- Home
- News
- State
- Karnataka News Live: ಕೋಲಾರ - ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!
Karnataka News Live: ಕೋಲಾರ - ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸುಳ್ಳು ಹೇಳುವ, ಮಿಸ್ಗೈಡ್ ಮಾಡುವ ಚಟವಿದೆ. ಮಾಧ್ಯಮದ ಮುಂದೆ ಹೋಗೋ ಚಟವಿದೆ’. ಗಲಾಟೆಯಲ್ಲಿ ಮೃತಪಟ್ಟ ಯುವಕನ ದೇಹವನ್ನು 2 ಬಾರಿ ಪೋಸ್ಟ್ ಮಾರ್ಟಂ ಮಾಡಲಾಗಿದೆ ಎಂದು ಎಚ್ಡಿಕೆ ಮಾಧ್ಯಮಗಳಿಗೆ ಹೇಳಿದ್ದಾರೆ. ಅವರು ಬಳ್ಳಾರಿಗೇ ಬಂದಿಲ್ಲ. ಅವರಿಗೆ ಹೇಗೆ ಗೊತ್ತಾಯಿತು ಎಂದು ಡಿಕೆಶಿ ಪ್ರಶ್ನಿಸಿದರು.
ಬ್ಯಾನರ್ ಗಲಾಟೆ ವೇಳೆ ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಗಾಲಿ ಜನಾರ್ದನ ರೆಡ್ಡಿ ಅವರು ಹೇಳಿದ್ದು, ಬುಲೆಟ್ ಸಹ ಪ್ರದರ್ಶಿಸಿದ್ದಾರೆ. ಆದರೆ ಬುಲೆಟ್ ಮೈಗೆ ಬಿತ್ತಾ, ಕೈಗೆ ಬಿದ್ದಿತಾ? ಯಾವ ಭಾಗಕ್ಕೆ ಬಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಅನುಮತಿಯೇ ಇರಲಿಲ್ಲ ಎಂದು ತಿಳಿಸಿದರು.
Karnataka News Live 7 January 2026ಕೋಲಾರ - ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!
Karnataka News Live 7 January 2026ಚಿಟ್ಸ್ ಫಂಡ್ ಹೆಸರಲ್ಲಿ ಹತ್ತು ಕೋಟಿ ವಂಚಿಸಿದವ ಕೋರ್ಟ್‌ಗೆ ಬಂದಾಗ ಹಿಡಿದ ಗ್ರಾಹಕರು! ರಸ್ತೆಯಲ್ಲಿ ಮೆರವಣಿಗೆ ಶಿಕ್ಷೆ!
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ 'ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್' ಮಾಲೀಕ ಈಶ್ವರ ಚಿನ್ನಿಕಟ್ಟಿ, ಸಾರ್ವಜನಿಕರಿಗೆ ಸುಮಾರು 10 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಆತನನ್ನು, ಆಕ್ರೋಶಿತ ಗ್ರಾಹಕರು ಪೊಲೀಸ್ ವಾಹನದಿಂದಿಳಿಸಿ ಬೀದಿ ಮೆರವಣಿಗೆ ಮಾಡಿದರು.
Karnataka News Live 7 January 2026ಉತ್ತರಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ 'ಮಂಗನ ಕಾಯಿಲೆ' ಪತ್ತೆ; ಸಿದ್ದಾಪುರದಲ್ಲಿ ಹೈ ಅಲರ್ಟ್!
Karnataka News Live 7 January 2026ಅಧಿಕಾರ ಬಂದರೂ ಬದಲಾಗದ ಬದುಕು - ಇವರು ಶಾಸಕರು, ಪತ್ನಿ ಅಂಗನವಾಡಿ ಟೀಚರ್, ತಮ್ಮಂದಿರು ಗಾರೆ ಕೆಲಸಗಾರರು!
ಖಾನಾಪುರದ ಶಾಸಕ ವಿಠ್ಠಲ ಹಲಗೆಕರ್, ಗಣಿತ ಮೇಷ್ಟ್ರಾಗಿ ಒಂದು ರೂಪಾಯಿ ಶುಲ್ಕದಿಂದ ಸಾವಿರಾರು ಕೋಟಿಯ ಸ್ವಸಹಾಯ ಸಂಘ ಕಟ್ಟಿದವರು. ಅಧಿಕಾರವಿದ್ದರೂ ಅವರ ಪತ್ನಿ ಅಂಗನವಾಡಿ ಶಿಕ್ಷಕಿಯಾಗಿ, ಸಹೋದರರು ಗಾರೆ ಕೆಲಸಗಾರರಾಗಿ ಸ್ವತಃ ಇವರು ರೈತರಾಗಿ ಮುಂದುವರಿದಿದ್ದು, ಇವರ ಸರಳ ಜೀವನ ಸಮಾಜಕ್ಕೆ ಪ್ರೇರಣೆಯಾಗಿದೆ.
