MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • Sandalwood
  • ಇಂದಿಗೂ ಜನ ನನ್ನನ್ನು ಟೈಗರ್ ಪ್ರಭಾಕರ್ ಮಗಳು ಅಂತಾರೆ: ಆ ದೊಡ್ಡ ರಹಸ್ಯ ಬಿಚ್ಚಿಟ್ಟ ಅನು ಪ್ರಭಾಕರ್!

ಇಂದಿಗೂ ಜನ ನನ್ನನ್ನು ಟೈಗರ್ ಪ್ರಭಾಕರ್ ಮಗಳು ಅಂತಾರೆ: ಆ ದೊಡ್ಡ ರಹಸ್ಯ ಬಿಚ್ಚಿಟ್ಟ ಅನು ಪ್ರಭಾಕರ್!

ಟೈಗರ್ ಪ್ರಭಾಕರ್ ತಮ್ಮ ತಂದೆಯಲ್ಲ ಎಂದು ನಟಿ ಅನು ಪ್ರಭಾಕರ್ ಸ್ಪಷ್ಟಪಡಿಸಿದ್ದಾರೆ. ತಂದೆ ಎಂ.ವಿ. ಪ್ರಭಾಕರ್ ಅವರ ವ್ಯಕ್ತಿತ್ವ, ಕನ್ನಡದ ಮೇಲಿನ ಪ್ರೀತಿ ಹಾಗೂ ಅವರ ಸಾವಿನ ಹಿಂದಿನ ಆಘಾತಕಾರಿ ಕಾರಣದ ಬಗ್ಗೆ ಅನು ಭಾವುಕರಾಗಿ ಮಾತನಾಡಿದ್ದಾರೆ.

2 Min read
Author : Govindaraj S
Published : Jun 07 2026, 06:58 PM IST
Share this Photo Gallery
  • FB
  • TW
  • Linkdin
  • Whatsapp
16
ತೆರೆ ಎಳೆದ ಅನು ಪ್ರಭಾಕರ್
Image Credit : others

ತೆರೆ ಎಳೆದ ಅನು ಪ್ರಭಾಕರ್

ಕನ್ನಡ ಚಿತ್ರರಂಗದ ಖ್ಯಾತ ನಟಿ ಅನು ಪ್ರಭಾಕರ್ ಎಲ್ಲಿಗೆ ಹೋದರೂ ಕೇಳಿಬರುವ ಒಂದು ಪ್ರಶ್ನೆ ಎಂದರೆ, "ನೀವು ಟೈಗರ್ ಪ್ರಭಾಕರ್ ಅವರ ಮಗಳಾ?" ಎಂಬುದು. ವರ್ಷಗಳಾದರೂ ಜನರಲ್ಲಿ ಇರುವ ಈ ಗೊಂದಲಕ್ಕೆ ಇದೀಗ ಅವರು ತೆರೆ ಎಳೆದಿದ್ದಾರೆ. ಇತ್ತೀಚೆಗೆ ಆರ್‌ಜೆ ರಾಜೇಶ್ ನಡೆಸುವ Rajesh Reveals ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಅನು ಪ್ರಭಾಕರ್, ತಮ್ಮ ತಂದೆಯ ಕುರಿತು, ಅವರ ವ್ಯಕ್ತಿತ್ವದ ಕುರಿತು ಹಾಗೂ ಕುಟುಂಬದ ಹಿನ್ನೆಲೆಯ ಕುರಿತು ಮನಮುಟ್ಟುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅವರು ನಮ್ಮ ತಂದೆಯಲ್ಲ
Image Credit : others

ಅವರು ನಮ್ಮ ತಂದೆಯಲ್ಲ

ತಮ್ಮ ಹೆಸರಿನಲ್ಲಿರುವ ‘ಪ್ರಭಾಕರ್’ ಎಂಬ ಕಾರಣದಿಂದಲೇ ಈ ಗೊಂದಲ ಹುಟ್ಟಿಕೊಂಡಿದೆ ಎಂದು ಹೇಳಿದ ಅನು ಪ್ರಭಾಕರ್, "ಖ್ಯಾತ ನಟ ಟೈಗರ್ ಪ್ರಭಾಕರ್ ಅವರು ನಮ್ಮ ತಂದೆಯಲ್ಲ. ನನ್ನ ತಂದೆಯ ಹೆಸರು ಎಂ.ವಿ. ಪ್ರಭಾಕರ್. ಅವರು ಹಾಗೂ ನನ್ನ ಅಣ್ಣ ಇಬ್ಬರೂ ಸಿನಿಮಾ ರಂಗದಿಂದ ದೂರವಿದ್ದವರು. ಆದರೆ ನನ್ನ ತಾಯಿ ಗಾಯತ್ರಿ ಪ್ರಭಾಕರ್ ಅವರು ಡಬ್ಬಿಂಗ್ ಕಲಾವಿದೆಯಾಗಿ ಹಾಗೂ ನಿರೂಪಕಿಯಾಗಿ ಚಿತ್ರರಂಗದ ನಂಟು ಹೊಂದಿದ್ದರು," ಎಂದು ಸ್ಪಷ್ಟಪಡಿಸಿದರು."ಇಂದಿಗೂ ಅನೇಕರು ನನ್ನನ್ನು ಟೈಗರ್ ಪ್ರಭಾಕರ್ ಅವರ ಮಗಳು ಎಂದು ಭಾವಿಸುತ್ತಾರೆ. ನಟ ವಿನೋದ್ ಪ್ರಭಾಕರ್ ಅವರನ್ನು ಭೇಟಿಯಾದಾಗಲೂ 'ಅನು ಹೇಗಿದ್ದಾರೆ?' ಎಂದು ಕೇಳುವಷ್ಟು ಈ ಗೊಂದಲ ಮುಂದುವರಿದಿದೆ," ಎಂದು ಅವರು ನಗುತ್ತಾ ಹೇಳಿದರು.

