ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 900 ರಷ್ಟು ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
- Home
- News
- State
- Karnataka News Live: ಸರ್ಕಾರಿ ಆಸ್ಪತ್ರೆಗಳಲ್ಲಿ 900 ಹುದ್ದೆ ಖಾಲಿ - ವಾರದೊಳಗೆ ನೇಮಕಾತಿಗೆ ಸಚಿವ ಖಾದರ್ ಖಡಕ್ ಸೂಚನೆ
Karnataka News Live: ಸರ್ಕಾರಿ ಆಸ್ಪತ್ರೆಗಳಲ್ಲಿ 900 ಹುದ್ದೆ ಖಾಲಿ - ವಾರದೊಳಗೆ ನೇಮಕಾತಿಗೆ ಸಚಿವ ಖಾದರ್ ಖಡಕ್ ಸೂಚನೆ

ಮಂಡ್ಯ: ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದೆ. 3 ವರ್ಷಗಳ ಹಿಂದೆ ಜೂನ್ನಲ್ಲಿ ಅಣೆಕಟ್ಟೆಯೊಳಗೆ ಈ ಪ್ರಮಾಣದ ನೀರಿನ ಮಟ್ಟ ದಾಖಲಾಗಿತ್ತು. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 107.68 ಅಡಿ ನೀರು ಸಂಗ್ರಹವಾಗಿತ್ತು. ಆ ವೇಳೆ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದಿತ್ತು. ಜೊತೆಗೆ ಮುಂಗಾರು ಮಳೆಯೂ ನಿರೀಕ್ಷೆಯಂತೆ ಆಗಮನವಾಗಿದ್ದರಿಂದ ಅಂದು ಜಲಾಶಯಕ್ಕೆ ೬೫೧೩ ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಅಂದು ಜಲಾಶಯದಲ್ಲಿ 29.543 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಪ್ರಸ್ತುತ ಜಲಾಶಯದಲ್ಲಿ 81.36 ಅಡಿ ನೀರಿದ್ದು, ಅಣೆಕಟ್ಟೆಗೆ 528 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಿಂದ ನದಿ ಮತ್ತು ನಾಲೆ ಸೇರಿ 852 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 11.399 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಕೈಕೊಟ್ಟ ಪರಿಣಾಮ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ ನೀರು ಹರಿಸಲಾಯಿತು.
ಹಲವು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಯಿತು. ಇದರಿಂದ ಅಣೆಕಟ್ಟೆಯಲ್ಲಿ ನೀರನ್ನು ಕಾಯ್ದಿರಿಸಲು ಸಾಧ್ಯವಾಗಲಿಲ್ಲ. ಮಳೆ ಬಾರದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಜಲಾಶಯದಲ್ಲಿ ನೀರು ಕಡಿಮೆ ಆಗುತ್ತಿರುವುದರಿಂದ ನೀರೊಳಗೆ ಮುಳುಗಿದ್ದ ದೇಗುಲಗಳು ಗೋಚರಿಸಲಾರಂಭಿಸಿವೆ.
Karnataka News Live 7 June 2026ಸರ್ಕಾರಿ ಆಸ್ಪತ್ರೆಗಳಲ್ಲಿ 900 ಹುದ್ದೆ ಖಾಲಿ - ವಾರದೊಳಗೆ ನೇಮಕಾತಿಗೆ ಸಚಿವ ಖಾದರ್ ಖಡಕ್ ಸೂಚನೆ
Karnataka News Live 7 June 20262028ರಲ್ಲೂ ಅವಕಾಶ ನೀಡಿ, ಜನರ ಋಣ ತೀರಿಸುತ್ತೇನೆ - ಕಬ್ಬಾಳಮ್ಮ ಸನ್ನಿಧಿಯಲ್ಲಿ ಡಿಕೆಶಿ ಭಾವುಕ!
ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ.