Karnataka News Live 7 January 2026'ನಿಮ್ಮ ಪ್ರೀತಿ ಸದಾ ಸ್ಮರಿಸುತ್ತೇನೆ..' ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಿಗೆ ಸಂದೇಶ ಕಳಿಸಿದ ರಾಕಿಂಗ್ ಸ್ಟಾರ್ ಯಶ್!
ನಟ ಯಶ್ ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ, ಈ ವರ್ಷದ ಜನ್ಮದಿನದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
Karnataka News Live 7 January 2026ಡಿಕೆಶಿಗೆ ಎಐಸಿಸಿ ಬಿಗ್ ಶಾಕ್ - ಮುಗಿಯಿತು ಸಿಎಂ ಕುರ್ಚಿ ಚರ್ಚೆ, ಅಸ್ಸಾಂ 'ವೀಕ್ಷಕ ಹುದ್ದೆ' ವರವೋ? ಶಾಪವೋ?
ಎಐಸಿಸಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಹಿರಿಯ ವೀಕ್ಷಕರ ಜವಾಬ್ದಾರಿ ನೀಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟದ ಚರ್ಚೆ ನಡೆಯುತ್ತಿರುವಾಗಲೇ ಈ ನೇಮಕಾತಿ ನಡೆದಿದ್ದು, ಸಿಎಂ ಚರ್ಚೆಗೆ ಹೈಕಮಾಂಡ್ ಹಾಕಿದ ಪೂರ್ಣವಿರಾಮವೇ ?
Karnataka News Live 7 January 2026ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೀಕರ ಅಗ್ನಿ ಅವಘಡ; ಲಾಂಡ್ರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಎಲೆಕ್ಟ್ರಾನಿಕ್ ಸಿಟಿಯ ಶಾಂತಿಪುರದಲ್ಲಿನ ಲಾಂಡ್ರಿ ಅಂಗಡಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಘಟನೆ ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯ.. ಅಗ್ನಿಶಾಮಕ ದಳವು ಬೆಂಕಿ ನಂದಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Karnataka News Live 7 January 2026ಚೇಸ್ ಮಾಡಿ ರಷ್ಯಾ ಧ್ವಜ ಹೊಂದಿದ್ದ ಹಡಗು ಸೀಜ್ ಮಾಡಿದ ಅಮೆರಿಕ!
Karnataka News Live 7 January 2026ಬೆಂಗಳೂರು ಮೆಟ್ರೋದಲ್ಲಿ 2 ಲಕ್ಷ ವೇತನದ ಉದ್ಯೋಗ! ಯಾರು ಅರ್ಜಿ ಸಲ್ಲಿಸಬಹುದು? ಇಂದೇ ಅರ್ಜಿ ಸಲ್ಲಿಸಿ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕಂಪನಿ ಕಾರ್ಯದರ್ಶಿ ಮತ್ತು ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಅಥವಾ ಸಿಎ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Karnataka News Live 7 January 2026Bengaluru Airport ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಆರಂಭಿಸಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!
ಬೆಂಗಳೂರು ವಿಮಾನ ನಿಲ್ದಾಣ ತನ್ನದೇ ಆದ ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಆರಂಭಿಸಿದೆ. ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಜೈವಿಕ ಅನಿಲ, ಗೊಬ್ಬರ ಉತ್ಪಾದನೆ ಮತ್ತು ಮರುಬಳಕೆಯ ಮೂಲಕ ಸುಸ್ಥಿರತೆ ಹಾಗೂ ವೃತ್ತಾಕಾರದ ಆರ್ಥಿಕತೆಯನ್ನು ಬಲಪಡಿಸುತ್ತಿದೆ.
Karnataka News Live 7 January 2026'ಗಂಡಸರ ಮನಸ್ಥತಿ ಕೂಡ ಅರ್ಥವಾಗಲ್ಲ, ಯಾವಾಗ ರೇ*ಪ್/ಕೊ*ಲೆ ಮಾಡ್ತಾನೋ ಗೊತ್ತಿಲ್ಲ..' ರಮ್ಯಾ ಹೀಗಂದಿದ್ಯಾಕೆ?
