- Home
- Entertainment
- TV Talk
- Bhagyalakshmi Serial ಕೊನೇ ದಿನ..ಎಲ್ರ ಕಾಲೆಳಿತಿದ್ದ ಸುಷ್ಮಾ ರಾವ್ ಆ ವಿಷ್ಯ ಹೇಳಿ ಬಿಕ್ಕಿ ಬಿಕ್ಕಿ ಅತ್ರು
Bhagyalakshmi Serial ಕೊನೇ ದಿನ..ಎಲ್ರ ಕಾಲೆಳಿತಿದ್ದ ಸುಷ್ಮಾ ರಾವ್ ಆ ವಿಷ್ಯ ಹೇಳಿ ಬಿಕ್ಕಿ ಬಿಕ್ಕಿ ಅತ್ರು
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಆಗಿದೆ. ಕಲಾವಿದರು ಈ ಸೀರಿಯಲ್‌ನ ಕೊನೇ ದಿನದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಸುಷ್ಮಾ ರಾವ್ ಅತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಕೇಕ್ ಕಟ್ ಮಾಡಿದ ಸೀರಿಯಲ್ ಟೀಂ
ಭಾಗ್ಯಲಕ್ಷ್ಮೀ ಸೀರಿಯಲ್ ಟೀಂ ಕೇಕ್ ಕಟ್ ಮಾಡಿ ಕೊನೆಯ ದಿನದ ಶೂಟಿಂಗ್ ಮಾಡಿದೆ. ಕಲಾವಿದರು ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?
550 ಸಿನಿಮಾಗಳಲ್ಲಿ ನಟಿಸಿದರೂ ಕೂಡ, ನಾನು ಮೊದಲ ಸಿನಿಮಾ, ಧಾರಾವಾಹಿ ಎಂದೇ ತಿಳಿದುಕೊಂಡು ನಟಿಸುತ್ತೇನೆ. ನಾನು ಕಟ್ ಹೇಳಿದ್ಮೇಲೆ ನಟಿಸೋದಿಲ್ಲ. ಸೌಜನ್ಯ, ಸನ್ನಡತೆ ಇಟ್ಟುಕೊಂಡು ನಟಿಸಿ, ಕೊನೆಯವರೆಗೆ ನಿಮಗೆ ಒಳ್ಳೆಯದಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಅವರು ಹೇಳಿದ್ದಾರೆ.
ಕಣ್ಣೀರು ಹಾಕಿದ ಸುಷ್ಮಾ ರಾಔ
ನಾನು ಈ ಧಾರಾವಾಹಿ ತಂಡವನ್ನು ತುಂಬ ಮಿಸ್ ಮಾಡಿಕೊಳ್ತೀನಿ, ತಂತ್ರಜ್ಞರನ್ನು ಮಿಸ್ ಮಾಡಿಕೊಳ್ತೀನಿ ಎಂದು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ ರಾವ್ ಅವರು ಕಣ್ಣೀರು ಹಾಕಿದ್ದಾರೆ. ಯಾವಾಗಲೂ ನಗುತ್ತ, ಎಲ್ಲರ ಕಾಲೆಳೆಯುತ್ತಿದ್ದ ಸುಷ್ಮಾ ಅವರು ಈ ಬಾರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ದೊಡ್ಡ ತಾರಾ ಬಳಗವಿರುವ ಧಾರಾವಾಹಿ
2022ರಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಆರಂಭವಾಗಿತ್ತು. ನಾಲ್ಕು ವರ್ಷಗಳ ಕಾಲ ಈ ಸೀರಿಯಲ್ ಪ್ರಸಾರ ಆಗಿತ್ತು. ಮುಖ್ಯಮಂತ್ರಿ ಚಂದ್ರು, ಸುಷ್ಮಾ ಕೆ ರಾವ್, ಸುದರ್ಶನ್ ರಂಗಪ್ರಸಾದ್, ಹರೀಶ್ ರಾಜ್, ಸುನಿತಾ ಶೆಟ್ಟಿ, ನಿಹಾರ್ ಗೌಡ, ಅಮೃತಾ, ರಾಜೇಶ್ ಧ್ರುವ, ಭವ್ಯಶ್ರೀ ರೈ ಅವರು ನಟಿಸುತ್ತಿದ್ದಾರೆ.
ಈ ಧಾರಾವಾಹಿ ಕತೆ ಏನು?
ಅಷ್ಟಾಗಿ ವಿದ್ಯೆ ಇಲ್ಲದ, ಅತ್ತೆ ಹೇಳಿಕೊಂಡು ಬದುಕುವ ಭಾಗ್ಯಳನ್ನು ಕಂಡರೆ ತಾಂಡವ್‌ಗೆ ಆಗುತ್ತಿರಲಿಲ್ಲ. ತಾಯಿ ಹೇಳಿದಳು ಅಂತ ತಾಂಡವ್, ಭಾಗ್ಯಳನ್ನು ಮದುವೆಯಾಗಿದ್ದನು. ಆಮೇಲೆ ನಿತ್ಯವೂ ಅವಳನ್ನು ನಿಂದಿಸುತ್ತಿದ್ದನು. ಆಮೇಲೆ ಶ್ರೇಷ್ಠ ಎನ್ನುವವಳನ್ನು ಪ್ರೀತಿಸಿ ಮದುವೆಯಾದನು. ಭಾಗ್ಯ ಕೂಡ ಇನ್ನೊಂದು ಮದುವೆಯಾದಳು. ಇದರ ಸುತ್ತವೇ ಕಥೆ ಸಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