Karnataka News Live 7 June 2026ತಾಯಿಯ ಫೋಟೋ ಹಂಚಿಕೊಂಡ ಸಿಎಂ ಡಿಕೆಶಿ - ಪೋಸ್ಟ್‌ನಲ್ಲಿ ಅಡಗಿದ್ದ ಭಾವನಾತ್ಮಕ ಕಥೆ ಏನು?
ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು..
Karnataka News Live 7 June 2026ಇಂದಿಗೂ ಜನ ನನ್ನನ್ನು ಟೈಗರ್ ಪ್ರಭಾಕರ್ ಮಗಳು ಅಂತಾರೆ - ಆ ದೊಡ್ಡ ರಹಸ್ಯ ಬಿಚ್ಚಿಟ್ಟ ಅನು ಪ್ರಭಾಕರ್!
ಟೈಗರ್ ಪ್ರಭಾಕರ್ ತಮ್ಮ ತಂದೆಯಲ್ಲ ಎಂದು ನಟಿ ಅನು ಪ್ರಭಾಕರ್ ಸ್ಪಷ್ಟಪಡಿಸಿದ್ದಾರೆ. ತಂದೆ ಎಂ.ವಿ. ಪ್ರಭಾಕರ್ ಅವರ ವ್ಯಕ್ತಿತ್ವ, ಕನ್ನಡದ ಮೇಲಿನ ಪ್ರೀತಿ ಹಾಗೂ ಅವರ ಸಾವಿನ ಹಿಂದಿನ ಆಘಾತಕಾರಿ ಕಾರಣದ ಬಗ್ಗೆ ಅನು ಭಾವುಕರಾಗಿ ಮಾತನಾಡಿದ್ದಾರೆ.
Karnataka News Live 7 June 2026ಜನರ ಮೇಲೆ ಮತ್ತೊಂದು ಹೊರೆ... ಸಿಲಿಂಡರ್ ದರ ಏರಿಕೆಗೆ ಡಿಸಿಎಂ ಪರಮೇಶ್ವರ್ ಆಕ್ರೋಶ
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಿಲಿಂಡರ್..
Karnataka News Live 7 June 2026ಐಟಿ ಕೆಲ್ಸ ಬಿಟ್ಟು ಬೆಂಗಳೂರಲ್ಲಿ ಆಟೋ ಓಡಿಸ್ತಿರೋ ಲೇಡಿ - ಅಮೆರಿಕದಲ್ಲಿಯೂ ಕನ್ನಡತಿಯ ಹವಾ
Karnataka News Live 7 June 2026ಮುಂದಿನ 3 ಗಂಟೆ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ - ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗುವ ಲಕ್ಷಣಗಳು ಕಂಡುಬಂದಿವೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
Karnataka News Live 7 June 2026ಕೆಲವೇ ದಿನಗಳಲ್ಲಿ ಆರಂಭವಾಗುವ Bigg Boss Kannada 13 ಶೋಗಾಗಿ, ಅಂತ್ಯ ಆಗುವ 3 ಧಾರಾವಾಹಿಗಳು ಯಾವುವು?
BB Kannada 13 Starting Date: ಬಿಗ್ ಬಾಸ್ ಕನ್ನಡ ಸೀಸನ್ 13 ಶೋ ಆದಷ್ಟು ಬೇಗ ಶುರು ಆಗಲಿದೆ. ಕಲರ್ಸ್ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ಬಿಗ್ ಬಾಸ್ ಶೋಗೆ ಸಂಬಂಧಪಟ್ಟಂತೆ ಪೂರ್ವ ತಯಾರಿ ನಡೆಯುತ್ತಿದೆ. ಹೀಗಿರುವಾಗ ಮೂರು ಧಾರಾವಾಹಿಗಳು ಅಂತ್ಯ ಆಗಬೇಕು.
