ FIR
Chikkamagaluru: ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕಟ್! ವೈರಲ್ ವಿಡಿಯೋ ಬೆನ್ನಲ್ಲೇ ಯುವಕನ ವಿರುದ್ಧ FIR
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.

ಚಿಕ್ಕಮಗಳೂರು: ತಲ್ವಾರ್‌ನಿಂದ ಕೇಕ್ ಕತ್ತರಿಸಿದ ಪುಂಡ!
ಚಿಕ್ಕಮಗಳೂರು ನಗರದ ಹೊರಹೊಲಯದ ವಾಜಪೇಯಿ ಲೇಔಟ್‌ನಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಿನಿಮಾ ಸ್ಟೈಲ್‌ನಲ್ಲಿ ಮಚ್ಚು ಹಿಡಿದು ಕಾರಿನಿಂದಿಳಿದ ಯುವಕ!
ಮಹಮ್ಮದ್ ಸಮೀರ್ ಎಂಬ 20 ವರ್ಷದ ಯುವಕ ಕಾರಿನಿಂದ ರೌಡಿ ಸ್ಟೈಲ್‌ನಲ್ಲಿ ಕೆಳಗಿಳಿದಿದ್ದಾನೆ. ಕಾರಿನಿಂದ ಇಳಿಯುವಾಗ ಕೈಯಲ್ಲಿ ಸುಮಾರು ಎರಡೂವರೆ ಅಡಿ ಉದ್ದದ ಲಾಂಗ್ ಹಿಡಿದಿರುವುದು ವಿಡಿಯೋದಲ್ಲಿದೆ. ಕಾರಿನ ಬಾನೆಟ್ ಮೇಲೆ ಇಟ್ಟಿದ್ದ 5 ಕೆಜಿಗೂ ಹೆಚ್ಚು ತೂಕದ ಬೃಹತ್ ಕೇಕ್ ಕತ್ತರಿಸಿದ್ದಾನೆ.
ಹುಟ್ಟುಹಬ್ಬದ ನೆಪದಲ್ಲಿ ಲಾಂಗ್ ಹಿಡಿದು ಹುಚ್ಚಾಟ
ಈ ವೇಳೆ ಸುಮಾರು 10ಕ್ಕೂ ಹೆಚ್ಚು ಸ್ನೇಹಿತರು ಜೊತೆಗೆ ಇದ್ದಾರೆ. ನಡುರಾತ್ರಿ ಈ ಹುಟ್ಟುಹಬ್ಬದ ನೆಪದಲ್ಲಿ ಹುಚ್ಚಾಟ ಬೇಕಿತ್ತೆ? ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಬ್ಲಿಕ್ ಸ್ಥಳದಲ್ಲಿ ತಲ್ವಾರ್ ಪ್ರದರ್ಶಿಸುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪ ಕೇಳಿಬಂದಿದೆ.
ಪಬ್ಲಿಕ್‌ನಲ್ಲಿ ಲಾಂಗ್ ತೋರಿಸುವಂತಿಲ್ಲ
ಪಬ್ಲಿಕ್ ಸ್ಥಳದಲ್ಲಿ ತಲ್ವಾರ್ ಪ್ರದರ್ಶಿಸುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪ ಕೇಳಿಬಂದಿದೆ.
FIR
ವೈರಲ್ ವಿಡಿಯೋ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿ ತನಿಖೆ ಚುರುಕುಗೊಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಲಾಂಗ್ ಹಿಡಿದು ತಿರುಗಾಡಿದ ಹಾಗೂ ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಹಮ್ಮದ್ ಸಮೀರ್ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
