ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇಂದು ಸಂಜೆ 6 ಗಂಟೆಗೆ ಅಚ್ಚರಿಯ ಘೋಷಣೆ ಮಾಡಲಿದ್ದಾರೆ. ಇತ್ತೀಚೆಗೆ ಮೈಕ್ರೋ ಸೀರೀಸ್‌ನಲ್ಲಿ ಲಿಪ್ ಲಾಕ್ ಮಾಡಿ ವೈರಲ್ ಆಗಿದ್ದ ಈ ಜೋಡಿ, ಮದುವೆ ಅಥವಾ ಉದ್ಯಮದ ಬಗ್ಗೆ ಹೇಳಲಿದ್ದಾರಾ ಎಂಬ ಕುತೂಹಲ ಮೂಡಿದೆ.
- Home
- News
- State
- Karnataka News Live: ಶಿಶಿರ್ ಶಾಸ್ತ್ರಿ-ಐಶ್ವರ್ಯ ಸಿಂಧೋಗಿ ಸ್ನೇಹ, ಪ್ರೇಮ-ಪ್ರಣಯ, ಮದುವೆ? ಸಂಜೆ 6ಕ್ಕೆ ಬಿಗ್ ಅನೌನ್ಸ್‌ಮೆಂಟ್!
Karnataka News Live: ಶಿಶಿರ್ ಶಾಸ್ತ್ರಿ-ಐಶ್ವರ್ಯ ಸಿಂಧೋಗಿ ಸ್ನೇಹ, ಪ್ರೇಮ-ಪ್ರಣಯ, ಮದುವೆ? ಸಂಜೆ 6ಕ್ಕೆ ಬಿಗ್ ಅನೌನ್ಸ್‌ಮೆಂಟ್!

ಕಬ್ಬಿನ ದರ ನಿಗದಿ ಸಂಬಂಧ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ನಡೆಸಿದ ಮೂರು ಸುತ್ತಿನ ಸಂಧಾನ ಸಭೆಗಳು ಫಲಪ್ರದವಾಗಲಿಲ್ಲ. ಕಾರ್ಖಾನೆಗಳು ಮುಂದಿಟ್ಟ ₹3,500 ಮೊದಲ ಕಂತು ಹಾಗೂ ಸಕ್ಕರೆ ಮಾರಾಟ ದರ ಏರಿದರೆ 2ನೇ ಕಂತಿನಲ್ಲಿ ₹500 ಎರಡನೇ ಕಂತಿನ ಪ್ರಸ್ತಾಪವನ್ನು ರೈತ ಮುಖಂಡರು ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ದರ ನಿಗದಿ ಕಗ್ಗಂಟು ಮುಂದುವರಿದಿದೆ. ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ. ಇಂದು ಮತ್ತೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಬೆಳಗಾವಿ ಸಭೆಯಲ್ಲಿ ಏನಾಯ್ತು?
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದೀರ್ಘ ಮಾತುಕತೆ ನಡೆಯಿತು. ಪ್ರತಿ ಟನ್ ಕಬ್ಬಿಗೆ ಮೊದಲ ಕಂತಿನಲ್ಲಿ ₹3,500 ನೀಡುತ್ತೇವೆ. ಸಕ್ಕರೆಯ ಮಾರಾಟ ದರ ಪ್ರತಿ ಕೆ.ಜಿ.ಗೆ ₹50ಕ್ಕೆ ಏರಿಕೆಯಾದರೆ ಎರಡನೇ ಕಂತಿನಲ್ಲಿ ಹೆಚ್ಚುವರಿಯಾಗಿ ₹500 ನೀಡುತ್ತೇವೆ. ಒಟ್ಟು ₹4,000 ನೀಡಲು ಸಾಧ್ಯ ಎಂದು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಪ್ರಸ್ತಾಪಿಸಿದರು. ಇದಕ್ಕೆ ರೈತರು ಒಪ್ಪಲಿಲ್ಲ.
Karnataka News Live ಶಿಶಿರ್ ಶಾಸ್ತ್ರಿ-ಐಶ್ವರ್ಯ ಸಿಂಧೋಗಿ ಸ್ನೇಹ, ಪ್ರೇಮ-ಪ್ರಣಯ, ಮದುವೆ? ಸಂಜೆ 6ಕ್ಕೆ ಬಿಗ್ ಅನೌನ್ಸ್‌ಮೆಂಟ್!