Karnataka News Live 7 June 2026Kottiyoor Temple - ಸತಿದೇವಿ ಪ್ರಾಣ ಬಿಟ್ಟ ಸ್ಥಳದಲ್ಲಿ ನೂಕು ನುಗ್ಗುಲು, ಗೂಂಡಾಗಿರಿ, ಕನ್ನಡಿಗರಿಗೆ ಕ್ಯಾರೆ ಎನ್ನಲ್ಲ!
Kottiyoor temple opening date 2026 for public: ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ.
Karnataka News Live 7 June 2026ಆ ಹೀರೋಗಾಗಿಯೇ ನಾನು ಸಿನಿಮಾ ಕ್ಷೇತ್ರಕ್ಕೆ ಬಂದೆ.. ಕೊನೆಗೂ ಅಸಲೀ ಸತ್ಯ ಬಿಚ್ಚಿಟ್ಟ ಸಾಯಿ ಪಲ್ಲವಿ!
ಸಾಮಾನ್ಯವಾಗಿ ಇಂದಿನ ಜನರೇಷನ್ ನಟಿಯರನ್ನು "ನಿಮ್ಮ ಫೇವರಿಟ್ ನಟ ಯಾರು?" ಎಂದು ಕೇಳಿದರೆ, ಅವರು ತಮ್ಮ ಸಮಕಾಲೀನ ಸ್ಟಾರ್ ನಟರಾದ ಮಹೇಶ್ ಬಾಬು, ಪ್ರಭಾಸ್ ಅಥವಾ ಅಲ್ಲು ಅರ್ಜುನ್ ಹೆಸರನ್ನು ಹೇಳುತ್ತಾರೆ. ಆದರೆ ಸಾಯಿ ಪಲ್ಲವಿ ಈ ನಟನ ಹೆಸರನ್ನು ಹೇಳಿ ಶಾಕ್ ಸೃಷ್ಟಿಸಿದ್ದಾರೆ.
Karnataka News Live 7 June 2026Bigg Boss Kannada 13 Contestants - ಈ ಬಾರಿ ಬೇಗ ಶುರುವಾಗ್ತಿರೋ ಬಿಗ್ ಬಾಸ್; ಊಹಿಸದ ಸ್ಪರ್ಧಿಗಳು ಒಳಕ್ಕೆ; ಯಾರು?
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮುಗಿದು ಕೆಲವೇ ತಿಂಗಳುಗಳು ಕಳೆದಿವೆ. ವೀಕ್ಷಕರು ಈ ಶೋ ಹ್ಯಾಂಗ್‌ಓವರ್‌ನಲ್ಲಿರುವಾಗ ಈಗ ಸೀಸನ್ 13 ಆರಂಭ ಆಗ್ತಿದೆ. ಹೌದು, ಕಲರ್ಸ್ ಕನ್ನಡವೇ ಅಧಿಕೃತವಾಗಿ ಹೇಳಿಕೆ ನೀಡಿದೆ. ಹಾಗಾದರೆ ಯಾರು ಯಾರು ಭಾಗವಹಿಸಲಿದ್ದಾರೆ?
Karnataka News Live 7 June 2026ಎಲ್ಲಕ್ಕಿಂತ ಭಿನ್ನ ನೀಲಿ ನಮ್ಮ ಮೆಟ್ರೊ - ಚಾಲಕ ರಹಿತ ಸಾರಿಗೆ ಯಾವಾಗ ಆರಂಭ? ಏನೆಲ್ಲಾ ವಿಶೇಷತೆ
ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ರೈಲು ಬೆಂಗಳೂರಿಗೆ ಬಂದಿದೆ. ಚಾಲಕ ರಹಿತ ತಂತ್ರಜ್ಞಾನ ಮತ್ತು ವಿಶೇಷ ಲಗೇಜ್ ಸೌಲಭ್ಯ ಹೊಂದಿರುವ ಈ ಮಾರ್ಗವು ಇದೇ ವರ್ಷದ ಡಿಸೆಂಬರ್ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
Karnataka News Live 7 June 2026ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರಹಸ್ಯ ಬಯಲು; FIR ನಂತ್ರವೂ ಜನರಿಂದ ಹೂಡಿಕೆ
ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹೆಚ್ಚಿನ ಲಾಭದ ಆಮಿಷವೊಡ್ಡಿ 2,400 ಕೋಟಿ ಸಂಗ್ರಹಿಸಿ, ಹೊಸಬರ ಹಣವನ್ನು ಹಳಬರಿಗೆ ಬಡ್ಡಿಯಾಗಿ ನೀಡುತ್ತಿದ್ದ ವಂಚನೆಯ ಜಾಲವನ್ನು ಸಿಐಡಿ ವಿವರಿಸಿದೆ.
