- Home
- Entertainment
- Rishab Shetty: 500 ಕೋಟಿ ಬಜೆಟ್, ಎರಡು ಭಾಗಗಳು: ರಿಷಬ್ ಚಿತ್ರದ ಬಗ್ಗೆ ಹೊರಬಿತ್ತು ಹೊಸ ಮಾಹಿತಿ!
Rishab Shetty: 500 ಕೋಟಿ ಬಜೆಟ್, ಎರಡು ಭಾಗಗಳು: ರಿಷಬ್ ಚಿತ್ರದ ಬಗ್ಗೆ ಹೊರಬಿತ್ತು ಹೊಸ ಮಾಹಿತಿ!
Rishab Shetty ಅಭಿನಯದ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಸುಮಾರು 500 ಕೋಟಿ ರೂಪಾಯಿ ಬಜೆಟ್‌ನ ಈ ಐತಿಹಾಸಿಕ ಚಿತ್ರ 2028 ಮತ್ತು 2029ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ
ರಿಷಬ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ ಎಂಬ ವಿಷಯ ಇದೀಗ ಹೊರಬಿದ್ದಿದೆ.
ಎರಡು ಭಾಗಗಳಲ್ಲಿ ಬಿಡುಗಡೆ
ಕಥೆಯ ವ್ಯಾಪ್ತಿ ಅಗಾಧವಾಗಿರುವ ಕಾರಣ ಮೂರು ಗಂಟೆಗಳಲ್ಲಿ ನಿರೂಪಿಸುವುದು ಕಷ್ಟ. ಹೀಗಾಗಿ ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆಗಳಾದ ಲೆಜೆಂಡ್ ಸ್ಟುಡಿಯೋಸ್ ಮತ್ತು ಇಮ್ಮರ್ಸೊ ಸ್ಟುಡಿಯೋಸ್ ಮುಂದಾಗಿವೆ ಎನ್ನಲಾಗಿದೆ.
ಐತಿಹಾಸಿಕ ಸಿನಿಮಾ
ಈ ಮೂಲಕ ಸಂದೀಪ್ ಸಿಂಗ್ ನಿರ್ದೇಶನದ ಈ ಚಿತ್ರ ಸುಮಾರು 500 ಕೋಟಿ ರು. ಬಜೆಟ್‌ನ ದೇಶದ ಅತೀದೊಡ್ಡ ಐತಿಹಾಸಿಕ ಸಿನಿಮಾವಾಗಿ ಹೊರಹೊಮ್ಮಲಿದೆ. ಚಿತ್ರದ ಮೊದಲ ಭಾಗ 2028ರಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2029ರಲ್ಲಿ ರಿಲೀಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ವಿವಿಧೆಡೆ ಶೂಟಿಂಗ್
ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾದ ಕೆಲಸ ಮುಗಿಸಿದ ಬಳಿಕ ರಿಷಬ್ ‘ಶಿವಾಜಿ ಮಹಾರಾಜ್’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಮಹಾರಾಷ್ಟ್ರದ ವಿವಿಧೆಡೆ ಶೂಟಿಂಗ್ ನಡೆಯಲಿದ್ದು, ಅರ್ಜುನ್ ರಾಂಪಾಲ್, ಶೆಫಾಲಿ ಶಾ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