Karnataka News Live ಬೇಡ್ತಿ ಅಘನಾಶಿನಿ ನದಿ ಜೋಡಣೆಗೆ ಭಾರೀ ಜನಾಕ್ರೋಶ, ವಿರೋಧದ ನಡುವೆ ಬೆಳಗ್ಗೆ ಹಾರಾಡಿದ ನಿಗೂಢ ವಿಮಾನ ಯಾವುದು?
ವರದಾ-ಬೇಡ್ತಿ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಯಲ್ಲಾಪುರದಲ್ಲಿ 10 ಸಾವಿರಕ್ಕೂ ಅಧಿಕ ಜನರಿಂದ ಬೃಹತ್ ಪ್ರತಿಭಟನೆ ನಡೆಯಿತು. ಯೋಜನೆ ಕೈಬಿಡಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ತಪ್ಪಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಲಾಗಿದೆ.
Karnataka News Live ರಾಜ್ಯದ ಐಟಿ-ಬಿಟಿಯಲ್ಲಿ ಕನ್ನಡಿಗರು ಕೇವಲ ಶೇ.25! ತಮಿಳುನಾಡಿನಲ್ಲಿ ಶೇ.90, ಆಂಧ್ರದಲ್ಲಿ ಶೇ.70ರಷ್ಟು; ಕರವೇ ಸಮೀಕ್ಷೆ
ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ. ಕನ್ನಡಿಗರ ಉದ್ಯೋಗದ ಕುರಿತು ಸಮೀಕ್ಷೆ ನಡೆಸುತ್ತಿರುವ ಕರವೇ, ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ಸರ್ಕಾರವನ್ನು ಒತ್ತಾಯಿಸಿದೆ.
Karnataka News Live ಬೆಂಗಳೂರು-ಹುಬ್ಬಳ್ಳಿ-ಪುಣೆ ಹೈಸ್ಪೀಡ್ ರೈಲಿನ ಸುಳಿವು, ಬುಲೆಟ್ ಟ್ರೈನ್ ಕಾರಿಡಾರ್ ಸಂಭಾವ್ಯ ರಾಜ್ಯದ ಮಾರ್ಗ ಇದು!
Karnataka News Live ಬೆಂಗಳೂರು ಉತ್ತರ ವಿವಿಯಲ್ಲಿ ₹35,000 ಸಂಬಳದ ಹುದ್ದೆಗಳಿಗೆ ಅರ್ಜಿ ಆಹ್ವಾನ - ಪರೀಕ್ಷೆ ಇಲ್ಲ, ಅರ್ಜಿ ಶುಲ್ಕವೂ ಇಲ್ಲ!
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು (BNU) 5 'ಸೂಪರ್ ಸ್ಕಿಲ್ಡ್ ಅಸಿಸ್ಟೆಂಟ್' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿ.ಟೆಕ್, ಬಿ.ಇ ಅಥವಾ ಎಂ.ಎಸ್ಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆ ಮತ್ತು ಅರ್ಜಿ ಶುಲ್ಕವಿಲ್ಲದೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದ್ದು, ನವೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
Karnataka News Live ಬೆಂಗಳೂರು ಗುಲಾಬಿ ಮಾರ್ಗ ಉದ್ಘಾಟನೆ ಬಳಿಕ 100 ಕಿಮೀ ಗಡಿ ದಾಟುವ ನಮ್ಮ ಮೆಟ್ರೊ! ದೇಶದಲ್ಲಿ 3ನೇ ಸ್ಥಾನ!
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಿಸಲು ನಮ್ಮ ಮೆಟ್ರೋದ 'ಗುಲಾಬಿ ಮಾರ್ಗ'ದ ಮೊದಲ ಹಂತ ನವೆಂಬರ್ 13ರಂದು ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕ ಜಾಲವು 100 ಕಿ.ಮೀ ಗಡಿ ದಾಟಿ ಹೊಸ ಇತಿಹಾಸ ಬರೆಯಲಿದೆ.