Karnataka News Live 7 June 2026ತೆಲುಗು ಬಿಗ್ ಬಜೆಟ್ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ? ಹೀರೋ ಯಾರು, ಸಿನಿಮಾ ಯಾವುದು ಗೊತ್ತಾ?
ಬಾಬಿ ನಿರ್ದೇಶನದ 'ಮೆಗಾ 158' ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಕನ್ನಡದ ನಟಿ ರಚಿತಾ ರಾಮ್ ನಟಿಸಲಿದ್ದಾರೆ. Kannada actress Rachita Ram will be seen in the Tollywood Megastar Chiranjeevi starrer 'Mega 158', which is being directed by Bobby.
Karnataka News Live 7 June 20269 ಕೋಟಿ ರೂ. ವಂಚನೆ ಆರೋಪದ ಕೇಸ್ - ಕೋರ್ಟ್ಗೆ ಹಾಜರಾಗದ ನಟ ಸುದೀಪ್- ಏನಿದು ಪ್ರಕರಣ
ನಟ ಕಿಚ್ಚ ಸುದೀಪ್ ಅವರು ನಿರ್ಮಾಪಕರಾದ ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ದಾಖಲಿಸಿರುವ 9 ಕೋಟಿ ರೂ. ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆದಿದೆ. ಸಿನಿಮಾ ಪ್ರಮೋಷನ್ನಲ್ಲಿ ನಿರತರಾಗಿದ್ದರಿಂದ ಸುದೀಪ್ ಅವರು ವಿಚಾರಣೆಗೆ ಗೈರುಹಾಜರಾಗಿದ್ದು, ಪ್ರಕರಣವನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.
Karnataka News Live 7 June 2026ಬೆಂಗಳೂರಿನಿಂದ ಆಗುಂಬೆಗೆ ನೇರ ಮೂರು ಬಸ್; ಕಡಿಮೆ ದರದ ಸುಂದರ ಪ್ರವಾಸಕ್ಕೆ KSRTC ಸಾರಿಗೆ
Karnataka News Live 7 June 2026Bhagyalakshmi Serial ಕೊನೇ ದಿನ..ಎಲ್ರ ಕಾಲೆಳಿತಿದ್ದ ಸುಷ್ಮಾ ರಾವ್ ಆ ವಿಷ್ಯ ಹೇಳಿ ಬಿಕ್ಕಿ ಬಿಕ್ಕಿ ಅತ್ರು
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಆಗಿದೆ. ಕಲಾವಿದರು ಈ ಸೀರಿಯಲ್‌ನ ಕೊನೇ ದಿನದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಸುಷ್ಮಾ ರಾವ್ ಅತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
Karnataka News Live 7 June 2026ಶಿವಮೊಗ್ಗ ನಿಧಿ ರಹಸ್ಯ - ಅರ್ಧ ಕೆಜಿ ಚಿನ್ನದ ನಾಣ್ಯ ಆಸೆ ತೋರಿಸಿ ₹9.60 ಲಕ್ಷ ದೋಚಿದ ಖದೀಮರು..! ಸಿನಿಮೀಯ ರೀತಿಯಲ್ಲಿ ಕೃತ್ಯ
Karnataka News Live 7 June 2026kalaburagi - ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತ
ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.