- Home
- Entertainment
- Sandalwood
- ತೆಲುಗು ಬಿಗ್ ಬಜೆಟ್ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ? ಹೀರೋ ಯಾರು, ಸಿನಿಮಾ ಯಾವುದು ಗೊತ್ತಾ?
ತೆಲುಗು ಬಿಗ್ ಬಜೆಟ್ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ? ಹೀರೋ ಯಾರು, ಸಿನಿಮಾ ಯಾವುದು ಗೊತ್ತಾ?
ಬಾಬಿ ನಿರ್ದೇಶನದ 'ಮೆಗಾ 158' ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಕನ್ನಡದ ನಟಿ ರಚಿತಾ ರಾಮ್ ನಟಿಸಲಿದ್ದಾರೆ. Kannada actress Rachita Ram will be seen in the Tollywood Megastar Chiranjeevi starrer 'Mega 158', which is being directed by Bobby.

ಟಾಲಿವುಡ್ ಚಿತ್ರಕ್ಕೆ ನಮ್ಮ 'ಡಿಂಪಲ್ ಕ್ವೀನ್' ಎಂಟ್ರಿ! ಹನಿ ರೋಸ್ ಮಾಡಬೇಕಿದ್ದ ಪಾತ್ರ ಈಗ ರಚಿತಾ ಪಾಲು?
ಸ್ಯಾಂಡಲ್‌ವುಡ್ ಅಂಗಳದಲ್ಲಿ ಈಗ ಒಂದೇ ಸುದ್ದಿ ಸದ್ದು ಮಾಡುತ್ತಿದೆ. ಅದೇ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಅವರ ಟಾಲಿವುಡ್ ಲಕ್! ಹೌದು, ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ, ಸೌತ್ ಇಂಡಿಯಾದ ಕ್ರಷ್ ರಚಿತಾ ರಾಮ್ ಈಗ ನೇರವಾಗಿ ಮೆಗಾಸ್ಟಾರ್ ಚಿರಂಜೀವಿ ಅವರ ಅಂಗಳಕ್ಕೆ ಜಿಗಿಯಲು ಸಜ್ಜಾಗಿದ್ದಾರೆ ಎಂಬ ಬಿಸಿ ಬಿಸಿ ಅಪ್‌ಡೇಟ್ ಫಿಲ್ಮ್ ನಗರದಲ್ಲಿ ಹರಿದಾಡುತ್ತಿದೆ.
ಏನಿದು ಚಿರು & ರಚ್ಚು ಕಾಂಬಿನೇಷನ್?
ಟಾಲಿವುಡ್‌ನ 'ವಾಲ್ತೇರು ವೀರಯ್ಯ' ಖ್ಯಾತಿಯ ಬಾಬಿ ಕೊಲ್ಲಿ ಮತ್ತು ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಇವರ ಕಾಂಬಿನೇಷನ್‌ನ 158ನೇ ಸಿನಿಮಾ (MEGA 158) ಅನೌನ್ಸ್ ಆದಾಗಿನಿಂದಲೂ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಇದು ಪಕ್ಕಾ ಮಾಸ್ ಆಕ್ಷನ್ ಎಂಟರ್‌ಟೈನರ್ ಆಗಿರಲಿದ್ದು, ಈ ಚಿತ್ರದಲ್ಲಿ ಒಂದು ಶಕ್ತಿಶಾಲಿ ಮತ್ತು ಅಷ್ಟೇ ತೂಕವಿರುವ ಮಹಿಳಾ ಪಾತ್ರವಿದೆಯಂತೆ. ಈ ಪಾತ್ರಕ್ಕಾಗಿ ಚಿತ್ರತಂಡ ಮೊದಲು ಹುಡುಕಿದ್ದು ಮಲಯಾಳಂ ಸೌಂದರ್ಯ ಹನಿ ರೋಸ್ ಅವರನ್ನು!
ಹನಿ ರೋಸ್ ಕೈತಪ್ಪಿದ ಅವಕಾಶ ರಚ್ಚು ಮುಡಿಗೆ!