Karnataka News Live 7 January 2026ಅಬ್ಬಬ್ಬಾ! Bigg Boss ಗಿಲ್ಲಿ ಮೇಲೆ ಇದೆಂಥ ಆರೋಪ? ಇದೆಂಥ ಸಾಕ್ಷಿ? ಬಡವ ಎಂದು ಈ ಪರಿ ಹಣ ಸುರೀತಿರೋದು ನಿಜನಾ?
ಬಿಗ್ಬಾಸ್ 12ರ ಫೈನಲಿಸ್ಟ್ ಗಿಲ್ಲಿ ನಟನೇ ವಿನ್ನರ್ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ, ಅವರು ದುಬಾರಿ ಪಿಆರ್ ಏಜೆನ್ಸಿಯನ್ನು ನೇಮಿಸಿಕೊಂಡಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ತಮ್ಮನ್ನು ಬಡವ ಎಂದು ಬಿಂಬಿಸಿಕೊಂಡಿದ್ದ ನಟನ ಈ ನಡೆಯ ಬಗ್ಗೆ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.ಇದು ನಿಜನಾ?
Karnataka News Live 7 January 2026ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣ - ಕಮಿಷನರ್ ಎನ್ ಶಶಿಕುಮಾರ್ ಮಹತ್ವದ ಹೇಳಿಕೆ
ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಆರೋಪದ ಮೇಲೆ ತೀವ್ರ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ಸಂಬಂಧ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಡಿಸಿಪಿ ನೇತೃತ್ವದಲ್ಲಿ ಪಾರದರ್ಶಕ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ
Karnataka News Live 7 January 2026Bengaluru - 16ನೇ ಮಹಡಿಯಿಂದ ಬಿದ್ದು ಟೆಕ್ಕಿ ನಿಕ್ಷೇಪ್ ಬಂಗೇರಾ ಆ*ತ್ಮಹ*ತ್ಯೆ
ಬೆಂಗಳೂರಿನ ಬಾಗಲಗುಂಟೆಯಲ್ಲಿ 26 ವರ್ಷದ ಟೆಕ್ಕಿ ನಿಕ್ಷೇಪ್ ಬಂಗೇರಾ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದವರಾದ ಇವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ.
Karnataka News Live 7 January 2026ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರು ಬಲಿ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!
Karnataka News Live 7 January 2026Shivaleela Movie - ಸದನದಲ್ಲಿ ಚರ್ಚೆಯಾದ್ರೂ ಸಿಗ್ತಿಲ್ಲ ಚಿತ್ರಮಂದಿರ! ಚಪ್ಪಾಳೆ ತಟ್ಟಿದ್ರೆ ಮಾತ್ರ ನಿಮ್ಗೆ ಖುಷಿನಾ?
Karnataka News Live 7 January 2026'ದಿನಗಳು ಎಷ್ಟು ಬೇಗನೇ ಹೋಗುತ್ತಿದೆ..' ಕ್ಯೂಟಿ ಅಮ್ಮ ಪವಿತ್ರಾ ಗೌಡಗೆ ಬರ್ತ್‌ಡೇ ವಿಶ್ ಮಾಡಿದ ಮಗಳು ಖುಷಿ!
Pavithra Gowda Birthday: Daughter Khushi Shares Emotional Post from Jail ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗಳು ಖುಷಿ ಗೌಡ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Karnataka News Live 7 January 2026ಚಿಕ್ಕೋಡಿ - ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ
Karnataka News Live 7 January 2026ಸಿಎಂ ಸಿದ್ದರಾಮಯ್ಯ ಅರಸು ದಾಖಲೆ ಮುರಿದಿದ್ದಕ್ಕೆ ನಮಗೆಲ್ಲ ಹೆಮ್ಮೆ - ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿ ಪೂರೈಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ಎಂದ ಅವರು, ಅರಸು ದಾಖಲೆ ಮುರಿದ ಸಿದ್ದರಾಮಯ್ಯರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Karnataka News Live 7 January 2026ಜೆಡಿಎಸ್ ಕೋಟೆಯಲ್ಲಿ ದಳಪತಿಗಳ ದಂಡಯಾತ್ರೆ - ಹಾಸನ ವಶಕ್ಕೆ ದೇವೇಗೌಡರ ಸಮಾವೇಶ, ಅರಸೀಕೆರೆಗೆ ರೇವಣ್ಣ ಜಿಗಿತ!
2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಚ್.ಡಿ. ರೇವಣ್ಣ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಸೋಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.