ಬೆಂಗಳೂರಿನಿಂದ ಆಗುಂಬೆಗೆ ನೇರ ಮೂರು ಬಸ್; ಕಡಿಮೆ ದರದ ಸುಂದರ ಪ್ರವಾಸಕ್ಕೆ KSRTC ಸಾರಿಗೆ
ಬೆಂಗಳೂರಿನಿಂದ ಆಗುಂಬೆಗೆ ಕಡಿಮೆ ದರದಲ್ಲಿ ಪ್ರಯಾಣಿಸಲು ಲಭ್ಯವಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ. ಇದರಲ್ಲಿ ನಾನ್ ಎಸಿ ಸ್ಲೀಪರ್ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳ ಸಮಯ, ಮಾರ್ಗ, ಮತ್ತು ಟಿಕೆಟ್ ದರಗಳ ವಿವರಗಳನ್ನು ಒದಗಿಸಲಾಗಿದೆ.

Bengaluru To Agumbe ಕೆಎಸ್‌ಆರ್‌ಟಿಸಿ ಬಸ್‌ಗಳು
ಬೆಂಗಳೂರಿನಿಂದ ಒಂದು ದಿನದ ಟ್ರಿಪ್ ಹೋಗುತ್ತಿದ್ರೆ ಆಗುಂಬೆಗೆ ಕಡಿಮೆ ದರದಲ್ಲಿ ತೆರಳಬಹುದು. ರಾಜಧಾನಿ ಬೆಂಗಳೂರಿನಿಂದ ನೇರವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಸಾರಿಗೆ ಬಸ್ ಮೂಲಕ ಪ್ರಯಾಣ ಮಾಡೋದರಿಂದ ಹಣ ಉಳಿತಾಯವಾಗಲಿದೆ. ಮೂರು ಬಸ್‌ಗಳ ವಿವರವನ್ನು ಈ ಲೇಖನ ಒಳಗೊಂಡಿದೆ.
ಬೆಂಗಳೂರು To ಆಗುಂಬೆ (2203BNGAGB) Non AC Sleeper
ಪ್ರತಿದಿನ ರಾತ್ರಿ 10 ಗಂಟೆ 3 ನಿಮಿಷಕ್ಕೆ ಮೆಜೆಸ್ಟಿಕ್ ನಿಲ್ದಾಣದಿಂದ ಹೊರಡುವ ಈ ಸಬ್ ಮರುದಿನ ಬೆಳಗ್ಗೆ 7 ಗಂಟೆ 30 ನಿಮಿಷಕ್ಕೆ ತಲಪುತ್ತೆ. ಶಿವಮೊಗ್ಗ-ತೀರ್ಥಹಳ್ಳಿ ಮಾರ್ಗವಾಗಿ ಈ ಬಸ್ ಚಲಿಸುತ್ತದೆ.
ಬೋರ್ಡಿಂಗ್ ಪಾಯಿಂಟ್ಸ್: ಮೆಜೆಸ್ಟಿಕ್, ನವರಂಗ, ಯಶವಂತಪುರ ಗೋವರ್ಧನ ಥಿಯೇಟರ್, ಗೊರಗುಂಟೆಪಾಳ್ಯ ಕೆಎಲ್‌ಇ ಡೆಂಟಲ್ ಕಾಲೇಜ್, ಜಾಲಹಳ್ಳಿ ಕ್ರಾಸ್, ನೆಲಮಂಗಲ ಕುಣಿಗಲ್ ಬೈಪಾಸ್
ಟಿಕೆಟ್ ದರ: 856 ರೂಪಾಯಿ
ಬೆಂಗಳೂರು To ಆಗುಂಬೆ (0700BNGAGB) ಕರ್ನಾಟಕ ಸಾರಿಗೆ
ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹೊರಡು ವ ಬಸ್ ಮಧ್ಯಾಹ್ನ 3 ಗಂಟೆಗೆ ಆಗುಂಬೆಯನ್ನು ತಲುಪಲಿದೆ. ಹಾಸನ, ಚಿಕ್ಕಮಗಳೂರು, ಆಲ್ದೂರು, ಬಾಳೆಹೊನ್ನೂರು, ಜಯಪುರ, ಕೊಪ್ಪ ಮಾರ್ಗದಲ್ಲಿ ಚಲಿಸುತ್ತದೆ.
ಬೋರ್ಡಿಂಗ್ ಪಾಯಿಂಟ್ಸ್: ಮೆಜೆಸ್ಟಿಕ್, ನವರಂಗ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, 8ನೇ ಮೈಲಿ, ಪಾರ್ಲೆ ಜಿ ಟೋಲ್, ನೆಲಮಂಗಲ-ಕುಣಿಗಲ್ ಬೈಪಾಸ್
ಟಿಕೆಟ್ ದರ: 506 ರೂಪಾಯಿ
ಬೆಂಗಳೂರು To ಆಗುಂಬೆ (1020BNGAGB) ಕರ್ನಾಟಕ ಸಾರಿಗೆ
ಪ್ರತಿದಿನ ಬೆಳಗ್ಗೆ 10 ಗಂಟೆ 20 ನಿಮಿಷಕ್ಕೆ ಹೊರಡುವ ಕರ್ನಾಟಕ ಸಾರಿಗೆ ಬಸ್ ಅದೇ ದಿನ ರಾತ್ರಿ 7 ಗಂಟೆಗೆ ಆಗುಂಬೆಯನ್ನು ತಲುಪಲಿದೆ. ಈ ಬಸ್ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆಯನ್ನು ಸೇರುತ್ತದೆ.
ಬೋರ್ಡಿಂಗ್ ಪಾಯಿಂಟ್ಸ್: ಮೆಜೆಸ್ಟಿಕ್, ನವರಂಗ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, 8ನೇ ಮೈಲಿ, ಪಾರ್ಲೆ ಜಿ ಟೋಲ್, ನೆಲಮಂಗಲ-ಕುಣಿಗಲ್ ಬೈಪಾಸ್
ಟಿಕೆಟ್ ದರ: 484 ರೂಪಾಯಿ
ಹೆಚ್ಚಿನ ಮಾಹಿತಿಗಾಗಿ https://ksrtc.in/ ಪೇಜ್‌ಗೆ ಭೇಟಿ ನೀಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