'ವೀರಸಿಂಹ ರೆಡ್ಡಿ' ಸಿನಿಮಾದ ನಂತರ ತೆಲುಗಿನಲ್ಲಿ ಹನಿ ರೋಸ್ ಹವಾ ಜೋರಾಗಿತ್ತು. ಹೀಗಾಗಿ ಚಿತ್ರತಂಡ ಅವರನ್ನೇ ಫೈನಲ್ ಮಾಡಬೇಕು ಅಂದುಕೊಂಡಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು! ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅಥವಾ ಇನ್ಯಾವುದೋ ಅನಿವಾರ್ಯ ಕಾರಣಗಳಿಂದ ಹನಿ ರೋಸ್ ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಆಗ ನಿರ್ದೇಶಕ ಬಾಬಿ ಕೊಲ್ಲಿ ಅವರ ಕಣ್ಣಿಗೆ ಬಿದ್ದಿದ್ದೇ ನಮ್ಮ ಕನ್ನಡದ ಲಕ್ಕಿ ಬ್ಯೂಟಿ ರಚಿತಾ ರಾಮ್!
ಟಾಲಿವುಡ್‌ನಲ್ಲಿ ಈ ಬಾರಿ ಅದೃಷ್ಟ ಕೈಹಿಡಿಯುತ್ತಾ?
ರಚಿತಾ ರಾಮ್ ಅವರಿಗೆ ತೆಲುಗು ಚಿತ್ರರಂಗ ಹೊಸದೇನಲ್ಲ. 2022ರಲ್ಲಿ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ಎಂಬ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ, ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ.
ಆದರೆ ಈಗ ಸಿಕ್ಕಿರುವುದು ಸಣ್ಣ ಅವಕಾಶವಲ್ಲ, ಸಾಕ್ಷಾತ್ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರ! ಈ ಒಂದು ಅವಕಾಶವೇನಾದರೂ ವರ್ಕ್ ಆದರೆ, ಟಾಲಿವುಡ್‌ನಲ್ಲಿ ರಚಿತಾ ರಾಮ್ ಅವರ ಡಿಮ್ಯಾಂಡ್ ಗಗನಕ್ಕೇರುವುದರಲ್ಲಿ ಸಂಶಯವೇ ಇಲ್ಲ.
ಕನ್ನಡದಲ್ಲೂ ರಚ್ಚು ಫುಲ್ ಬ್ಯುಸಿ!
ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಅವರಂತಹ ಘಟಾನುಘಟಿ ನಟರ ಜೊತೆ ನಟಿಸಿರುವ ರಚ್ಚು, ಸದ್ಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ 'ಕ್ರಿಮಿನಲ್' ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೆ 'ಶಬರಿ' ಹಾಗೂ 'ಲವ್ ಮಿ or ಹೇಟ್ ಮಿ' ಚಿತ್ರಗಳೂ ಸಾಲಿನಲ್ಲಿವೆ.
ಒಟ್ಟಿನಲ್ಲಿ, "ಸಿನಿಮಾ ಚೆನ್ನಾಗಿದ್ರೆ ಜನ ನೋಡೇ ನೋಡ್ತಾರೆ" ಎನ್ನುವ ರಚಿತಾ ರಾಮ್ ಅವರಿಗೆ ಚಿರಂಜೀವಿ ಸಿನಿಮಾ ದೊಡ್ಡ ಮೈಲಿಗಲ್ಲಾಗುವ ಲಕ್ಷಣ ಕಾಣುತ್ತಿದೆ. ಒಂದು ವೇಳೆ ಈ ಸುದ್ದಿ ಅಧಿಕೃತವಾದರೆ, ಕನ್ನಡದ ಮತ್ತೊಬ್ಬ ನಟಿ ತೆಲುಗು ನೆಲದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಿಸುವುದು ಖಚಿತ! ಈ ಮೆಗಾ ಅಪ್‌ಡೇಟ್ ಕೇಳಿ ರಚಿತಾ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