Related Articles

Related image1
10 ರೂಪಾಯಿ ಕೊಟ್ಟು ಯಾರೂ ಮಲ್ಲಿಗೆ ಹೂ ತರಲ್ಲ ಅನ್ನೋ ಬೇಸರ ಜಯಂತಿ ಅಮ್ಮನಿಗಿತ್ತು: ಅನು ಪ್ರಭಾಕರ್
Related image2
ಎಂಟ್ರಿ ಆಗ್ತಿದ್ದಂಗೆನೇ ಶಿವಣ್ಣನನ್ನು ತಬ್ಬಿಕೊಂಡು ಕಿಸ್​ ಮಾಡು ಅಂದ್ಬಿಟ್ರು... ಗಾಬರಿ ಬಿದ್ದೋದೆ: ನಟಿ ಅನು ಪ್ರಭಾಕರ್​
36
ರಾಜ್‌ಕುಮಾರ್ ಎಂದರೆ ತಂದೆಗೆ ಪ್ರಾಣ
Image Credit : others

ರಾಜ್‌ಕುಮಾರ್ ಎಂದರೆ ತಂದೆಗೆ ಪ್ರಾಣ

ತಮ್ಮ ಕತ್ತಿನ ಮೇಲೆ ಹಾಕಿಸಿಕೊಂಡಿರುವ ‘ಅಪ್ಪ ಗರ್ಲ್’ ಟ್ಯಾಟೂ ತೋರಿಸಿದ ಅನು, ತಂದೆಯ ಮೇಲಿನ ಪ್ರೀತಿಯನ್ನು ಹಂಚಿಕೊಂಡರು. "ನನ್ನ ತಂದೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗಿಯಾಗಿದ್ದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ನೇತೃತ್ವ ವಹಿಸುತ್ತಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ಒಂದು ಇಂಗ್ಲಿಷ್ ಪದವನ್ನೂ ಬಳಸದೆ ಅಚ್ಚ ಕನ್ನಡದಲ್ಲೇ ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಭಾಷೆ ಮತ್ತು ಡಾ. ರಾಜ್‌ಕುಮಾರ್ ಎಂದರೆ ಅಪಾರ ಗೌರವ ಹಾಗೂ ಪ್ರೀತಿ ಇತ್ತು," ಎಂದು ನೆನಪಿಸಿಕೊಂಡರು.

46
ನನ್ನ ಸಿನಿಮಾ ಕನಸಿಗೆ ದೊಡ್ಡ ಬೆಂಬಲ ತಂದೆಯೇ
Image Credit : others

ನನ್ನ ಸಿನಿಮಾ ಕನಸಿಗೆ ದೊಡ್ಡ ಬೆಂಬಲ ತಂದೆಯೇ

ಅನು ಪ್ರಭಾಕರ್ ಅಭಿನಯ ಜೀವನ ಆರಂಭಿಸಿದ ಹೃದಯ ಹೃದಯ ಚಿತ್ರವೇ ತಂದೆಗೆ ಹೆಮ್ಮೆಯ ವಿಷಯವಾಗಿತ್ತಂತೆ. "ನಾನು ನಟಿಸಿದ ಸಿನಿಮಾಗಳನ್ನು ಅಪ್ಪ ತಪ್ಪದೇ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿದ್ದರು. ನನ್ನ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು, ಸಿನಿಮಾ ಕ್ಯಾಸೆಟ್‌ಗಳು ಎಲ್ಲವನ್ನೂ ಸಂಗ್ರಹಿಸಿ ಇಡುತ್ತಿದ್ದರು. ಅಮ್ಮ ನನ್ನ ನಟನೆಯಲ್ಲಿ ತಪ್ಪುಗಳನ್ನು ಹುಡುಕುತ್ತಿದ್ದರೆ, ಅಪ್ಪನಿಗೆ ನಾನು ಏನೇ ಮಾಡಿದರೂ ಅದು ಅತ್ಯುತ್ತಮವೆನಿಸುತ್ತಿತ್ತು," ಎಂದು ಭಾವುಕರಾದರು.

56
ಬಳಸಿದ ಸಿರಿಂಜ್‌ನಿಂದ ತಗುಲಿದ ಸೋಂಕು
Image Credit : others

ಬಳಸಿದ ಸಿರಿಂಜ್‌ನಿಂದ ತಗುಲಿದ ಸೋಂಕು

ತಂದೆಯ ಅನಾರೋಗ್ಯದ ಹಿಂದಿದ್ದ ನೋವಿನ ಸಂಗತಿಯನ್ನೂ ಇದೇ ವೇಳೆ ಅನು ಬಹಿರಂಗಪಡಿಸಿದರು. "ನನ್ನ ತಂದೆಗೆ ಲಿವರ್ ಸಮಸ್ಯೆ ಉಂಟಾಗಿತ್ತು. ಅದು ಮದ್ಯಪಾನದಿಂದಲ್ಲ. ಬಿಎಚ್‌ಇಎಲ್‌ನಲ್ಲಿ ರಕ್ತದಾನ ಮಾಡುವ ವೇಳೆ ಬಳಸಿದ ಸಿರಿಂಜ್‌ನಿಂದ ಅವರಿಗೆ ಗಂಭೀರ ಸೋಂಕು ತಗುಲಿತ್ತು. ಈ ಸಂಗತಿ ನಮಗೆ ಹಲವು ವರ್ಷಗಳ ಬಳಿಕ ತಿಳಿಯಿತು. ಚಿಕಿತ್ಸೆ ಪಡೆದರೂ ಅವರು ಕೇವಲ ಹತ್ತು ವರ್ಷಗಳ ಕಾಲ ಮಾತ್ರ ಬದುಕಲು ಸಾಧ್ಯವಾಯಿತು," ಎಂದು ಬೇಸರ ವ್ಯಕ್ತಪಡಿಸಿದರು.

66
ನೆನಪುಗಳಲ್ಲಿ ಇಂದಿಗೂ ಜೀವಂತ
Image Credit : others

ನೆನಪುಗಳಲ್ಲಿ ಇಂದಿಗೂ ಜೀವಂತ

ತಂದೆ ಇಂದು ದೈಹಿಕವಾಗಿ ಜೊತೆಯಲ್ಲದಿದ್ದರೂ, ಅವರ ನೆನಪುಗಳು ಕುಟುಂಬದ ಬದುಕಿನ ಭಾಗವಾಗಿಯೇ ಉಳಿದಿವೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ. "ನಾವು ಇಂದಿಗೂ ಅಪ್ಪನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ. ನನ್ನ ಮಗಳು ಕೇಕ್ ತಯಾರಿಸುತ್ತಾಳೆ. ಅಪ್ಪನಿಗೆ ಇಷ್ಟವಾಗಿದ್ದ ಆಹಾರಗಳನ್ನು ತಿನ್ನುತ್ತೇವೆ. ಅವರು ನಮ್ಮ ಜೊತೆ ಇಲ್ಲದಿದ್ದರೂ, ಅವರ ನೆನಪುಗಳು ಎಂದಿಗೂ ನಮ್ಮೊಂದಿಗೇ ಇರುತ್ತವೆ," ಎಂದು ಭಾವುಕರಾಗಿ ಮಾತನಾಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು
 

Latest Videos
Recommended Stories
Recommended image1
ಡಾ. ರಾಜ್‌ಕುಮಾರ್‌ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್: 54 ವರ್ಷಗಳ ಬಳಿಕ ಕಲರ್‌ನಲ್ಲಿ 'ಜಗಮೆಚ್ಚಿದ ಮಗ'
Recommended image2
Birthday's Special: ಕನ್ನಡದ 3 ದಿಗ್ಗಜರ ಜನ್ಮದಿನ- ವಿಷ್ಣುವರ್ಧನ್-ಉಪೇಂದ್ರ-ಶ್ರುತಿ.. ಈ ತ್ರಿಮೂರ್ತಿಗಳ ಹುಟ್ಟುಹಬ್ಬದಂದು ಇವೆಲ್ಲಾ ವಿಶೇಷತೆಗಳಿವೆ ನೋಡಿ!
Recommended image3
Dr Vishnuvardhan 75th Birthday: ವಿಷ್ಣುವರ್ಧನ್ ಬಗ್ಗೆ ನಿಮಗೆ ಇನ್ನೂ ಗೊತ್ತಿಲ್ಲದ ಹಲವು ಸೀಕ್ರೆಟ್‌ಗಳು ಇಲ್ಲಿವೆ ನೋಡಿ!
Related Stories
Recommended image1
10 ರೂಪಾಯಿ ಕೊಟ್ಟು ಯಾರೂ ಮಲ್ಲಿಗೆ ಹೂ ತರಲ್ಲ ಅನ್ನೋ ಬೇಸರ ಜಯಂತಿ ಅಮ್ಮನಿಗಿತ್ತು: ಅನು ಪ್ರಭಾಕರ್
Recommended image2
ಎಂಟ್ರಿ ಆಗ್ತಿದ್ದಂಗೆನೇ ಶಿವಣ್ಣನನ್ನು ತಬ್ಬಿಕೊಂಡು ಕಿಸ್​ ಮಾಡು ಅಂದ್ಬಿಟ್ರು... ಗಾಬರಿ ಬಿದ್ದೋದೆ: ನಟಿ ಅನು ಪ್ರಭಾಕರ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved